x

ರಾಜ್ಯದಲ್ಲಿ ಹೆಚ್ಚುತ್ತಿರುವ ತಾಪಮಾನ ಕಾರಣ ವಿವರಿಸಿದ ವಿಜ್ಞಾನಿ ಸಿ.ಎಸ್. ಪಾಟೀಲ್

ರಾಜ್ಯದಲ್ಲಿ ದಿಢೀರ್ ಮಳೆ ಚತ್ತೊಂದೆಡೆ ತಾಪಮಾನ ಏರುತ್ತಿದೆ. ತಾಪಮಾನ ಏರಿಕೆ ಬಗ್ಗೆ ಹವಾಮಾನ ಇಲಾಖೆ ವಿಜ್ಞಾನಿ ಸಿ.ಎಸ್. ಪಾಟೀಲ್ ವಿವರಿಸಿದ್ದಾರೆ.


Click the Play button to hear this message in audio format

ಬೆಂಗಳೂರಿನಲ್ಲಿ ಸೋಮವಾರ ದಿಢೀರನೇ ಭಾರಿ ಮಳೆಯಾಗಿದ್ದು, ರಾಜ್ಯದ ಇತರೆ ಕೆಲ ಭಾಗಗಳಲ್ಲೂ ಅಕ್ಟೋಬರ್ ಮೊದಲ ವಾರ ಮಳೆಯಾಗಿದೆ. ಆದರೆ, ಒಂದೆಡೆ ಮಳೆಯಾಗುತ್ತಿದ್ದರೂ ಮತ್ತೊಂದೆಡೆ ಸುಡು ಬಿಸಿಲಿನ ತಾಪಮಾನ ಕೂಡ ಜನರನ್ನು ಹೈರಾಣಾಗಿಸುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮಳೆಯ ಪ್ರಮಾಣ ಹೇಗಿರಲಿದೆ? ಬಿಸಿಲಿನ ತಾಪಮಾನ ಮತ್ತಷ್ಟು ಹೆಚ್ಚಾಗಲಿದೆಯಾ? ಹವಾಮಾನದಲ್ಲಿನ ಈ ದಿಢೀರ್ ಬದಲಾವಣೆಗಳಿಗೆ ಕಾರಣವೇನು? ಈ ಎಲ್ಲಾ ಪ್ರಶ್ನೆಗಳಿಗೆ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಸಿ.ಎಸ್. ಪಾಟೀಲ್ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 6 ರಂದು ಹಗುರವಾಗಿ ಮಳೆಯಾಗುವ ಸಾಧ್ಯತೆ ಇದೆ. ಕೊಡುಗು ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಕ್ಟೋಬರ್ 7 ರಿಂದ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಹೇಳಿದರು. ಸಂಜೆ ವೇಳೆ ಗುಡುಗು ಸಹಿತ ಹಗುರವಾದ ‌ಮಳೆಯಾಗಲಿದೆ. ಆದರೆ ವಾಡಿಕೆಗಿಂತ ಮಳೆ ಪ್ರಮಾಣ ಭಾರಿ ಕಡಿಮೆಯಾಗಿದೆ ಎಂದು ತಿಳಿಸಿದರು

ಜೂನ್ ತಿಂಗಳಿನಿಂದ ಅಕ್ಟೋಬರ್ ವರೆಗೆ ಹೋಲಿಸಿದರೆ ಶೇಕಡಾ 30ರಿಂದ 40 ರಷ್ಟು ಮಳೆ ಕೊರತೆಯಿದೆ. ಉಷ್ಣಾಂಶದಲ್ಲೂ ಕೂಡ ದಿಢೀರ್ ಏರಿಕೆಯಾಗಿದೆ ಎಂದು ತಿಳಿಸಿದರು. ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಅಕ್ಟೋಬರ್ ತಿಂಗಳಲ್ಲಿ ಹೆಚ್ಚು ತಾಪಮಾನ ಏರಿಕೆ ಆಗಿರುವುದು ದಾಖಲೆಯಾಗಿದೆ ಎಂದು ಹೇಳಿದರು

ಮಳೆ ಪ್ರಮಾಣ ಕಡಿಮೆಯಾಗಿರುವುದು ಹಾಗು ನಗರಿಕರಣ ಹೆಚ್ಚಾದ ಹಿನ್ನೆಲೆಯಲ್ಲಿ ವಾತಾವರಣದಲ್ಲಿ ತಾಪಮಾನ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು. ವಾಡಿಕೆಗಿಂತ 2 ರಿಂದ 4 ಸೆಲ್ಸಿಯಸ್ ತಾಪಮಾನ ಹೆಚ್ಚಾಗಿದೆ ಎಂದು ಹೇಳಿದರು. ಮುಂದೆ ಬೇಸಿಗೆ ಕಾಲದಲ್ಲಿ ಇನ್ನೂ ತಾಪಮಾನ ಹೆಚ್ಚಾಗಲಿದ್ದು ಜನ ಎಚ್ಚರಿಕೆಯಿಂದರಬೇಕು ಎಂದು ಹೇಳಿದರು ಎಲ್ಲದಕ್ಕೂ ಮೂಲ ಕಾರಣ ಎನ್ ನಿನೋ. ವಾಯುಭಾರ ಕುಸಿತ ಕಡಿಮೆಯಾದ ಹಿನ್ನಲೆಯಲ್ಲಿ ಮಳೆಯಾಗಿಲ್ಲ ಎಂದು ತಿಳಿಸಿದರು.

Read More
Next Story