
ಬೆಂಗಳೂರಿನ ಬನಶಂಕರಿ, ಸುಬ್ರಹ್ಮಣ್ಯಪುರ ಸೇರಿ 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಅ.31ರಂದು ವಿದ್ಯುತ್ ವ್ಯತ್ಯಯವಾಗಲಿದೆ.
ಬೆಂಗಳೂರಿನ 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಅ.31ರಂದು ವಿದ್ಯುತ್ ಕಡಿತ; ಯಾವೆಲ್ಲ ಏರಿಯಾಗಳಲ್ಲಿ ಕರೆಂಟ್ ಇರಲ್ಲ?
ಬೆಂಗಳೂರಿನ ಬನಶಂಕರಿ, ಸುಬ್ರಹ್ಮಣ್ಯಪುರ ಸೇರಿ 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಅ.31ರಂದು ವಿದ್ಯುತ್ ವ್ಯತ್ಯಯವಾಗಲಿದೆ. ಯಾವೆಲ್ಲ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ? ಇಲ್ಲಿದೆ ಮಾಹಿತಿ.
ರಾಜಧಾನಿ ಬೆಂಗಳೂರಿನ ಹಲವು ಬಡಾವಣೆಗಳ ನಿವಾಸಿಗಳಿಗೆ ಅಕ್ಟೋಬರ್ 31ರಂದು ವಿದ್ಯುತ್ ವ್ಯತ್ಯಯದ ಬಿಸಿ ತಟ್ಟಲಿದೆ. ಬನಶಂಕರಿ ಮತ್ತು ಸುಬ್ರಹ್ಮಣ್ಯಪುರ ವಿದ್ಯುತ್ ಉಪಕೇಂದ್ರಗಳಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದ 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಕೆಲವು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಈ ಬಗ್ಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮಾಹಿತಿ ನೀಡಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಅಕ್ಟೋಬರ್ 31ರಂದು ಬನಶಂಕರಿ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ಮತ್ತೊಂದೆಡೆ, ಸುಬ್ರಹ್ಮಣ್ಯಪುರ ಉಪಕೇಂದ್ರದ ವ್ಯಾಪ್ತಿಯಲ್ಲಿ ಮಧ್ಯಾಹ್ನ 2ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ನಿರ್ವಹಣಾ ಕಾಮಗಾರಿ ಪೂರ್ಣಗೊಳ್ಳುವವರೆಗೆ ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.
ಬನಶಂಕರಿ ವ್ಯಾಪ್ತಿಯ ಈ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ
ಬನಶಂಕರಿ ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯಲ್ಲಿ ಕತ್ರಿಗುಪ್ಪೆ, ಕತ್ರಿಗುಪ್ಪೆ ವಾಟರ್ ಟ್ಯಾಂಕ್, ಸೀತಾ ಸರ್ಕಲ್, ಬ್ಯಾಂಕ್ ಕಾಲೋನಿ, ಬಾಲಾಜಿ ಲೇಔಟ್, ಐಟಿ ಲೇಔಟ್, ದ್ವಾರಕಾ ನಗರ, ವೀರಭದ್ರ ನಗರ, ಗಿರಿನಗರ, ವಿಎಚ್‌ಬಿಸಿ ಲೇಔಟ್, ಕತ್ರಿಗುಪ್ಪೆ ಮುಖ್ಯರಸ್ತೆ ಹಾಗೂ ಉತ್ತರಹಳ್ಳಿ ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಇದರೊಂದಿಗೆ ಚರ್ಚ್ ರಸ್ತೆ, ಶಾಂತಿನಿಕೇತನ ಶಾಲೆ ಸುತ್ತಮುತ್ತಲಿನ ಪ್ರದೇಶಗಳು, ಹೇಮಾವತಿ ವಾಟರ್ ಸಪ್ಲೈ ರಸ್ತೆ, ಗುಂಡು ಮುನೇಶ್ವರ ದೇವಸ್ಥಾನ ರಸ್ತೆ, ರಾಜಾ ಗಾರ್ಡೇನಿಯಾ, ಪಾದುಕಾ ಮಂದಿರ ರಸ್ತೆ, ಜೆಎಚ್‌ಬಿಸಿ ಲೇಔಟ್, ಎಂ.ಎಸ್. ಕೃಷ್ಣ ಮಿಲ್, ನಾಗಪ್ಪ ಲೇಔಟ್, ಮೋಳೆ ಫ್ಯಾಕ್ಟರಿ ರಸ್ತೆ ಮತ್ತು ಹಿಂದೂಸ್ತಾನ್ ಗ್ರಾನೈಟ್ ರಸ್ತೆ ಭಾಗಗಳಲ್ಲೂ ವಿದ್ಯುತ್ ವ್ಯತ್ಯಯವಾಗಲಿದೆ.
ಅಲ್ಲದೆ ಅಗರ್‌ಬತ್ತಿ ಫ್ಯಾಕ್ಟರಿ ರಸ್ತೆ, ಕೃಷ್ಣಪ್ಪ ಲೇಔಟ್, ಮಾರುತಿ ಲೇಔಟ್, ವಿಠ್ಠಲ್ ನಗರ ಹಾಗೂ ಸಮೃದ್ಧಿ ಲೇಔಟ್ ನಿವಾಸಿಗಳಿಗೂ ಬೆಳಗಿನ ಅವಧಿಯಲ್ಲಿ ವಿದ್ಯುತ್ ಕಡಿತದ ಸಮಸ್ಯೆ ಎದುರಾಗಲಿದೆ.
ಸುಬ್ರಹ್ಮಣ್ಯಪುರ ವ್ಯಾಪ್ತಿಯಲ್ಲಿ ಮಧ್ಯಾಹ್ನ 2ರಿಂದ ಪವರ್ ಕಟ್
ಸುಬ್ರಹ್ಮಣ್ಯಪುರ ವಿದ್ಯುತ್ ಉಪಕೇಂದ್ರದ ನಿರ್ವಹಣಾ ಕಾಮಗಾರಿಯಿಂದಾಗಿ ಕುಮಾರಸ್ವಾಮಿ ಲೇಔಟ್, ಯಡ್ಲಾ ನಗರ, ವಸಂತಪುರ ಸ್ಲಂ, ಕನಕ ಲೇಔಟ್, ಮಾರಸಂದ್ರ, ರಾಮಚಂದ್ರಪ್ಪ ಲೇಔಟ್, ಭುವನೇಶ್ವರಿ ನಗರ ಕೆಎಸ್‌ಡಿಪಿ ಕ್ವಾರ್ಟರ್ಸ್, ಗುಬ್ಬಲಾಳ, ಸ್ಪ್ರಿಂಗ್ ಲೇಔಟ್ ಹಾಗೂ ಸ್ವಾಮಿ ಪಾಳ್ಯ ರಸ್ತೆ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಇದರ ಜೊತೆಗೆ ಉತ್ತರಹಳ್ಳಿ, ಪ್ರತ್ಯಂಗಿರಾ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳು, ಬಿಎಚ್‌ಸಿಎಸ್ ಲೇಔಟ್, ಮಂಜುನಾಥ ನಗರ, ಕೆನರಾ ಬ್ಯಾಂಕ್ ಕಾಲೋನಿ, ಸಪ್ತಗಿರಿ ಲೇಔಟ್ ಮತ್ತು ಬಿಐಪಿಎಸ್ ಶಾಲೆಯ ಸುತ್ತಮುತ್ತಲಿನ ಬಡಾವಣೆಗಳಲ್ಲೂ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಕರೆಂಟ್ ಇರುವುದಿಲ್ಲ.
ಗೌಡನಪಾಳ್ಯ ಹಾಗೂ ಪ್ರೆಸ್ಟೀಜ್ ಲೇಕ್ ರಿಡ್ಜ್ ಸುತ್ತಮುತ್ತಲಿನ ನಿವಾಸಿಗಳಿಗೂ ಇದೇ ಅವಧಿಯಲ್ಲಿ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆಯಿದೆ.
