x

ಮೂಕಪ್ರಾಣಿಯ ನೋವಿಗೆ ಮಿಡಿದ ಬಿಎಂಟಿಸಿ ಚಾಲಕನ ಹೃದಯ

ಬೆಂಗಳೂರಿನ ಬಿಎಂಟಿಸಿ ಚಾಲಕ ಕೃಷ್ಣಮೂರ್ತಿ ಗಾಯಗೊಂಡ ನಾಯಿಯ ಚಿಕಿತ್ಸೆಗೆ 23,700 ರೂ. ಖರ್ಚು ಮಾಡಿ ಮೂಕಪ್ರಾಣಿಯ ಮೇಲಿನ ಪ್ರೀತಿ ಮತ್ತು ಮಾನವೀಯತೆ ಮೆರೆದಿದ್ದಾರೆ.


Click the Play button to hear this message in audio format

ಬೆಂಗಳೂರಿನ ಬಿಎಂಟಿಸಿ ಚಾಲಕ ಕೃಷ್ಣಮೂರ್ತಿ ಮೂಕಪ್ರಾಣಿಯ ಮೇಲಿನ ಪ್ರೀತಿ ಮತ್ತು ಮಾನವೀಯತೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕಾಲಿಗೆ ಗಾಯವಾಗಿ ನೋವಿನಿಂದ ಬಳಲುತ್ತಿದ್ದ ನಾಯಿಯೊಂದು ಚಾಲಕನ ಬಳಿ ಬಂದು ತನ್ನ ನೋವನ್ನು ತೋರಿಸಿದೆ. ಆರಂಭದಲ್ಲಿ ನಾಯಿಯ ವರ್ತನೆಯನ್ನು ಅರ್ಥಮಾಡಿಕೊಳ್ಳದ ಚಾಲಕ, ಬಳಿಕ ಅದರ ಕಾಲಿಗೆ ಗಾಯವಾಗಿರುವುದನ್ನು ಗಮನಿಸಿದ್ದಾರೆ. ಅಪಘಾತದಿಂದ ನಾಯಿಯ ಕಾಲು ಮುರಿದಿರುವುದನ್ನು ಅರಿತ ಅವರು, ಅದಕ್ಕೆ ಚಿಕಿತ್ಸೆ ಕೊಡಿಸಲು ನಿರ್ಧರಿಸಿದ್ದಾರೆ. ನಾಯಿಗೆ ಸಹಾಯ ಮಾಡುವ ಉದ್ದೇಶದಿಂದ ತಮ್ಮ ಗ್ರೂಪ್‌ನ ಸದಸ್ಯರ ಬಳಿ ತಲಾ 51 ರೂಪಾಯಿ ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ನಾಯಿಯ ಚಿಕಿತ್ಸೆಗಾಗಿ ಹಣ ಸಂಗ್ರಹಿಸುವುದರ ಜೊತೆಗೆ, ಅದರ ಆರೈಕೆಯ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಗಾಯಕ್ಕೆ ಚಿಕಿತ್ಸೆ ನೀಡಲು ಪ್ರಯತ್ನಿಸಿದಾಗ ನಾಯಿ ಓಡಿಹೋಗಿದ್ದು, ಎರಡು ದಿನಗಳ ಕಾಲ ಅದನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಈ ನಡುವೆ ನಾಯಿ ಆಹಾರ ಸೇವಿಸದೆ ನಿತ್ರಾಣಗೊಂಡಿತ್ತು. ಬಳಿಕ ಪರಿಚಿತರ ನೆರವಿನಿಂದ ನಾಯಿಯನ್ನು ಆಸ್ಪತ್ರೆಗೆ ದಾಖಲಿಸಿ, ಗ್ಲುಕೋಸ್ ನೀಡಿಸಿ, ಕಾಲಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.

Read More
Next Story