ಅಮೆಜಾನ್‌ ಲೈಸೆನ್ಸ್‌ ರಹಿತ ಗೋದಾಮುಗಳ ಮೇಲೆ ರೇಡ್‌; 4 ಲಕ್ಷ ರೂ. ಔಷಧ ಜಪ್ತಿ
x

ಅಮೆಜಾನ್‌ ಲೈಸೆನ್ಸ್‌ ರಹಿತ ಗೋದಾಮುಗಳ ಮೇಲೆ ರೇಡ್‌; 4 ಲಕ್ಷ ರೂ. ಔಷಧ ಜಪ್ತಿ

ಔಷಧಗಳ ಸಂಗ್ರಹಣೆ ಮತ್ತು ವಿತರಣೆಗೆ ಅಗತ್ಯವಿರುವ ಅನುಮತಿ ಹಾಗೂ ನಿಯಮಗಳನ್ನು ಪಾಲಿಸದಿರುವುದು ಕಾರ್ಯಾಚರಣೆಯ ವೇಳೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಯಮ ಉಲ್ಲಂಘನೆಗಳ ಕುರಿತು ಕಾನೂನು ಕ್ರಮ ಕೈಗೊಳ್ಳಲಾಗಿದೆ..


Click the Play button to hear this message in audio format

ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಔಷಧ ನಿಯಂತ್ರಣ ವಿಭಾಗವು ಬೆಂಗಳೂರಿನಲ್ಲಿ ಅಮೆಜಾನ್‌ಗೆ ಸೇರಿದ ಎರಡು ಲೈಸೆನ್ಸ್‌ ರಹಿತ ಸಂಗ್ರಹಣಾ ಘಟಕಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಅನುಮತಿ ಇಲ್ಲದೆ ಸಂಗ್ರಹಿಸಲಾಗಿದ್ದ ಸುಮಾರು 4.02 ಲಕ್ಷ ರೂ. ಮೌಲ್ಯದ ಔಷಧಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಔಷಧಗಳ ಸಂಗ್ರಹಣೆ ಮತ್ತು ವಿತರಣೆಯಲ್ಲಿ ನಿಯಮ ಉಲ್ಲಂಘನೆಯಾಗುತ್ತಿರುವ ಕುರಿತು ದೊರೆತ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಎಫ್‌ಡಿಎ ತಿಳಿಸಿದೆ. ಆನೇಕಲ್‌ ಮತ್ತು ದೇವನಹಳ್ಳಿಯಲ್ಲಿರುವ ಎರಡು ಘಟಕಗಳ ಮೇಲೆ ಅಧಿಕಾರಿಗಳು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

ಆನೇಕಲ್‌ನಲ್ಲಿ 2.45 ಲಕ್ಷ ರೂ. ಔಷಧ ಜಪ್ತಿ

ಆನೇಕಲ್‌ನ ಥಟ್ಟನಹಳ್ಳಿಯಲ್ಲಿರುವ ಅಮೆಜಾನ್ ಸೆಲ್ಲರ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ನ ಲೈಸೆನ್ಸ್‌ ರಹಿತ ಘಟಕದ ಮೇಲೆ ರಾಜ್ಯ ಗುಪ್ತಚರ ವಿಭಾಗದ ಸಹಾಯಕ ಔಷಧ ನಿಯಂತ್ರಕ ಮನೋಹರ್‌ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ 2.45 ಲಕ್ಷ ರೂ. ಮೌಲ್ಯದ ಔಷಧಗಳನ್ನು ಜಪ್ತಿ ಮಾಡಲಾಗಿದೆ.

ದೇವನಹಳ್ಳಿಯಲ್ಲಿ 1.57 ಲಕ್ಷ ರೂ. ಔಷಧ ವಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಔಷಧ ನಿರೀಕ್ಷಕಿ ವಿಭಾ ನೇತೃತ್ವದ ಮತ್ತೊಂದು ತಂಡ ದೇವನಹಳ್ಳಿಯ ಏರೋಸ್ಪೇಸ್‌ ಪಾರ್ಕ್‌ನಲ್ಲಿರುವ ಅಮೆಜಾನ್‌ನ ಲೈಸೆನ್ಸ್‌ ರಹಿತ ಘಟಕದ ಮೇಲೆ ದಾಳಿ ನಡೆಸಿದೆ. ಕಾರ್ಯಾಚರಣೆಯಲ್ಲಿ 1.57 ಲಕ್ಷ ರೂ. ಮೌಲ್ಯದ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ.

ಔಷಧಗಳ ಸಂಗ್ರಹಣೆ ಮತ್ತು ವಿತರಣೆಗೆ ಅಗತ್ಯವಿರುವ ಅನುಮತಿ ಹಾಗೂ ನಿಯಮಗಳನ್ನು ಪಾಲಿಸದಿರುವುದು ಕಾರ್ಯಾಚರಣೆಯ ವೇಳೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಯಮ ಉಲ್ಲಂಘನೆಗಳ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

Read More
Next Story