ಡ‌ಬ್ಲ್ಯುಪಿಎಲ್‌ 2024: ಉಭಯ ಹಸ್ತದ ಬೌಲರ್ ಫಾತಿಮಾ ಜಾಫರ್
x

ಡ‌ಬ್ಲ್ಯುಪಿಎಲ್‌ 2024: ಉಭಯ ಹಸ್ತದ ಬೌಲರ್ ಫಾತಿಮಾ ಜಾಫರ್


ಬೆಂಗಳೂರು, ಫೆ. 22 - ಮುಂಬೈ ಇಂಡಿಯನ್ಸ್ ಯುವ ಆಟಗಾರ್ತಿ ಫಾತಿಮಾ ಜಾಫರ್‌ ರಕ್ತದಲ್ಲಿ ಕ್ರಿಕೆಟ್‌ ಹರಿಯುತ್ತದೆ.

ಭಾರತದ ಮಾಜಿ ಆಟಗಾರ ಮತ್ತು ಮುಂಬೈ ಬ್ಯಾಟರ್ ವಾಸಿಂ ಜಾಫರ್ ಅವರ ಸೋದರ ಸೊಸೆ ಫಾತಿಮಾ, ಬೌಲಿಂಗ್ ಕಡೆಗೆ ಆಕರ್ಷಿತ ರಾದರು. ಅವರು ಅಪರೂಪದ ಎರಡೂ ಕೈಯಿಂದ ಚೆಂಡು ಎಸೆಯಬಲ್ಲರು- ಬಲಗೈ ಮಧ್ಯಮ ವೇಗ. ಅಗತ್ಯವಿದ್ದಲ್ಲಿ ಎಡಗೈ ಸ್ಪಿನ್ನರ್‌!

ʻನಾನು ಬಲಗೈ ವೇಗಿಯಾಗಿ ಮುಂಬೈ ತಂಡ ಪ್ರವೇಶಿಸಿದೆ. ಆದರೆ, ಮೊದಲ ಪಂದ್ಯದಲ್ಲಿ ಮೂವರು ಸ್ಪಿನ್ನರ್‌ಗಳು ಚೆಂಡು ಎಸೆಯುತ್ತಿದ್ದಾರೆ ಎಂಬ ಆರೋಪ ಹೊತ್ತು ಹೊರಹೋಗಬೇಕಾಯಿತು. ಈ ತಿರುವು ನನಗೆ ಬಾಗಿಲು ತೆರೆಯಿತುʼ ಎಂದು ಫಾತಿಮಾ MI ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದ್ದಾರೆ.

ʻನಾನು ಎಡಗೈ ಸ್ಪಿನ್ ಮೋಜಿಗಾಗಿ ಅಭ್ಯಾಸ ಮಾಡುತ್ತಿದ್ದೆ ಎಂದು ನನ್ನ ಕೋಚ್ ಗೆ ತಿಳಿದಿತ್ತು. ಅವರು ನನ್ನ ಬಳಿಗೆ ಬಂದು ಪಂದ್ಯದಲ್ಲಿ ಬೌಲ್ ಮಾಡಬಹುದೇ ಎಂದು ಕೇಳಿದರು. ಸ್ಪಿನ್ನರ್ ಆಗಿ ಬೌಲ್ ಮಾಡಿದ ಮೊದಲ ಪಂದ್ಯದಲ್ಲಿ ಮೂರು ವಿಕೆಟ್ ಪಡೆದೆ. ಮುಂದಿನ ಪಂದ್ಯದಲ್ಲಿ ಐದು ವಿಕೆಟ್ ಪಡೆದೆʼ ಎಂದು ಹೇಳಿದರು.

ʻಇದಕ್ಕಾಗಿ ಸಾಕಷ್ಟು ಅಭ್ಯಾಸ ಮಾಡಬೇಕಾಗುತ್ತದೆ. ಡ‌ಬ್ಲ್ಯುಪಿಎಲ್‌ 2023 ರಲ್ಲಿ ಮುಂಬೈ ಇಂಡಿಯನ್‌ ತಂಡಕ್ಕೆ ನೆಟ್ ಬೌಲರ್ ಆಗಿದ್ದೆʼ ಎಂದು ಫಾತಿಮಾ ಹೇಳಿದರು.

ಅವರ ತಂದೆ ಕಲೀಂ ಜಾಫರ್‌, ಹೆಸರಾಂತ ಕೋಚ್.‌ ʻಕ್ರಿಕೆಟ್ ಆಡಲು ಪ್ರಾರಂಭಿಸಿದಾಗ ನನಗೆ ಏಳು ಅಥವಾ ಎಂಟು ವರ್ಷ ಇರಬಹುದು. ಇದು ನನ್ನ ತಂದೆಯ ನಿರ್ಧಾರವಾಗಿತ್ತು. ಕುಟುಂಬದಿಂದ ಒಬ್ಬ ಹುಡುಗಿ ಕ್ರಿಕೆಟ್ ಆಡಬೇಕೆಂದು ಅವರು ಬಯಸಿದ್ದರುʼ ಎಂದು ಫಾತಿಮಾ ಹೇಳಿದರು.

ʻತಂದೆ ಕಲೀಂ ಜಾಫರ್ ಮತ್ತು ಕೋಚ್ ಕಲೀಂ ಜಾಫರ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಾವು ಮನೆಯಲ್ಲಿ ಕ್ರಿಕೆಟ್ ಬಗ್ಗೆ ಮಾತ್ರ ಚರ್ಚಿಸುತ್ತೇವೆʼ ಎಂದು ಹೇಳಿದರು.

Read More
Next Story