Paris Olympics 2024| ವಿನೇಶ್ ಅನರ್ಹತೆ: ಯುಡಬ್ಲ್ಯುಡಬ್ಲ್ಯುಗೆ ಮೇಲ್ಮನವಿ- ಪಿ.ಟಿ. ಉಷಾ
2024 ರ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸುವುದರ ವಿರುದ್ಧ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಗೆ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮೇಲ್ಮನವಿ ಸಲ್ಲಿಸಿದೆ ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿ.ಟಿ. ಉಷಾ ಬುಧವಾರ (ಆಗಸ್ಟ್ 7) ತಿಳಿಸಿದ್ದಾರೆ.
ಮಹಿಳೆಯರ 50 ಕೆಜಿ ವಿಭಾಗದ ಫೈನಲ್‌ನಲ್ಲಿ 100 ಗ್ರಾಂ ಅಧಿಕ ತೂಕ ಹೊಂದಿರುವ ಕಾರಣ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿತ್ತು.
ಐಒಎ ವಿನೇಶ್‌ಗೆ ಎಲ್ಲ ಬೆಂಬಲ ನೀಡುತ್ತಿದೆ ಮತ್ತು ಯುಡಬ್ಲ್ಯುಡಬ್ಲ್ಯು ನೀಡಿದ ಮನವಿಯನ್ನು ಸಾಧ್ಯವಾದ ರೀತಿಯಲ್ಲಿ ಅನುಸರಿಸುತ್ತಿದೆ ಎಂದು ಉಷಾ ತಿಳಿಸಿದ್ದಾರೆ. ಉಷಾ ಅವರು ಒಲಿಂಪಿಕ್ಸ್ ಗ್ರಾಮದಲ್ಲಿ ವಿನೇಶ್ ಅವರನ್ನು ಭೇಟಿಯಾಗಿದ್ದು, ಐಒಎ ಮತ್ತು ಭಾರತ ಸರ್ಕಾರದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು.
Next Story