Paris Olympics 2024| ವಿನೇಶ್ ಅನರ್ಹತೆ: ರದ್ದುಗೊಳಿಸಲು ಸಕಲ ಪ್ರಯತ್ನಕ್ಕೆ ಪ್ರಧಾನಿ ಸೂಚನೆ
x

Paris Olympics 2024| ವಿನೇಶ್ ಅನರ್ಹತೆ: ರದ್ದುಗೊಳಿಸಲು ಸಕಲ ಪ್ರಯತ್ನಕ್ಕೆ ಪ್ರಧಾನಿ ಸೂಚನೆ


ಕುಸ್ತಿಪಟು ವಿನೇಶ್ ಫೋಗಟ್ ಅವರ ಅನರ್ಹತೆಯನ್ನು ರದ್ದುಗೊಳಿಸಲು ಮಾರ್ಗೋಪಾಯಗಳನ್ನು ಅನ್ವೇಷಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಗೆ ಒತ್ತಾಯಿಸಿದ್ದಾರೆ.

ವಿನೇಶ್ ಪ್ರಕರಣದಲ್ಲಿ ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಬಳಸುವಂತೆ ಮೋದಿ ಅವರು ಐಒಎ ಅಧ್ಯಕ್ಷೆ ಪಿ.ಟಿ. ಉಷಾ ಅವರನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.

ʻವಿನೇಶ್ ಚಾಂಪಿಯನ್‌ಗಳ ಚಾಂಪಿಯನ್ʼ ಎಂದು ಎಕ್ಸ್‌ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, ಅವರ ಅನರ್ಹತೆ ನೋವುಂಟು ಮಾಡುತ್ತದೆ ಎಂದು ಹೇಳಿದರು.

ʻವಿನೇಶ್, ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್! ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ. ಇಂದಿನ ಹಿನ್ನಡೆ ನೋವು ತಂದಿದೆ. ನನ್ನ ಹತಾಶೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಆಗುವುದಿಲ್ಲ. ನೀವು ಪುಟಿದೇಳುತ್ತೀರಿ ಎಂದು ನನಗೆ ತಿಳಿದಿದೆ. ಸವಾಲುಗಳನ್ನು ಎದುರಿಸುವುದು ನಿಮ್ಮ ಸ್ವಭಾವ,ʼ ಎಂದು ಬರೆದಿದ್ದಾರೆ.

ಫೈನಲ್‌ನಲ್ಲಿ ಅಮೆರಿಕದ ಸಾರಾ ಆನ್ ಹಿಲ್ಡೆಬ್ರಾಂಡ್ ಅವರನ್ನು ಎದುರಿಸಬೇಕಿದ್ದ ವಿನೇಶ್‌, ಈಗ ಯಾವುದೇ ಪದಕವಿಲ್ಲದೆ ವಾಪಸಾಗಲಿದ್ದಾರೆ.

Read More
Next Story