
WPL 2026 ಆರಂಭ: ಇಂದು ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿ!
ನಾಲ್ಕನೇ ಆವೃತ್ತಿ ಮಹಿಳಾ ಪ್ರಿಮಿಯರ್ ಲೀಗ್‌ನಲ್ಲಿ 2023 ಹಾಗೂ 2025ರಲ್ಲಿ ಎರಡು ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿದ್ದು, 2024 ರಲ್ಲಿ ಆರ್‌ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಏಕದಿನ ವಿಶ್ವಕಪ್ ಗೆದ್ದು ಬೀಗಿದ್ದ ಭಾರತ ಮಹಿಳಾ ತಂಡದ ಆಟಗಾರ್ತಿಯರು ಇದೀಗ ಪ್ರಬಲ ಪ್ರತಿಸ್ಪರ್ಧಿಗಳ ವಿರುದ್ಧ ಬ್ಯಾಟ್ ಬೀಸಲಿದ್ದಾರೆ. ವರ್ಷದ ಆರಂಭದಲ್ಲೇ ಭಾರತದ ಕ್ರಿಕೆಟ್ ಪ್ರೇಮಿಗಳಿಗೆ "ಜ್ವರ" ಹೆಚ್ಚಿಸುವ ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಶುಕ್ರವಾರ ಸಂಜೆಯಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಎದುರಾಗಲಿದ್ದು, ಮೊದಲ ಜಯ ಸಾಧಿಸಲು ಹೋರಾಡಲಿದ್ದಾರೆ.
ಉದ್ಘಾಟನಾ ಪಂದ್ಯಕ್ಕೆ ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದು, ಮೊದಲ ಪಂದ್ಯದಲ್ಲೇ ಹರ್ಮನ್ ಪ್ರಿತ್ ನಾಯಕತ್ವದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಹಾಗೂ ಸ್ಮೃತಿ ಮಂಧಾನ ನಾಯಕತ್ವದ ಮಾಜಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವಿನ ಮೊದಲ ಪಂದ್ಯವೇ ಅಭಿಮಾನಿಗಳಲ್ಲಿ ರೋಚಕ ಹಾಗೂ ತೀವ್ರ ಕೂತೂಹಲ ಮೂಡಿಸಿದೆ.
ನಾಲ್ಕನೇ ಆವೃತ್ತಿ ಮಹಿಳಾ ಪ್ರಿಮಿಯರ್ ಲೀಗ್‌ನಲ್ಲಿ 2023 ಹಾಗೂ 2025ರಲ್ಲಿ ಎರಡು ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿದ್ದು, 2024 ರಲ್ಲಿ ಆರ್‌ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಕಳೆದ ಮೂರು ಆವೃತ್ತಿಗಳಲ್ಲಿ ರನ್ನರ್ ಅಪ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ಈ ಬಾರಿ ಚಾಂಪಿಯನ್ ಆಗುವ ಅವಕಾಶವಿದೆ.
ಕಳೆದ ನವೆಂಬರ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅತ್ಯಂತ ದುಬಾರಿ ಆಟಗಾರ್ತಿಯಾಗಿ ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರಿಗೆ 3.2 ಕೋಟಿ ರೂ. ನೀಡಿ ಯುಪಿ ವಾರಿಯರ್ಸ್ ತನ್ನಲ್ಲೇ ಉಳಿಸಿಕೊಂಡಿತ್ತು. ಏಕದಿನ ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ದೀಪ್ತಿ ಈ ಬಾರಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಬಹುದಾಗಿದೆ.
ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್
ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣ ಹಾಗೂ ವಡೋದರದಲ್ಲಿ ಈ ಬಾರಿ ಡ್ಬ್ಲೂಪಿಎಲ್ ಪಂದ್ಯಗಳನ್ನು ಆಯೋಜಿಸಲಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೆಂಟ್ಸ್ ಹಾಗೂ ಯು.ಪಿ. ವಾರಿಯರ್ಸ್ ತಂಡಗಳಲ್ಲಿ ಯಾರು ಚಾಂಪಿಯನ್ ಆಗಲಿದ್ದಾರೆ ಎಂಬುದು ಕೂತೂಹಲಕ್ಕೆ ಕಾರಣವಾಗಿದೆ.
ಆತಿಥ್ಯ ತಪ್ಪಿಸಿಕೊಂಡ ಬೆಂಗಳೂರು
ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ ಮೂರು ಆವೃತ್ತಿಯಲ್ಲಿನ ಡ್ಬ್ಲೂಪಿಎಲ್ ಪಂದ್ಯಗಳಿಗೆ ಉತ್ತಮ ಯಶಸ್ಸು ಸಿಕ್ಕಿತ್ತು. ಆಡಿದ ಎಲ್ಲಾ ಪಂದ್ಯಗಳಿಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುವ ಮೂಲಕ ಆರ್‌ಸಿಬಿ ಸೇರಿದಂತೆ ಎಲ್ಲಾ ಆಟಗಾರ್ತಿಯರನ್ನು ಹುರಿದುಂಬಿಸಿದ್ದರು. ಆದರೆ ಕಳೆದ ವರ್ಷ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದರು. ಇದರಿಂದ ದೇಶಿಯ ಹಾಗೂ ಅಂತರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯ ನೀಡಲು ರಾಜ್ಯ ಸರ್ಕಾರ ಅನುಮತಿ ನೀಡದಿರುವ ಕಾರಣ ಇದೀಗ ಡ್ಬ್ಲೂಪಿಎಲ್ ಪಂದ್ಯಗಳೂ ನಡೆಯದಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದೆ.
ಪಂದ್ಯಗಳ ವೇಳಾಪಟ್ಟಿ
ಜನವರಿ 9 ರಿಂದ ಆರಂಭವಾಗುವ ಪಂದ್ಯಗಳು ಫೆ.5ರವರೆಗೂ ನಡೆಯಲ್ಲಿದ್ದು, ಆರಂಭದ 11 ಪಂದ್ಯಗಳು ನವಿಮುಂಬೈನಲ್ಲಿ ಹಾಗೂ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಸೇರಿದಂತೆ 11 ಪಂದ್ಯಗಳು ವಡೋದರದಲ್ಲಿ ನಡೆಯಲಿವೆ.
ನವಿ ಮುಂಬೈನಲ್ಲಿ ನಡೆಯುವ ಪಂದ್ಯಗಳು
ಜ. 9 (ಶುಕ್ರವಾರ): ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸಂಜೆ 7:30 IST)
ಜ. 10 (ಶನಿವಾರ): ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್ (ಸಂಜೆ 3:00 IST) ಹಾಗೂ ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್ (ಸಂಜೆ 7:30 IST)
ಜ. 11 (ಭಾನುವಾರ): ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್ (ಸಂಜೆ 7:30 IST)
ಜ. 12 (ಸೋಮವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಯುಪಿ ವಾರಿಯರ್ಸ್ (ಸಂಜೆ 7:30 IST)
ಜ. 13 (ಮಂಗಳವಾರ): ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್ (ಸಂಜೆ 7:30 IST)
ಜ. 14 (ಬುಧವಾರ): ಯುಪಿ ವಾರಿಯರ್ಸ್ vs ದೆಹಲಿ ಕ್ಯಾಪಿಟಲ್ಸ್ (ಸಂಜೆ 7:30 IST)
ಜ. 15 (ಗುರುವಾರ): ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್ (ಸಂಜೆ 7:30 IST)
ಜ. 16 (ಶುಕ್ರವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್ (ಸಂಜೆ 7:30 IST)
ಜ. 17 (ಶನಿವಾರ): ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್ (ಸಂಜೆ 3:00 IST), ದೆಹಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸಂಜೆ 7:30 IST)
ವಡೋದರಾ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳು
ಜ. 19 (ಸೋಮವಾರ): ಗುಜರಾತ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸಂಜೆ 7:30 IST)
ಜ. 20 (ಮಂಗಳವಾರ): ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ (ಸಂಜೆ 7:30 IST)
ಜ. 22 (ಗುರುವಾರ): ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಜ್ (ಸಂಜೆ 7:30 IST)
ಜ. 24 (ಶನಿವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್ (ಸಂಜೆ 7:30 IST)
ಜ. 26 (ಸೋಮವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ (ಸಂಜೆ 7:30 IST)
ಜ. 27 (ಮಂಗಳವಾರ): ಗುಜರಾತ್ ಜೈಂಟ್ಸ್ vs ದೆಹಲಿ ಕ್ಯಾಪಿಟಲ್ಸ್ (ಸಂಜೆ 7:30 IST)
ಜ. 29 (ಗುರುವಾರ): ಯುಪಿ ವಾರಿಯರ್ಜ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸಂಜೆ 7:30 IST)
ಜ.30 (ಶುಕ್ರವಾರ): ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ (7:30 PM IST)
ಫೆ. (ಭಾನುವಾರ): ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್ (7:30 PM IST)
ನಾಕೌಟ್ಸ್ ಪಂದ್ಯಗಳು
ಫೆ. 3 (ಮಂಗಳವಾರ): ಎಲಿಮಿನೇಟರ್ - 2 ನೇ ಸ್ಥಾನ vs 3 ನೇ ಸ್ಥಾನ (7:30 PM IST)
ಫೆ. 5 (ಗುರುವಾರ): ಫೈನಲ್ - 1 ನೇ ಸ್ಥಾನ vs ಎಲಿಮಿನೇಟರ್ ವಿಜೇತ (7:30 PM IST)

