
ರೋಹಿತ್ ಶರ್ಮಾ ಭಾರತ ತಂಡದ ನಿಜವಾದ ಹೀರೋ: ನಾಸರ್ ಹುಸೇನ್
ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅವರು ನಿರ್ಭೀತಿಯಿಂದ ಆಟ ಆಡುವ ಮೂಲಕ "ನಿಜವಾದ ಹೀರೋ" ಎನಿಸಿದ್ದಾರೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸರ್ ಹುಸೇನ್ ಶ್ಲಾಘಿಸಿದ್ದಾರೆ.
ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅವರು ನಿರ್ಭೀತಿಯಿಂದ ಆಟ ಆಡುವ ಮೂಲಕ "ನಿಜವಾದ ಹೀರೋ" ಎನಿಸಿದ್ದಾರೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸರ್ ಹುಸೇನ್ ಶ್ಲಾಘಿಸಿದ್ದಾರೆ.
ಕಳೆದ ಎರಡು ಟಿ-20 ವಿಶ್ವಕಪ್‌ಗಳಲ್ಲಿ ಭಾರತವು ಭಯದಲ್ಲಿ ಆಟವಾಡಿದ್ದರಿಂದ ಸೋಲುಗಳನ್ನು ಎದುರಿಸಿತ್ತು, 2021 ರಲ್ಲಿ ಭಾರತ ತಂಡಕ್ಕೆ ಸೂಪರ್-12 ಹಂತಗಳನ್ನು ಕೂಡ ದಾಟಲು ಸಾಧ್ಯವಾಗಲಿಲ್ಲ ಮತ್ತು ಕಳೆದ ಆವೃತ್ತಿಯಲ್ಲಿ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಸೋತರು.
ಈ ಬಾರಿಯ ವಿಶ್ವಕಪ್‌ನಲ್ಲಿ ಗೆಲುವಿನ ಓಟ ಮುಂದುವರಿಸುವ ಮೂಲಕ ಭಾರತ ತಂಡ ಸೋಲುಗಳನ್ನೇ ಕಾಣದೆ ಫೈನಲ್ಸ್ ತಲುಪಿತು. ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 70 ರನ್‌ಗಳಿಂದ ಭರ್ಜರಿ ಗೆಲುವು ಕಂಡಿತು.
“ನಾಳೆ ಸುದ್ದಿ ಪತ್ರಿಕೆಗಳ ಹೆಡ್ಲೈನ್‌ಗಳಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಮೊಹಮ್ಮದ್ ಶಮಿ ಬಗ್ಗೆ ಇರುತ್ತದೆ. ಆದರೆ ಈ ಭಾರತೀಯ ತಂಡದ ನಿಜವಾದ ನಾಯಕ, ಈ ಭಾರತೀಯ ತಂಡದ ಸಾಂಪ್ರದಾಯವನ್ನು ಬದಲಾಯಿಸಿದ್ದು ರೋಹಿತ್ ಶರ್ಮಾʼʼಎಂದು ಹುಸೇನ್ ಹೇಳಿದರು.
"ಅಡಿಲೇಡ್‌ನಲ್ಲಿ ನಡೆದ ಟಿ-20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಭಾರತ ತಂಡ ಭಯದಲ್ಲೇ ಆಟವಾಡಿತು. ಆ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್ಸ್‌ಮನ್ ದಿನೇಶ್ ಕಾತಿಕ್ ತಂಡದೊಂದಿಗೆ ಇದ್ದರು, ಅವರು ಕೂಡ ಸೌಮ್ಯವಾಗಿ ಹೆದರಿಕೊಂಡಂತೆ ಆಟ ಆಡಿದರು. ಭಾರತ ತಂಡ ಆ ಪಂದ್ಯದಲ್ಲಿ ಕಡಿಮೆ ಸ್ಕೋರ್ ಗಳಿಸಿತು. ಆ ಕಡಿಮೆ ಸ್ಕೋರ್‌ನ್ನು ಬೆನ್ನಟ್ಟಿದ ಇಂಗ್ಲೆಂಡ್ ಅವರನ್ನು 10 ವಿಕೆಟ್‌ಗಳಿಂದ ಗೆಲುವು ಕಂಡಿತು.
ಈ ಬಾರಿಯ ವಿಶ್ವಕಪ್ ಸಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆಯ 50ನೇ ಶತಕ ಮತ್ತು ಶ್ರೇಯಸ್ ಅಯ್ಯರ್ ಅವರು 70 ಎಸೆತಗಳಲ್ಲಿ 105 ರನ್ ಗಳಿಸುವ ಮೂಲಕ ಭಾರತ ತಂಡ ಸೆಮಿಫೈನಲ್ಲಿ ಗೆಲುವು ಕಾಣಲು ಪ್ರಮುಖ ಪಾತ್ರ ವಹಿಸಿದರು. ಭಾರತವು 4 ವಿಕೆಟ್‌ಗೆ 397 ರನ್ ಗಳಿಸಿತು ಮತ್ತು ಮೊಹಮ್ಮದ್ ಶಮಿ ಅವರು 7 ವಿಕೆಟ್ ಪಡೆದರು. ನ್ಯೂಜಿಲೆಂಡ್ ತಂಡ 327 ಕ್ಕೆ ಆಲೌಟ್ ಆಯಿತು.
ಭಾರತದ ಆರಂಭಿಕ ಆಟಗಾರ ರೋಹಿತ್ ತನ್ನ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ತಂಡಕ್ಕೆ ಅಡಿಪಾಯ ಹಾಕುತ್ತ ಬಂದಿದ್ದಾರೆ. ವಿಶ್ವಕಪ್‌ನ ಪ್ರತಿ ಪಂದ್ಯದಲ್ಲೂ ಸ್ಪೋಟಕ ಬ್ಯಾಟಿಂಗ್ ಆಡಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಅವರು 29 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳ ನೆರವಿನಿಂದ 47 ರನ್ ಗಳಿಸಿ ಭಾರತಕ್ಕೆ ಆರಂಭ ನೀಡಿದರು. ಇಂದು ನಿಜವಾದ ನಾಯಕನ ಆಟ ಎಂದು ನಾನು ಭಾವಿಸುತ್ತೇನೆ ಎಂದು ಹುಸೇನ್ ಹೇಳಿದರು.