Paris Olympics 2024 | ಶ್ರೀಜಾ ಅಕುಲಾ ಪ್ರಿ-ಕ್ವಾರ್ಟರ್‌ ಫೈನಲ್‌ಗೆ
x

Paris Olympics 2024 | ಶ್ರೀಜಾ ಅಕುಲಾ ಪ್ರಿ-ಕ್ವಾರ್ಟರ್‌ ಫೈನಲ್‌ಗೆ

ಶೃೀಜಾ ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದು, ಜೂನ್‌ನಲ್ಲಿ ಲಾಗೋಸ್‌ನಲ್ಲಿ ಸಿಂಗಲ್ಸ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 2022 ರಲ್ಲಿ ಬರ್ಮಿಂಗ್‌ ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶರತ್ ಕಮಲ್ ಅವರೊಂದಿಗೆ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.


ಪ್ಯಾರಿಸ್, ಜು.31- ಮಹಿಳಾ ಸಿಂಗಲ್ಸ್ ಸುತ್ತಿನ ಪಂದ್ಯದಲ್ಲಿ ಸಿಂಗಾಪುರದ ಜಿಯಾನ್ ಝೆಂಗ್ ವಿರುದ್ಧ 4-2 ಅಂಕಗಳಿಂದ ಕಠಿಣ ಹೋರಾಟದ ನಂತರ ಶ್ರೀಜಾ ಅಕುಲಾ ಪ್ರೀ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು.

ತಮ್ಮ 26 ನೇ ಹುಟ್ಟುಹಬ್ಬದಂದು, ಶ್ರೀಜಾ 9-11 12-10 11-4 11-5 10-12 12-10 ಪಂದ್ಯವನ್ನು ಗೆದ್ದು ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಸಹಯಾತ್ರಿ ಮನಿಕಾ ಬಾತ್ರಾ ಅವರನ್ನು ಸೇರಿಕೊಂಡರು. ಇದು ಭಾರತೀಯ ಟೇಬಲ್ ಟೆನಿಸ್ ಇತಿಹಾಸದಲ್ಲಿ ಅಭೂತಪೂರ್ವ ಸಾಧನೆಯಾಗಿದೆ.

ಆರಂಭಿಕ ಪಂದ್ಯದಲ್ಲಿ ಸೋತ ಅವರು, 51 ನಿಮಿಷಗಳ ಕಾಲ ನಡೆದ ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮಲು ಕಠಿಣ ಹೋರಾಟ ನಡೆಸಿಡಿದರು.ಶ್ರೀಜಾ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ವಿಶ್ವದ ನಂಬರ್ ಒನ್ ಆಟಗಾರ್ತಿ ಸನ್ ಯಿಂಗ್ಶಾ ವಿರುದ್ಧ ಸೆಣಸಲಿದ್ದಾರೆ.

ಬಾತ್ರಾ ಸೋಮವಾರ ಪ್ರೀ ಕ್ವಾರ್ಟರ್‌ಗೆ ತಲುಪಿದ್ದರು.

ಮೊದಲ ಗೇಮ್‌ ಕಳೆದುಕೊಂಡ ನಂತರ, ಶ್ರೀಜಾ ಎರಡನೆಯದನ್ನು ಗೆದ್ದು ಸಮಗೊಳಿಸಿದರು. ಅದೃಷ್ಟ ಅವರ ಪರವಿತ್ತು. ಇದರಿಂದ ಆತ್ಮವಿಶ್ವಾಸ ಗಳಿಸಿದ ಶ್ರೀಜಾ, ಮೂರನೇ ಗೇಮ್ ಅನ್ನು ಸುಲಭವಾಗಿ ಕೈವಶ ಮಾಡಿಕೊಂಡಳು. ನಾಲ್ಕನೇ ಗೇಮ್‌ ಕೂಡ ಹೆಚ್ಚು ಕಷ್ಟವಿಲ್ಲದೆ ಗೆದ್ದರು. ಸಿಂಗಾಪುರದ ಆಟಗಾರ್ತಿ ಸ್ವಲ್ಪ ಪ್ರತಿರೋಧ ಒಡ್ಡಿ , ಐದನೇ ಗೇಮ್ ಅನ್ನು ಪಡೆದರು. ಆರನೇ ಗೇಮ್‌ನಲ್ಲಿ ಶ್ರಮವಹಿಸಿ ಗೆಲುವು ಸಾಧಿಸಿದರು.

ಕಳೆದ ತಿಂಗಳು ಶ್ರೀಜಾಗೆ ವೃತ್ತಿಜೀವನದ ಉನ್ನತ ವಿಶ್ವ ಶ್ರೇಯಾಂಕ, 24 ನೇ ಸ್ಥಾನ ಲಭಿಸಿತು. ಬಾತ್ರಾ ಅವರನ್ನು ಅಗ್ರ ಮಹಿಳಾ ಸಿಂಗಲ್ಸ್ ಆಟಗಾರ್ತಿ ಸ್ಥಾನದಿಂದ ಪಲ್ಲಟಗೊಳಿಸಿದರು. ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಶ್ರೀಜಾ, ಜೂನ್‌ನಲ್ಲಿ ಲಾಗೋಸ್‌ನಲ್ಲಿ ಸಿಂಗಲ್ಸ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 2022 ರ ಬರ್ಮಿಂಗ್‌ ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶರತ್ ಕಮಲ್ ಅವರೊಂದಿಗೆ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು.

Read More
Next Story