Paris Olympics 2024| ಬಿಲ್ಲುಗಾರಿಕೆ: 32ನೇ ಸುತ್ತು ಪ್ರವೇಶಿಸಿದ  ದೀಪಿಕಾ ಕುಮಾರಿ
x

Paris Olympics 2024| ಬಿಲ್ಲುಗಾರಿಕೆ: 32ನೇ ಸುತ್ತು ಪ್ರವೇಶಿಸಿದ ದೀಪಿಕಾ ಕುಮಾರಿ


ಪ್ಯಾರಿಸ್, ಜು.31- ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಭಾರತದ ಪ್ರಮುಖ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರು ಎಸ್ಟೋನಿಯಾದ ರೀನಾ ಪರ್ನಾತ್ ಅವರನ್ನು 6-5 ರಿಂದ ಸೋಲಿಸಿ 32 ರ ಸುತ್ತಿಗೆ ಪ್ರವೇಶಿಸಿದರು.

ಆರ್ಚರಿ ತಂಡದ ಅಭಿಯಾನ ನಿರಾಶಾದಾಯಕವಾಗಿದ್ದು, ದೀಪಿಕಾ ಮುಂದಿನ ಪಂದ್ಯದಲ್ಲಿ ನೆದರ್ಲೆಂಡ್ಸ್‌ನ ಕ್ವಿಂಟಿ ರೋಫೆನ್ ಅವರನ್ನು ಎದುರಿಸಲಿದ್ದಾರೆ.

ದೀಪಿಕಾ ಮೊದಲ ಸೆಟ್ ಗೆದ್ದರೂ, ನಂತರದ ಸೆಟ್‌ನಲ್ಲಿ ಸೋಲನುಭವಿಸಿದರು. ಮೂರನೇ ಸೆಟ್‌ನಲ್ಲಿ 3-5 ರಿಂದ ಹಿನ್ನಡೆಯಲ್ಲಿದ್ದರು. ಆದರೆ, ಎಲ್ಲ ಮೂರು ಬಾಣಗಳನ್ನು 10 ಸೆಕೆಂಡ್‌ಗಳಲ್ಲಿ ಹೊಡೆಯುವ ಮೂಲಕ 5-5 ರ ಸಮಬಲ ಸಾಧಿಸಿದರು. ಎದುರಾಳಿಯ 8 ಅಂಕಗಳಿಗೆ ಪ್ರತಿಯಾಗಿ 9 ಅಂಕ ಗಳಿಸಿ, ಗೆದ್ದರು.

Read More
Next Story