Paris Olympics 2024 | ಕಂಚಿನ ಹಾದಿಯಲ್ಲಿ ಮನು ಭಾಕರ್-ಸರಬ್ಜೋತ್ ಸಿಂಗ್
x

Paris Olympics 2024 | ಕಂಚಿನ ಹಾದಿಯಲ್ಲಿ ಮನು ಭಾಕರ್-ಸರಬ್ಜೋತ್ ಸಿಂಗ್

ಪ್ಯಾರಿಸ್‌ ಒಲಿಂಪಿಕ್ಸ್‌ ನ ಟೆನಿಸ್ ಸ್ಪರ್ಧೆಯ ಪುರುಷರ ಡಬ‌ಲ್ಸ್‌ ನ ಆರಂಭಿಕ ಸುತ್ತಿನಲ್ಲಿ ಸೋತ ನಂತರ ಇನ್ನು ಮುಂದೆ ಸ್ಪರ್ಧಿಸುವುದಿಲ್ಲ ಎಂದು ಅನುಭವಿ ಡಬಲ್ಸ್ ಪರಿಣತ ರೋಹನ್ ಬೋಪಣ್ಣ ಹೇಳಿದ್ದಾರೆ.


ಮನು ಭಾಕರ್ ಅವರು ಸರಬ್ಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕದೆಡೆಗೆ ಸಾಗಿದ್ದಾರೆ.

ಈ ಜೋಡಿ ಕಂಚಿನ ಪದಕದ ಪಂದ್ಯದಲ್ಲಿ 579 ಅಂಕ ಗಳಿಸಿರುವ ಕೊರಿಯಾದ ಓಹ್ ಯೆ ಜಿನ್ ಮತ್ತು ಲೀ ವೊನ್ಹೋ ಅವರ ವಿರುದ್ಧ ಸೆಣಸಲಿದೆ. ಜಯ ಗಳಿಸಿದರೆ ಒಂದೇ ಆವೃತ್ತಿಯಲ್ಲಿ ಒಂದೇ ಆಟದಲ್ಲಿ ಒಂದಕ್ಕಿಂತ ಹೆಚ್ಚು ಪದಕ ಗೆದ್ದ ಮೊದಲ ಭಾರತೀಯರು ಎಂಬ ಹೆಗ್ಗಳಿಕೆಗೆ ಭಾಕರ್‌ ಪಾತ್ರರಾಗಲಿದ್ದಾರೆ.

ಸೋಮವಾರ ಪುರುಷರ ಹಾಕಿ ತಂಡವು ಅಭೂತಪೂರ್ವ ಡ್ರಾ ಸಾಧಿಸಿತು. ಆದರೆ, ಬಿಲ್ಲುಗಾರರು ಸುಲಭವಾಗಿ ಶರಣಾದರು. ಮತ್ತೊಂದು ಅತ್ಯುತ್ಕೃಷ್ಟ ಪ್ರದರ್ಶನದಲ್ಲಿ ಮಣಿಕಾ ಬಾತ್ರಾ ಅವರು ವಿಶ್ವದ 18 ನೇ ಶ್ರೇಯಾಂಕಿತ ಆಟಗಾರ್ತಿ ಪ್ರಿತಿಕಾ ಪವಾಡೆ ವಿರುದ್ಧ 4-0 ಗೆಲುವಿನೊಂದಿಗೆ ಒಲಿಂಪಿಕ್ ಗೇಮ್ಸ್‌ನ ಸಿಂಗಲ್ಸ್ ನಲ್ಲಿ 16ನೇ ಹಂತ ತಲುಪಿದ ಮೊದಲ ಭಾರತೀಯ ಟೇಬಲ್ ಟೆನ್ನಿಸ್ ಆಟಗಾರ್ತಿ ಎಂಬ ಇತಿಹಾಸವನ್ನು ಸೃಷ್ಟಿಸಿದರು.

ಬಾಬುತಾಗೆ ನಾಲ್ಕನೇ ಸ್ಥಾನ: 10 ಮೀಟರ್ ಏರ್ ರೈಫಲ್ ಪುರುಷರ ಫೈನಲ್‌ನಲ್ಲಿ ಅರ್ಜುನ್ ಬಾಬುತಾ ತಮ್ಮಸಾಧನೆ ಮುಂದುವರಿಸಿದ್ದರೆ, ಸೋಮವಾರ ಎರಡನೇ ಪದಕ ಬರಬಹುದಿತ್ತು. ಒಂದು ಹಂತದಲ್ಲಿ ಕಂಚು ಅಥವಾ ಬೆಳ್ಳಿ ಪದಕದ ಸಾಧ್ಯತೆ ಇದ್ದಿತ್ತು. ಆದರೆ, ಸಾಧನೆ ಕುಸಿದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಭಾಕರ್-ಸರಬ್ಜೋತ್ ಪದಕದ ಹಾದಿಯಲ್ಲಿ: ಭಾಕರ್ ಮತ್ತು ಸರಬ್ಜೋತ್ ಅವರು 580 ಅಂಕಗಳನ್ನು ಗಳಿಸಿದರು.10 ಮೀಟರ್ ಏರ್ ರೈಫಲ್ ಮಹಿಳೆಯರ ಸ್ಪರ್ಧೆಯಲ್ಲಿ ರಮಿತಾ ಜಿಂದಾಲ್ ಏಳನೇ ಸ್ಥಾನ ಗಳಿಸಿದರು.

ಶಾಟ್‌ಗನ್ ಗುರಿಕಾರ ಪೃಥ್ವಿರಾಜ್ ತೊಂಡೈಮಾನ್ ಟ್ರ್ಯಾಪ್ ಸ್ಪರ್ಧೆಯ ಆರಂಭಿಕ ದಿನದಂದು 68/75 ಅಂಕಗಳೊಂದಿಗೆ ಕೊನೆಯ 30 ನೇ ಸ್ಥಾನ ಗಳಿಸಿದರು.

ಬ್ಯಾಡ್ಮಿಂಟನ್ ಅಂಗಳದಲ್ಲಿ ಲಕ್ಷ್ಯ ಸೇನ್:‌ ಪುರುಷರ ಸಿಂಗಲ್ಸ್ ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂನ ಜೂಲಿಯನ್ ಕರಾಗ್ಗಿ ಅವರನ್ನು ಲಕ್ಷ್ಯ ಸೇನ್ (22) ನೇರ ಗೇಮ್‌ಗಳಲ್ಲಿ ಸೋಲಿಸಿದರು. ಸೇನ್‌ 43 ನಿಮಿಷಗಳಲ್ಲಿ ಕಾರಾಗ್ಗಿ ಅವರನ್ನು 21-19 21-14 ರಿಂದ ಸೋಲಿಸಿದರು.

ಸೇನ್ ಬುಧವಾರ (ಜುಲೈ 31) ನಡೆಯಲಿರುವ ಗುಂಪಿನ ಅಂತಿಮ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಮತ್ತು ವಿಶ್ವದ ಮೂರನೇ ಶ್ರೇಯಾಂಕದ ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿಯನ್ನು ಎದುರಿಸಲಿದ್ದಾರೆ. ಕ್ರಿಸ್ಟಿ ಏಷ್ಯನ್ ಚಾಂಪಿಯನ್ ಆಗಿದ್ದಾರೆ. 16 ಗುಂಪುಗಳಿಂದ ತಲಾ ಒಬ್ಬರು ಮಾತ್ರ ಪ್ರಿ ಕ್ವಾರ್ಟರ್‌ಗೆ ಅರ್ಹತೆ ಪಡೆಯುವುದರಿಂದ, ಇಬ್ಬರು ಆಟಗಾರರಲ್ಲಿ ಯಾರು ಮುನ್ನಡೆಯುತ್ತಾರೆ ಎಂಬುದನ್ನು ಈ ಪಂದ್ಯ ನಿರ್ಧರಿಸುತ್ತದೆ.

ಬಿಲ್ಲುಗಾರರ ವೈಫಲ್ಯ: ಜುಲೈ 28ರಂದು ನಡೆದ ಮಹಿಳಾ ತಂಡದ ಕ್ವಾರ್ಟರ್‌ಫೈನಲ್‌ನಲ್ಲಿ ದೀಪಿಕಾ ಕುಮಾರಿ ಅವರ ನೀರಸ ಪ್ರದರ್ಶನದ ಬಳಿಕ, ಅಂಕಿತಾ ಭಕತ್ ಅವರು ಭಜನ್ ಕೌರ್‌ ಅವರನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾದರು.

ಅನುಭವಿ ಆಟಗಾರರಾದ ತರುಣದೀಪ್ ರೈ, ಧೀರಜ್ ಬೊಮ್ಮದೇವರ ಮತ್ತು ಪ್ರವೀಣ್ ಜಾಧವ್ ಅವರ ಪುರುಷರ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ಯುವ ಟರ್ಕಿಶ್ ತಂಡದ ವಿರುದ್ಧ ಶೋಚನೀಯವಾಗಿ ಸೋಲುಂಡಿತು. ಅಂತಿಮ ಸ್ಕೋರ್‌ 53-57, 52-55, 55-54, 54-58.

ಬೋಪಣ್ಣ ರಾಷ್ಟ್ರೀಯ ಕರ್ತವ್ಯದಿಂದ ನಿರ್ಗಮನ: ಟೆನಿಸ್ ಸ್ಪರ್ಧೆಯ ಪುರುಷರ ಡಬಲ್ಸ್ ಸ್ಪರ್ಧೆಯ ಆರಂಭಿಕ ಸುತ್ತಿನಲ್ಲಿ ಸೋತ ಅನುಭವಿ ಡಬಲ್ಸ್ ಸ್ಪೆಷಲಿಸ್ಟ್ ರೋಹನ್ ಬೋಪಣ್ಣ ಅವರು, ಇನ್ನು ಮುಂದೆ ಆಟ ಆಡುವುದಿಲ್ಲ ಎಂದು ಘೋಷಿಸಿದರು.

ʻಇದು ಖಂಡಿತವಾಗಿಯೂ ದೇಶಕ್ಕಾಗಿ ನನ್ನ ಕೊನೆಯ ಪಂದ್ಯ. ನಾನು ಎಲ್ಲಿದ್ದೇನೆ ಎಂಬುದನ್ನು ಸಂಪೂರ್ಣವಾಗಿ ಅರ್ಥಮಾಡಿ ಕೊಂಡಿದ್ದೇನೆ ಮತ್ತು ಆಟವನ್ನು ಆನಂದಿಸುತ್ತೇನೆ,ʼ ಎಂದು ಬೋಪಣ್ಣ ಹೇಳಿದರು. ಅವರು ಜಪಾನಿನಲ್ಲಿ 2026 ರಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ ನಲ್ಲಿ ಆಡುವುದಿಲ್ಲ.

ಭಾರತ ಒಂದು ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ ಜಂಟಿ 23ನೇ ಸ್ಥಾನದಲ್ಲಿದೆ. ಜಪಾನ್, ಫ್ರಾನ್ಸ್ ಮತ್ತು ಚೀನಾ ಮೊದಲ ಮೂರು ಸ್ಥಾನ ದಲ್ಲಿವೆ.

Read More
Next Story