ಐಪಿಎಲ್ 2026: ಸಂಪೂರ್ಣ ಮಾರ್ಗದರ್ಶಿ: ವೇಳಾಪಟ್ಟಿ, ತಂಡಗಳು, ಕ್ರೀಡಾಂಗಣಗಳು, ಟಿಕೆಟ್ ಮತ್ತಿತರ ವಿವರ ಇಲ್ಲಿದೆ
x

ಐಪಿಎಲ್‌ ತಂಡಗಳ ನಾಯಕರು 

ಐಪಿಎಲ್ 2026: ಸಂಪೂರ್ಣ ಮಾರ್ಗದರ್ಶಿ: ವೇಳಾಪಟ್ಟಿ, ತಂಡಗಳು, ಕ್ರೀಡಾಂಗಣಗಳು, ಟಿಕೆಟ್ ಮತ್ತಿತರ ವಿವರ ಇಲ್ಲಿದೆ

ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿವೆ.


Click the Play button to hear this message in audio format

ಇಂಡಿಯನ್ ಪ್ರೀಮಿಯರ್ ಲೀಗ್‌ನ 19ನೇ ಆವೃತ್ತಿಯು ಇಂದು (ಮಾರ್ಚ್ 28) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿವೆ. ಚೆನ್ನೈ ಸೂಪರ್ ಕಿಂಗ್ಸ್‌ನ ಮಾಜಿ ನಾಯಕ ಎಂ.ಎಸ್. ಧೋನಿ ಅವರು ಮೊದಲ ಎರಡು ವಾರಗಳ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಐಪಿಎಲ್ 2026ರ ಸ್ವರೂಪ, ತಂಡಗಳು, ಸ್ಥಳಗಳು, ಪಂದ್ಯದ ಸಮಯ ಮತ್ತು ನೇರ ಪ್ರಸಾರದ ಸಂಪೂರ್ಣ ವಿವರ ಇಲ್ಲಿದೆ.

ಪ್ರಮುಖ ಮಾಹಿತಿ

* ಪ್ರಾರಂಭ ಮತ್ತು ಅಂತ್ಯದ ದಿನಾಂಕ: ಟೂರ್ನಿಯು ಮಾರ್ಚ್ 28 ರಂದು ಬೆಂಗಳೂರಿನಲ್ಲಿ ಶುರುವಾಗಲಿದ್ದು, ಮೇ 31 ರಂದು ಬೆಂಗಳೂರಿನಲ್ಲೇ ಫೈನಲ್ ಪಂದ್ಯ ನಡೆಯಲಿದೆ.

* ಪಂದ್ಯಗಳ ಸಂಖ್ಯೆ: 10 ತಂಡಗಳ ನಡುವೆ ಒಟ್ಟು 74 ಪಂದ್ಯಗಳು ನಡೆಯಲಿವೆ (ಮಾರ್ಚ್ 28 ರಿಂದ ಮೇ 24 ರವರೆಗೆ 70 ಲೀಗ್ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಪ್ಲೇ-ಆಫ್ ಪಂದ್ಯಗಳ ವೇಳಾಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಿದೆ).

* ಪಂದ್ಯದ ಸಮಯ: ಮಧ್ಯಾಹ್ನ 3.30 (IST) ಮತ್ತು ಸಂಜೆ 7.30 (IST).

* ಟಿಕೆಟ್ ಬುಕ್ಕಿಂಗ್: BookMyShow, District by Zomato ಹಾಗೂ ತಂಡಗಳ ಅಧಿಕೃತ ವೆಬ್‌ಸೈಟ್ ಮತ್ತು ಆ್ಯಪ್‌ಗಳ ಮೂಲಕ ಖರೀದಿಸಬಹುದು.

* ನೇರ ಪ್ರಸಾರ ಮತ್ತು ಸ್ಟ್ರೀಮಿಂಗ್: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ (ಕನ್ನಡ, ಹಿಂದಿ, ಇಂಗ್ಲಿಷ್ ಸೇರಿದಂತೆ 12 ಭಾಷೆಗಳಲ್ಲಿ) ಟಿವಿ ನೇರ ಪ್ರಸಾರ ಲಭ್ಯವಿದ್ದು, ಜಿಯೋ ಹಾಟ್‌ಸ್ಟಾರ್ (JioHotstar) ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.

ತಂಡಗಳ ಗುಂಪುಗಳು ಮತ್ತು ಟೂರ್ನಿಯ ಸ್ವರೂಪ

ಗುಂಪು A: ಚೆನ್ನೈ ಸೂಪರ್ ಕಿಂಗ್ಸ್ (5 ಪ್ರಶಸ್ತಿ), ಕೋಲ್ಕತ್ತಾ ನೈಟ್ ರೈಡರ್ಸ್ (3), ರಾಜಸ್ಥಾನ್ ರಾಯಲ್ಸ್ (1), ರಾಯಲ್ ಚಾಲೆಂಜರ್ಸ್ ಬೆಂಗಳೂರು (1), ಪಂಜಾಬ್ ಕಿಂಗ್ಸ್.

ಗುಂಪು B: ಮುಂಬೈ ಇಂಡಿಯನ್ಸ್ (5), ಸನ್‌ರೈಸರ್ಸ್ ಹೈದರಾಬಾದ್ (1), ಗುಜರಾತ್ ಟೈಟನ್ಸ್ (1), ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್.

ಸ್ವರೂಪ: ಕಳೆದ ಮೂರು ವರ್ಷಗಳಿಗಿಂತ ಈ ಬಾರಿ ನಿಯಮ ಬದಲಾಗಿದೆ. ಪ್ರತಿ ತಂಡವು ತನ್ನದೇ ಗುಂಪಿನ ಇತರ ತಂಡಗಳೊಂದಿಗೆ ತಲಾ ಒಂದು ಬಾರಿ ಮತ್ತು ಎದುರಾಳಿ ಗುಂಪಿನ ತಂಡಗಳೊಂದಿಗೆ ಎರಡು ಬಾರಿ ಸೆಣಸಾಡಲಿದೆ. ಪ್ರತಿ ತಂಡವು ಲೀಗ್ ಹಂತದಲ್ಲಿ 14 ಪಂದ್ಯಗಳನ್ನು ಆಡಲಿದೆ.

ಪ್ಲೇ-ಆಫ್: ಲೀಗ್ ಹಂತದ ಅಂತ್ಯಕ್ಕೆ ಅಗ್ರ 4 ತಂಡಗಳು ಪ್ಲೇ-ಆಫ್ ಪ್ರವೇಶಿಸಲಿವೆ. ಅಗ್ರ 2 ತಂಡಗಳು 'ಕ್ವಾಲಿಫೈಯರ್ 1' ಆಡಲಿದ್ದು, ಗೆದ್ದ ತಂಡ ನೇರವಾಗಿ ಫೈನಲ್ ತಲುಪಲಿದೆ. 3 ಮತ್ತು 4ನೇ ಸ್ಥಾನ ಪಡೆದ ತಂಡಗಳು 'ಎಲಿಮಿನೇಟರ್' ಆಡಲಿವೆ. ಎಲಿಮಿನೇಟರ್‌ನಲ್ಲಿ ಗೆದ್ದ ತಂಡ ಮತ್ತು ಕ್ವಾಲಿಫೈಯರ್ 1ರಲ್ಲಿ ಸೋತ ತಂಡಗಳ ನಡುವೆ 'ಕ್ವಾಲಿಫೈಯರ್ 2' ನಡೆಯಲಿದ್ದು, ಇದರಲ್ಲಿ ಗೆದ್ದವರು ಫೈನಲ್ ಪ್ರವೇಶಿಸುತ್ತಾರೆ.

ಪಂದ್ಯ ನಡೆಯುವ ಕ್ರೀಡಾಂಗಣಗಳು (13 ಸ್ಥಳಗಳು)

1. ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ

2. ಬರ್ಸಾಪಾರಾ ಕ್ರಿಕೆಟ್ ಕ್ರೀಡಾಂಗಣ, ಗುವಾಹಟಿ

3. ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣ, ಲಕ್ನೋ

4. ಈಡನ್ ಗಾರ್ಡನ್ಸ್, ಕೋಲ್ಕತ್ತಾ

5. HPCA ಕ್ರೀಡಾಂಗಣ, ಧರ್ಮಶಾಲಾ

6. ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

7. ಎಂ.ಎ ಚಿದಂಬರಂ ಕ್ರೀಡಾಂಗಣ (ಚೆಪಾಕ್), ಚೆನ್ನೈ

8. ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣ, ನ್ಯೂ ಚಂಡೀಗಢ

9. ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್

10. ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್

11. ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣ, ಜೈಪುರ

12. ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣ, ರಾಯ್ಪುರ

13. ವಾಂಖೆಡೆ ಕ್ರೀಡಾಂಗಣ, ಮುಂಬೈ

ಐಪಿಎಲ್ 2026 ತಂಡಗಳು (ಕ್ಯಾಪ್ಟನ್ ಮತ್ತು ಕೋಚ್)

ಚೆನ್ನೈ ಸೂಪರ್ ಕಿಂಗ್ಸ್ (CSK): ಋತುರಾಜ್ ಗಾಯಕ್ವಾಡ್ (ನಾಯಕ), ಸ್ಟೀಫನ್ ಫ್ಲೆಮಿಂಗ್ (ಕೋಚ್). ಪ್ರಮುಖರು: ಎಂ.ಎಸ್. ಧೋನಿ, ಸಂಜು ಸ್ಯಾಮ್ಸನ್, ಶಿವಂ ದುಬೆ.

ಡೆಲ್ಲಿ ಕ್ಯಾಪಿಟಲ್ಸ್ (DC): ಅಕ್ಷರ್ ಪಟೇಲ್ (ನಾಯಕ), ಹೇಮಂಗ್ ಬದಾನಿ (ಕೋಚ್). ಪ್ರಮುಖರು: ಕೆ.ಎಲ್. ರಾಹುಲ್, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್.

ಗುಜರಾತ್ ಟೈಟನ್ಸ್ (GT): ಶುಭ್‌ಮನ್ ಗಿಲ್ (ನಾಯಕ), ಆಶಿಶ್ ನೆಹ್ರಾ (ಕೋಚ್). ಪ್ರಮುಖರು: ಜೋಸ್ ಬಟ್ಲರ್, ರಶೀದ್ ಖಾನ್, ಕಗಿಸೊ ರಬಾಡಾ.

ಕೋಲ್ಕತ್ತಾ ನೈಟ್ ರೈಡರ್ಸ್ (KKR): ಅಜಿಂಕ್ಯ ರಹಾನೆ (ನಾಯಕ), ಅಭಿಷೇಕ್ ನಾಯರ್ (ಕೋಚ್). ಪ್ರಮುಖರು: ಸುನಿಲ್ ನರೈನ್, ರಿಂಕು ಸಿಂಗ್, ಕ್ಯಾಮೆರಾನ್ ಗ್ರೀನ್.

ಲಕ್ನೋ ಸೂಪರ್ ಜೈಂಟ್ಸ್ (LSG): ರಿಷಬ್ ಪಂತ್ (ನಾಯಕ), ಜಸ್ಟಿನ್ ಲ್ಯಾಂಗರ್ (ಕೋಚ್). ಪ್ರಮುಖರು: ನಿಕೋಲಸ್ ಪೂರನ್, ಮಯಾಂಕ್ ಯಾದವ್, ಮೊಹಮ್ಮದ್ ಶಮಿ.

ಮುಂಬೈ ಇಂಡಿಯನ್ಸ್ (MI): ಹಾರ್ದಿಕ್ ಪಾಂಡ್ಯ (ನಾಯಕ), ಮಹೇಲಾ ಜಯವರ್ಧನೆ (ಕೋಚ್). ಪ್ರಮುಖರು: ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್‌ಪ್ರೀತ್ ಬುಮ್ರಾ.

ಪಂಜಾಬ್ ಕಿಂಗ್ಸ್ (PBKS): ಶ್ರೇಯಸ್ ಅಯ್ಯರ್ (ನಾಯಕ), ರಿಕಿ ಪಾಂಟಿಂಗ್ (ಕೋಚ್). ಪ್ರಮುಖರು: ಮಾರ್ಕಸ್ ಸ್ಟೋಯ್ನಿಸ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್.

ರಾಜಸ್ಥಾನ್ ರಾಯಲ್ಸ್ (RR): ರಿಯಾನ್ ಪರಾಗ್ (ನಾಯಕ), ಕುಮಾರ್ ಸಂಗಕ್ಕಾರ (ಕೋಚ್). ಪ್ರಮುಖರು: ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್, ಜೋಫ್ರಾ ಆರ್ಚರ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ರಜತ್ ಪಾಟಿದಾರ್ (ನಾಯಕ), ಆಂಡಿ ಫ್ಲವರ್ (ಕೋಚ್). ಪ್ರಮುಖರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜೋಶ್ ಹೇಜಲ್‌ವುಡ್.

ಸನ್‌ರೈಸರ್ಸ್ ಹೈದರಾಬಾದ್ (SRH): ಪ್ಯಾಟ್ ಕಮಿನ್ಸ್ (ನಾಯಕ), ಡೇನಿಯಲ್ ವೆಟ್ಟೋರಿ (ಕೋಚ್). ಪ್ರಮುಖರು: ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್, ಅಭಿಷೇಕ್ ಶರ್ಮಾ. (ಕಮಿನ್ಸ್ ಗಾಯದಿಂದ ಚೇತರಿಸಿಕೊಳ್ಳುತ್ತಿರುವುದರಿಂದ ಇಶಾನ್ ಕಿಶನ್ ಹಂಗಾಮಿ ನಾಯಕರಾಗಿದ್ದಾರೆ).

ಐಪಿಎಲ್ 2026 ಲೀಗ್ ಹಂತದ ಪ್ರಮುಖ ವೇಳಾಪಟ್ಟಿ (ಆಯ್ದ ಪಂದ್ಯಗಳು)

ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿದ್ದು, ಆರಂಭಿಕ ಹಾಗೂ ಪ್ರಮುಖ ಪಂದ್ಯಗಳ ವಿವರ ಇಲ್ಲಿದೆ:

ಮಾರ್ಚ್ 28: RCB vs SRH (ಬೆಂಗಳೂರು, 7. 30 PM)

ಮಾರ್ಚ್ 29: MI vs KKR (ಮುಂಬೈ, 7.30 PM)

ಮಾರ್ಚ್ 30: RR vs CSK (ಗುವಾಹಟಿ, 7. 30 PM)

ಏಪ್ರಿಲ್ 5: RCB vs CSK (ಬೆಂಗಳೂರು, 7.30 PM)

ಏಪ್ರಿಲ್ 12: MI vs RCB (ಮುಂಬೈ, 7.30 PM)

ಮೇ 10: RCB vs MI (ರಾಯ್ಪುರ, 7.30 PM)

ಮೇ 24: KKR vs DC (ಕೋಲ್ಕತ್ತಾ, 7.30 PM) - ಲೀಗ್ ಹಂತದ ಕೊನೆಯ ಪಂದ್ಯ.

ಹಿಂದಿನ ಐಪಿಎಲ್ ಚಾಂಪಿಯನ್‌ಗಳು ಮತ್ತು ಅತಿ ಹೆಚ್ಚು ಪ್ರಶಸ್ತಿ ಗೆದ್ದ ತಂಡಗಳು

ಅತಿ ಹೆಚ್ಚು ಪ್ರಶಸ್ತಿ ಗೆದ್ದವರು

CSK (5 ಬಾರಿ): 2010, 2011, 2018, 2021, 2023

MI (5 ಬಾರಿ): 2013, 2015, 2017, 2019, 2020

KKR (3 ಬಾರಿ): 2012, 2014, 2024

ಇತರೆ ವಿಜೇತರು: ರಾಜಸ್ಥಾನ್ ರಾಯಲ್ಸ್-2008, ಡೆಕ್ಕನ್ ಚಾರ್ಜರ್ಸ್-2009, ಸನ್‌ರೈಸರ್ಸ್ ಹೈದರಾಬಾದ್-2016, ಗುಜರಾತ್ ಟೈಟನ್ಸ್-2022, ರಾಯಲ್ ಚಾಲೆಂಜರ್ಸ್ ಬೆಂಗಳೂರು-2025).

Read More
Next Story