CM Vijay felicitates chess hero Gyanananda; Chess match in the ministry!
x

ಯುವ ಗ್ರಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರಿಗೆ ತಮಿಳುನಾಡು ಸಿಎಂ ವಿಜಯ್‌ 50 ಲಕ್ಷ ರೂ. ಚೆಕ್‌ ವಿತರಿಸಿದರು.   

ಚೆಸ್ ವೀರ ಪ್ರಜ್ಞಾನಂದಗೆ ಸಿಎಂ ವಿಜಯ್ ಸನ್ಮಾನ; ಸಚಿವಾಲಯದಲ್ಲಿ ಚೆಸ್ ಜುಗಲ್‌ಬಂದಿ!

ಕಳೆದ ವಾರ ಓಸ್ಲೋದಲ್ಲಿ ನಡೆದ ನಾರ್ವೆ ಚೆಸ್ ಟೂರ್ನಿಯ ಅಂತಿಮ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಮೂಲಕ ಪ್ರಜ್ಞಾನಂದ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.


Click the Play button to hear this message in audio format

ಪ್ರಸಿದ್ಧ ನಾರ್ವೆ ಚೆಸ್ ಪಂದ್ಯಾವಳಿಯಲ್ಲಿ ಐತಿಹಾಸಿಕ ಜಯ ಸಾಧಿಸಿ ದೇಶಕ್ಕೆ ಕೀರ್ತಿ ತಂದಿರುವ ಭಾರತದ 20 ವರ್ಷದ ಯುವ ಗ್ರಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸೋಮವಾರ ಆತ್ಮೀಯವಾಗಿ ಸನ್ಮಾನಿಸಿದರು. ಚೆನ್ನೈನ ಸಚಿವಾಲಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿಎಂ ವಿಜಯ್ ಅವರು ಪ್ರಜ್ಞಾನಂದ ಅವರ ಐತಿಹಾಸಿಕ ಸಾಧನೆಯನ್ನು ಶ್ಲಾಘಿಸಿ, ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 50 ಲಕ್ಷ ರೂಪಾಯಿಗಳ ನಗದು ಪ್ರೋತ್ಸಾಹಕ ಚೆಕ್ ಅನ್ನು ಹಸ್ತಾಂತರಿಸಿದರು.


ಸಚಿವಾಲಯದಲ್ಲಿ ರಂಗೇರಿದ ಚೆಸ್ ಜುಗಲ್‌ಬಂದಿ

ಸನ್ಮಾನದ ವೇಳೆ ಮುಖ್ಯಮಂತ್ರಿ ವಿಜಯ್ ಅವರು ಯುವ ಗ್ರಾಂಡ್‌ಮಾಸ್ಟರ್‌ ಜೊತೆ ಸ್ನೇಹಪರ ಚೆಸ್ ಪಂದ್ಯವನ್ನು ಆಡುವ ಮೂಲಕ ಎಲ್ಲರ ಗಮನ ಸೆಳೆದರು. ತಮ್ಮ ಕಚೇರಿಯ ಬೃಹತ್ ಮೇಜಿನ ಮೇಲಿದ್ದ ಚೆಸ್ ಬೋರ್ಡ್‌ನಲ್ಲಿ ತಂತ್ರ-ಪ್ರತಿತಂತ್ರಗಳ ಮೂಲಕ ಇಬ್ಬರೂ ಗಂಭೀರವಾಗಿ ಆಟದಲ್ಲಿ ಮಗ್ನರಾಗಿದ್ದರು. ಅಂತಿಮವಾಗಿ ಪ್ರಜ್ಞಾನಂದ ಅವರು ಮುಖ್ಯಮಂತ್ರಿಯವರ ರಾಜನಿಗೆ ಚೆಕ್‌ಮೇಟ್ ಇಡುವ ಮೂಲಕ ಜಯಗಳಿಸಿದರು. ಸೋಲಿನ ಬಳಿಕವೂ ಸಿಎಂ ವಿಜಯ್ ಅವರು ನಗುತ್ತಲೇ ಚಪ್ಪಾಳೆ ತಟ್ಟಿ ಯುವ ಆಟಗಾರನ ಕೌಶಲ್ಯವನ್ನು ಪ್ರಶಂಸಿಸಿದರು. ಈ ಅಪರೂಪದ ಕ್ಷಣಕ್ಕೆ ಪ್ರಜ್ಞಾನಂದ ಅವರ ಪೋಷಕರು, ಕ್ರೀಡಾ ಅಭಿವೃದ್ಧಿ ಸಚಿವ ಆಧವ್ ಅರ್ಜುನ ಹಾಗೂ ಹಿರಿಯ ಅಧಿಕಾರಿಗಳು ಸಾಕ್ಷಿಯಾದರು.

ಇತಿಹಾಸ ಬರೆದ ಪ್ರಜ್ಞಾನಂದ

ಕಳೆದ ವಾರ ಓಸ್ಲೋದಲ್ಲಿ ನಡೆದ ನಾರ್ವೆ ಚೆಸ್ ಟೂರ್ನಿಯ ಅಂತಿಮ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಮೂಲಕ ಪ್ರಜ್ಞಾನಂದ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. 2013 ರಲ್ಲಿ ಈ ಪಂದ್ಯಾವಳಿ ಆರಂಭವಾದಾಗಿನಿಂದ ಇಂದಿನವರೆಗೆ ನಾರ್ವೆ ಚೆಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪ್ರಜ್ಞಾನಂದ ಪಾತ್ರರಾಗಿದ್ದಾರೆ. ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಸೇರಿದಂತೆ ಜಗತ್ತಿನ ದಿಗ್ಗಜರನ್ನು ಸೋಲಿಸಿ ಈ ಪ್ರಶಸ್ತಿ ಗೆದ್ದಿರುವುದು ತಮ್ಮ ವೃತ್ತಿಜೀವನದ ಅತ್ಯಂತ ದೊಡ್ಡ ಸಾಧನೆ ಎಂದು ಪ್ರಜ್ಞಾನಂದ ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.

Read More
Next Story