Khel Ratna: ನನ್ನಿಂದಲೇ ತಪ್ಪಾಗಿದೆ; ಖೇಲ್ ರತ್ನ ವಿವಾದಕ್ಕೆ ತೆರೆ ಎಳೆದ ಶೂಟರ್ ಮನು ಭಾಕರ್
Khel Ratna: ಖೇಲ್ ರತ್ನ ಪ್ರಶಸ್ತಿ ಪಟ್ಟಿಯಿಂದ ತನ್ನನ್ನು ಹೊರಗಿಟ್ಟಿರುವ ಬಗ್ಗೆ ಕ್ರೀಡಾ ಸಚಿವಾಲಯ ಸತತವಾಗಿ ಟೀಕೆಗಳನ್ನು ಎದುರಿಸುತ್ತಿದೆ. ಈ ನಡುವೆ ಮನು ಭಾಕರ್ ತಮ್ಮಿಂದ ಆಗಿರುವ ನಾಮನಿರ್ದೇಶನದ ಲೋಪವನ್ನು ಒಪ್ಪಿಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಡಬಲ್ ಕಂಚಿನ ಪದಕ ವಿಜೇತೆ ಮನು ಭಾಕರ್ ಮಂಗಳವಾರ (ಡಿಸೆಂಬರ್ 24) ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿಯಿಂದ ತಮ್ಮನ್ನು ಹೊರಗಿಟ್ಟಿರುವ ವಿವಾದದಕ್ಕೆ ತೆರೆ ಎಳೆದಿದ್ದಾರೆ. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಸಲ್ಲಿಸುವ ವೇಳೆ ತಮ್ಮ ಕಡೆಯಿಂದ ಲೋಪವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಪ್ರಶಸ್ತಿ ಆಯ್ಕೆ ಸಮಿತಿಯು ಭಾಕರ್ ಹೆಸರನ್ನು ಶಿಫಾರಸು ಮಾಡದ ಕಾರಣ ಕ್ರೀಡಾ ಸಚಿವಾಲಯವು ಟೀಕೆಗಳನ್ನು ಎದುರಿಸಿತ್ತು. ಅಲ್ಲದೆ, ಆಗಿರುವ ಪ್ರಮಾದವನ್ನು ಸರಿಪಡಿಸಲು ಯತ್ನಿಸುತ್ತಿದೆ. ಈ ನಡುವೆ 22 ವರ್ಷದ ಅಥ್ಲೀಟ್ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.
ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿಗೆ ನನ್ನ ನಾಮನಿರ್ದೇಶನಕ್ಕಾಗಿ ನಡೆಯುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಸ್ಪಷ್ಟನೆ ಏನೆಂದರೆ, ಕ್ರೀಡಾಪಟುವಾಗಿ ದೇಶಕ್ಕಾಗಿ ಆಡುವುದು ಮತ್ತು ಪ್ರದರ್ಶನ ನೀಡುವುದು ನನ್ನ ಗುರಿಯಾಗಿದೆ. ಪ್ರಸ್ತುತ ಚರ್ಚೆಯಲ್ಲಿ ನಾಮಪತ್ರ ಸಲ್ಲಿಸುವಾಗ ನನ್ನ ಕಡೆಯಿಂದ ಲೋಪವಾಗಿದೆ ಎಂದು ನಾನು ನಂಬುತ್ತೇನೆ. ಅದನ್ನು ಸರಿಪಡಿಸಲಾಗುತ್ತಿದೆ" ಎಂದು ಭಾಕರ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಶಸ್ತಿ ಸಿಕ್ಕರೂ ಅಥವಾ ಸಿಗದೇ ಹೋದರೂ ದೇಶಕ್ಕಾಗಿ ಪ್ರದರ್ಶನ ನೀಡುವುದು ತನ್ನ ಗುರಿಯಾಗಿದೆ ಎಂದು ಭಾಕರ್ ಹೇಳಿದ್ದಾರೆ. "ಪ್ರಶಸ್ತಿಗಳು ಮತ್ತು ಗೌರವ ನನಗೆ ಪ್ರೋತ್ಸಾಹ ನೀಡುತ್ತದೆ. ಅದುವೇ ನನ್ನ ಗುರಿಯಲ್ಲ" ಎಂದು ಅವರು ಪ್ರತಿಪಾದಿಸಿದರು.
"ಪ್ರಶಸ್ತಿ ಬಂದರೆ ದೇಶಕ್ಕಾಗಿ ಹೆಚ್ಚಿನ ಪದಕಗಳನ್ನು ಗೆಲ್ಲಲು ನನಗೆ ಪ್ರೋತ್ಸಾಹ ಸಿಕ್ಕಿದಂತೆ. ಆದರೆ ಈ ಬಗ್ಗೆ ಊಹಾಪೋಹಗಳನ್ನು ಎಬ್ಬಿಸದಂತೆ ವಿನಂತಿ ಮಾಡಿಕೊಳ್ಳುತ್ತೇನೆ " ಎಂದು ಅವರು ಹೇಳಿದ್ದಾರೆ.
ಕೋಚ್ ಜಸ್ಪಾಲ್ ರಾಣಾ ಆಕ್ರೋಶ
ಮನು ಭಾಕರ್ ಅವರ ವೈಯಕ್ತಿಕ ಕೋಚ್ ಜಸ್ಪಾಲ್ ರಾಣಾ ಮತ್ತು ತಂದೆ ರಾಮ್‌ಕಿಶನ್ ಭಾಕರ್. ಕ್ರೀಡಾ ಸಚಿವಾಲಯ ಮತ್ತು ಆಯ್ಕೆ ಸಮಿತಿ ತರಾಟೆಗೆ ತೆಗೆದುಕೊಂಡ ಈ ಬೆಳವಣಿಗೆ ನಡೆದಿದೆ.
ಒಲಿಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮನು ಭಾಕರ್ ಹೆಸರು ಪ್ರಶಸ್ತಿ ಪಟ್ಟಿಯಲ್ಲಿದಿರುವುದು ಚರ್ಚೆಯ ವಿಷಯವಾಗಿತ್ತು.
ಪ್ಯಾರಿಸ್‌ನಲ್ಲಿ ನಡೆದ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ (ಸರಬ್ಜೋತ್ ಸಿಂಗ್ ಅವರೊಂದಿಗೆ) ಸ್ಪರ್ಧೆಗಳಲ್ಲಿ ಕಂಚಿನ ಪದಕಗಳನ್ನು ಮನು ಗೆದ್ದಿದ್ದರು.