ಅರ್ಜುನ ಪ್ರಶಸ್ತಿಗೆ ಶಮಿ ನಾಮನಿರ್ದೇಶನ
x

ಅರ್ಜುನ ಪ್ರಶಸ್ತಿಗೆ ಶಮಿ ನಾಮನಿರ್ದೇಶನ

ಟೀಮ್‌ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರು ಇತ್ತೀಚೆಗೆ ನಡೆದ ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಶಮಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು.


ಹೊಸದಿಲ್ಲಿ: ಸರ್ವ ಶ್ರೇಷ್ಠ ಕ್ರೀಡಾ ಪ್ರಶಸ್ತಿಗೆ ಟೀಮ್‌ ಇಂಡಿಯಾದ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಅವರ ಹೆಸರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಾಮನಿರ್ದೇಶನ ಮಾಡಿದೆ. ಶಮಿ ಈ ಬಾರಿಯ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಇನ್ನು ಮೇಜರ್‌ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಈ ಕ್ರೀಡಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಪಟ್ಟಿಯಲ್ಲಿ ಶಮಿ ಹೆಸರು ಇರಲಿಲ್ಲ. ಬಳಿಕ ಟೀಮ್ ಇಂಡಿಯಾ ಶಮಿ ಹೆಸರನ್ನು ಪರಿಗಣಿಸಲು ಬಿಸಿಸಿಐ ಕ್ರೀಡಾ ಸಚಿವಾಲಯಕ್ಕೆ ವಿಶೇಷ ವಿನಂತಿ ಮಾಡಿದ್ದು, ಇದೀಗ ಶಮಿ ಹೆಸರು ಸೇರ್ಪಡೆಯಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿದೆ.

ಶಮಿ ಈ ಬಾರಿಯ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಪರ ಕೇವಲ 7 ಪಂದ್ಯಗಳನ್ನಾಡಿ, ಒಟ್ಟು 24 ವಿಕೆಟ್ ಗಳಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು. ಶಮಿ ಹೊರತುಪಡಿಸಿ, ಇತರ 16 ಆಟಗಾರರು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅಜಯ್ ರೆಡ್ಡಿ (ಅಂಧ ಕ್ರಿಕೆಟ್) ಓಜಸ್ ಪ್ರವೀಣ್ ಡಿಯೋಟಾಲೆ, ಅದಿತಿ ಗೋಪಿಚಂದ್ ಸ್ವಾಮಿ (ಆರ್ಚರಿ), ಶೀತಲ್ ದೇವಿ (ಪ್ಯಾರಾ ಆರ್ಚರಿ), ಪಾರುಲ್ ಚೌಧರಿ ಮತ್ತು ಎಂ ಶ್ರೀಶಂಕರ್ (ಅಥ್ಲೆಟಿಕ್ಸ್), ಮೊಹಮ್ಮದ್ ಹುಸಾಮುದ್ದೀನ್ (ಬಾಕ್ಸಿಂಗ್), ಆರ್ ವೈಶಾಲಿ (ಚೆಸ್), ದಿವ್ಯಾಕೃತಿ ಸಿಂಗ್ ಮತ್ತು ಅನುಷ್ ಅಗರ್ವಾಲಾ (ಈಕ್ವೆಸ್ಟ್ರಿಯನ್), ದೀಕ್ಷಾ ದಾಗರ್ (ಗಾಲ್ಫ್), ಕ್ರಿಶನ್ ಬಹದ್ದೂರ್ ಪಾಠಕ್ ಮತ್ತು ಸುಶೀಲಾ ಚಾನು (ಹಾಕಿ), ಪಿಂಕಿ (ಲಾನ್ ಬಾಲ್), ಐಶ್ವರಿ ಪ್ರತಾಪ್ ಸಿಂಗ್ ತೋಮರ್ (ಶೂಟಿಂಗ್), ಆಂಟಿಮ್ ಪಂಘಲ್ (ಕುಸ್ತಿ), ಐಹಿಕಾ ಮುಖರ್ಜಿ (ಟೇಬಲ್ ಟೆನ್ನಿಸ್), ನವೋರೆಮ್ ರೋಶಿಬಿನಾ ದೇವಿ (ವುಶು) ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ದ್ರೋಣಾಚಾರ್ಯ ಪ್ರಶಸ್ತಿಗೆ ಐದು ಜನರು ನಾಮನಿರ್ದೇಶನಗೊಂಡಿದ್ದು, ಗಣೇಶ್ ಪ್ರಭಾಕರನ್ (ಮಲ್ಲಖಾಂಬ್), ಮಹಾವೀರ್ ಸೈನಿ (ಪ್ಯಾರಾ ಅಥ್ಲೆಟಿಕ್ಸ್), ಲಲಿತ್ ಕುಮಾರ್ (ಕುಸ್ತಿ), ಆರ್ ಬಿ ರಮೇಶ್ (ಚೆಸ್) ಮತ್ತು ಶಿವೇಂದ್ರ ಸಿಂಗ್ (ಹಾಕಿ) ಇವರು ಕವಿತಾ (ಕಬಡ್ಡಿ), ಮಂಜುಷಾ ಕನ್ವರ್ (ಬ್ಯಾಡ್ಮಿಂಟನ್) ಮತ್ತು ವಿನೀತ್ ಕುಮಾರ್ ಶರ್ಮಾ (ಹಾಕಿ) ಧ್ಯಾನ್ ಚಂದ್ ಜೀವಮಾನ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದಾರೆ. ಧ್ಯಾನ್ ಚಂದ್ ಜೀವಮಾನ ಪ್ರಶಸ್ತಿಗೆಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (ಬ್ಯಾಡ್ಮಿಂಟನ್) ನಾಮನಿರ್ದೇಶನಗೊಂಡಿದ್ದಾರೆ.

ಧ್ಯಾನ್ ಚಂದ್ ಜೀವಮಾನ ಪ್ರಶಸ್ತಿ: ಕವಿತಾ (ಕಬಡ್ಡಿ), ಮಂಜುಷಾ ಕನ್ವರ್ (ಬ್ಯಾಡ್ಮಿಂಟನ್) ವಿನೀತ್ ಕುಮಾರ್ ಶರ್ಮಾ (ಹಾಕಿ) ಹಾಗೂ ಗಣೇಶ್ ಪ್ರಭಾಕರನ್ (ಮಲ್ಲಕಂಬ), ಮಹಾವೀರ್ ಸೈನಿ (ಪ್ಯಾರಾ ಅಥ್ಲೆಟಿಕ್ಸ್), ಲಲಿತ್ ಕುಮಾರ್ (ಕುಸ್ತಿ), ಆರ್ ಬಿ ರಮೇಶ್ (ಚೆಸ್), ಶಿವೇಂದ್ರ ಸಿಂಗ್ (ಹಾಕಿ) ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

Read More
Next Story