ದಕ್ಷಿಣ ಆಫ್ರಿಕ  ಆಲ್‌ರೌಂಡರ್‌ ಮೈಕ್ ಪ್ರಾಕ್ಟರ್ ನಿಧನ
x

ದಕ್ಷಿಣ ಆಫ್ರಿಕ ಆಲ್‌ರೌಂಡರ್‌ ಮೈಕ್ ಪ್ರಾಕ್ಟರ್ ನಿಧನ


ಜೋಹಾನ್ಸ್‌ಬರ್ಗ್, ಫೆ. 18- ದಂತಕತಡ ಆಲ್‌ ರೌಂಡರ್‌ ಮೈಕ್ ಪ್ರಾಕ್ಟರ್ ಭಾನುವಾರ ನಿಧಿನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿ ಮೇರಿನಾ, ಮಕ್ಕಳಾದ ಗ್ರೆಗ್, ಜೆಸ್ಸಿಕಾ ಮತ್ತು ಟಮ್ಮಿ ಇದ್ದಾರೆ.

ವೇಗದ ಬೌಲರ್, ಸಮರ್ಥ ಆಫ್‌ ಸ್ಪಿನ್ನರ್, ಮಧ್ಯಮ ಕ್ರಮಾಂಕದ ಬ್ಯಾಟರ್ ಮತ್ತು ಚಾಣಾಕ್ಷ ನಾಯಕನಾಗಿದ್ದ ಪ್ರಾಕ್ಟರ್ ಅವರ ಹೆಸರು ದಕ್ಷಿಣ ಆಫ್ರಿಕಾದ ಕ್ರಿಕೆಟ್ ಇತಿಹಾಸದಲ್ಲಿ ಕೆತ್ತಲ್ಪಟ್ಟಿದೆ. 401 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದ ಅವರು, 1970 ಮತ್ತು 1980 ರ ದಶಕದಲ್ಲಿ ವರ್ಣಭೇದ ನೀತಿಯಿಂದಾಗಿ ಏಳು ಟೆಸ್ಟ್‌ಗಳಲ್ಲಿ ಮಾತ್ರ ಕಾಣಿಸಿಕೊಂಡರು. ಒಂದೇ ಪಂದ್ಯದಲ್ಲಿ ಎರಡು ಬಾರಿ ಹ್ಯಾಟ್ರಿಕ್ ಮತ್ತು ಶತಕ, 1970-71ರಲ್ಲಿ ರೊಡೇಸಿಯಾಕ್ಕಾಗಿ ವಿಶ್ವ ದಾಖಲೆಯ ಆರು ಕರ್ರಿ ಕಪ್ ಶತಕಗಳು ಅವರ ಅಸಾಧಾರಣ ಪ್ರತಿಭೆ ಮತ್ತು ಆಟಕ್ಕೆ ಉದಾಹರಣೆಯಾಗಿವೆ. ರಾಷ್ಟ್ರೀಯ ತರಬೇತುದಾರರಾಗಿ, ಆಯ್ಕೆದಾರ, ಐಸಿಸಿ ಮ್ಯಾಚ್ ರೆಫರಿಯಾಗಿ ಸೇವೆ ಸಲ್ಲಿಸಿದ ಅವರು, ತಮ್ಮ ಕೊನೆಯ ವರ್ಷಗಳಲ್ಲಿ ಹಿಂದುಳಿದ ಮಕ್ಕಳಿಗೆ ತರಬೇತಿ ನೀಡಿದರು. ವರ್ಣಭೇದ ನೀತಿಯ ನಂತರದ ಯುಗದಲ್ಲಿ ದಕ್ಷಿಣ ಆಫ್ರಿಕಾದ ಕೋಚ್ ಆಗಿದ್ದರು.

ʻಮೈಕ್ ಮೈದಾನದಲ್ಲಿ ಕೇವಲ ದೈತ್ಯರಲ್ಲ; ಭರವಸೆ ಮತ್ತು ಸ್ಫೂರ್ತಿಯ ದಾರಿದೀಪವಾಗಿದ್ದರು. ಡರ್ಬನ್ ಪ್ರದೇಶದಲ್ಲಿ ನೂರಾರು ಹಿಂದುಳಿದ ಯುವಕರಿಗೆ ಮಾರ್ಗದರ್ಶನ ನೀಡಿದ ಅವರ ಬದ್ಧತೆ ಮತ್ತು ಕ್ರಿಕೆಟ್‌ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ ಎಂದು ಸಿಎಸ್‌ಎ ಅಧ್ಯಕ್ಷ ರಿಹಾನ್ ರಿಚರ್ಡ್ಸ್ ತಿಳಿಸಿದ್ದಾರೆ. ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಮೈಕ್ ಪ್ರಾಕ್ಟರ್ ಅವರ ನಿಧನಕ್ಕೆ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಸಂತಾಪ ಸೂಚಿಸಿದೆ.

Read More
Next Story