Paris Olympics 2024 | 25 ಮೀ ಪಿಸ್ತೂಲ್ ಫೈನಲ್‌ ಪ್ರವೇಶಿಸಿದ ಮನು ಭಾಕರ್
x

Paris Olympics 2024 | 25 ಮೀ ಪಿಸ್ತೂಲ್ ಫೈನಲ್‌ ಪ್ರವೇಶಿಸಿದ ಮನು ಭಾಕರ್

ಮನು ಭಾಕರ್ ಅವರು ಫೈನಲ್‌ ಪ್ರವೇಶಿಸಿದ್ದು, ಐತಿಹಾಸಿಕ ಮೂರನೇ ಪದಕವನ್ನು ಪಡೆಯುವ ಹಾದಿಯಲ್ಲಿದ್ದಾರೆ.


ಶುಕ್ರವಾರ (ಆಗಸ್ಟ್ 2): ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಮನು ಭಾಕರ್ ಅವರು ಫೈನಲ್‌ ಪ್ರವೇಶಿಸಿದ್ದು, ಐತಿಹಾಸಿಕ ಮೂರನೇ ಪದಕವನ್ನು ಪಡೆಯುವ ಹಾದಿಯಲ್ಲಿದ್ದಾರೆ.

ಭಾರತದ ಇತರ ಶೂಟರ್ ಇಶಾ ಸಿಂಗ್, ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.

ಭಾಕರ್ 590 ಸ್ಕೋರ್( ನಿಖರತೆ ಮತ್ತು ತ್ವರಿತ) ಗಳಿಸಿ, ಎರಡನೇ ಸ್ಥಾನ ಪಡೆದರು. ಅಗ್ರ ಎಂಟು ಶೂಟರ್‌ಗಳು ಫೈನಲ್‌ಗೆ ಪ್ರವೇಶಿಸಿದರು. ಪಂದ್ಯ ಶನಿವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.

ಭಾಕರ್ ಅವರು ನಿಖರ ಸುತ್ತಿನಲ್ಲಿ 294 ಅಂಕ ಮತ್ತು ತ್ವರಿತದಲ್ಲಿ 296 ಅಂಕ ಗಳಿಸಿದರು. ಹಂಗೇರಿಯ ವೆರೋನಿಕಾ ಮೇಜರ್‌(592 ಅಂಕ-294 ಮತ್ತು 298) ಅವರಿಗಿಂತ ಕೇವಲ ಎರಡು ಅಂಕಗಳಿಂದ ಹಿಂದೆ ಇದ್ದರು.

ಭಾಕರ್‌ ಅವರು ಈಗಾಗಲೇ ಸ್ವಾತಂತ್ರ್ಯಾನಂತರದ ಒಲಿಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಎಂಬ ಇತಿಹಾಸ ಸೃಷ್ಟಿಸಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು, ಆನಂತರ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಇನ್ನೊಂದು ಕಂಚು ಗಳಿಸಿದ್ದಾರೆ.

Read More
Next Story