Paris Olympics 2024|  ಟೇಬಲ್‌ ಟೆನಿಸ್‌ ನಲ್ಲಿ 16 ನೇ ಸುತ್ತು ತಲುಪಿದ ಮಣಿಕಾ ಬಾತ್ರಾ
x

Paris Olympics 2024| ಟೇಬಲ್‌ ಟೆನಿಸ್‌ ನಲ್ಲಿ 16 ನೇ ಸುತ್ತು ತಲುಪಿದ ಮಣಿಕಾ ಬಾತ್ರಾ


ಫ್ರಾನ್ಸ್‌ನ ಉನ್ನತ ಶ್ರೇಯಾಂಕದ ಆಟಗಾರ್ತಿ ಪ್ರಿತಿಕಾ ಪವಾಡೆ ಅವರನ್ನು 4-0 ಅಂತರದಿಂದ ಸೋಲಿಸಿದ ಮಣಿಕಾ ಬಾತ್ರಾ, ಒಲಿಂಪಿಕ್ ಗೇಮ್ಸ್ ಸಿಂಗಲ್ಸ್ ಸ್ಪರ್ಧೆಯಲ್ಲಿ 16 ರ ಸುತ್ತು ತಲುಪಿದ ಮೊದಲ ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿ ಎನಿಸಿಕೊಂಡರು.

2018 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗಳಿಸಿದ್ದ ಮಣಿಕಾ(29), ಪ್ರಿತಿಕಾ ಪವಾಡೆ(19) ಅವರನ್ನು 11-9, 11-6, 11-9, 11-7 ರಲ್ಲಿ ಸೋಳಿಸಿದರು. ಪ್ರಿತಿಕಾ ಅವರ ಪೋಷಕರು ಮೂಲತಃ ಪುದುಚೇರಿಯವರಾಗಿದ್ದು, 2003 ರಲ್ಲಿ ಫ್ರಾನ್ಸ್ಗೆ ವಲಸೆ ಬಂದಿದ್ದರು.

ಮಣಿಕಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಿಂಗಲ್ಸ್‌ನ 32 ರ ಸುತ್ತಿಗೆ ಪ್ರವೇಶಿಸಿದ ಭಾರತದ ಮೊದಲ ಮಹಿಳಾ ಟೇಬಲ್ ಟೆನಿಸ್ ಆಟಗಾರ್ತಿ ಆಗಿದ್ದರು. ಪ್ಯಾರಿಸ್‌ನಲ್ಲಿ ಸೋಮವಾರ (ಜುಲೈ 29) ಒಂದು ಹೆಜ್ಜೆ ಮುಂದೆ ಇರಿಸಿದರು.

ಅಚಂತಾ ಶರತ್ ಕಮಲ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ 32 ರ ಸುತ್ತು ತಲುಪಿದ್ದರು. ಮಣಿಕಾ ಪ್ರಸ್ತುತ ವಿಶ್ವ ರ‍್ಯಾಂಕಿಂಗ್‌ನಲ್ಲಿ 28ನೇ ಸ್ಥಾನದಲ್ಲಿದ್ದು, ಪಾವಡೆಗಿಂತ 10 ಸ್ಥಾನ ಕೆಳಗಿದಿದ್ದಾರೆ.

Read More
Next Story