
ಐಪಿಎಲ್ 2026 ರ ಹರಾಜಿನಲ್ಲಿ ಕ್ಯಾಮರೂನ್ ಗ್ರೀನ್ ಮತ್ತು ಮಥೀಶಾ ಪತಿರಾನ ಅಗ್ರ ಎರಡು ಖರೀದಿದಾರರು.
https://thefederal.com/sports/cricket/ipl-2026-auction-top-10-buys-cameron-green-1-221034
ಐಪಿಎಲ್ 2026 ಹರಾಜು: ಟಾಪ್ 10 ದುಬಾರಿ ಆಟಗಾರರು ಯಾರ್ಯಾರು?
ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಬರೋಬ್ಬರಿ 25.20 ಕೋಟಿ ರೂ. ನೀಡಿ ಖರೀದಿಸಿದೆ. ಈ ಮೂಲಕ ಗ್ರೀನ್ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ 'ವಿದೇಶಿ ಆಟಗಾರ' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಂಗಳವಾರ (ಡಿಸೆಂಬರ್ 16) ಅಬುಧಾಬಿಯಲ್ಲಿ ನಡೆಯುತ್ತಿರುವ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಹರಾಜು ಪ್ರಕ್ರಿಯೆಯಲ್ಲಿ ಹಣದ ಮಳೆಯೇ ಹರಿದಿದೆ. ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಸಾರ್ವಕಾಲಿಕ ದಾಖಲೆಯ ಬೆಲೆಗೆ ಮಾರಾಟವಾಗಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಇಬ್ಬರು ಅನ್ ಕ್ಯಾಪ್ಡ್ (ರಾಷ್ಟ್ರೀಯ ತಂಡಕ್ಕೆ ಆಡದ) ಭಾರತೀಯ ಆಟಗಾರರಿಗೆ ಕೋಟಿ ಕೋಟಿ ಸುರಿಯುವ ಮೂಲಕ ಅಚ್ಚರಿ ಮೂಡಿಸಿದೆ.
ದಾಖಲೆ ಬರೆದ ಕ್ಯಾಮರೂನ್ ಗ್ರೀನ್
ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಬರೋಬ್ಬರಿ 25.20 ಕೋಟಿ ರೂ. ನೀಡಿ ಖರೀದಿಸಿದೆ. ಈ ಮೂಲಕ ಗ್ರೀನ್ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ 'ವಿದೇಶಿ ಆಟಗಾರ' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಸಹ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ (24.75 ಕೋಟಿ ರೂ.) ಅವರ ದಾಖಲೆಯನ್ನು ಮುರಿದಿದ್ದಾರೆ.
ಒಟ್ಟಾರೆ ಐಪಿಎಲ್ ಇತಿಹಾಸದಲ್ಲಿ, ರಿಷಬ್ ಪಂತ್ (27 ಕೋಟಿ ರೂ.) ಮತ್ತು ಶ್ರೇಯಸ್ ಅಯ್ಯರ್ (26.75 ಕೋಟಿ ರೂ.) ನಂತರ ಗ್ರೀನ್ ಮೂರನೇ ಅತಿ ದುಬಾರಿ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಸಿಎಸ್‌ಕೆ ಅಚ್ಚರಿಯ ನಡೆ: ಅನ್ ಕ್ಯಾಪ್ಡ್ ಆಟಗಾರರಿಗೆ ಜಾಕ್ ಪಾಟ್!
ಸ್ಟಾರ್ ಆಟಗಾರರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಇಬ್ಬರು ಯುವ ಭಾರತೀಯ ಆಲ್ ರೌಂಡರ್‌ಗಳಿಗೆ ಭಾರಿ ಮೊತ್ತ ನೀಡಿ ಎಲ್ಲರ ಹುಬ್ಬೇರಿಸಿದೆ.
1. ಪ್ರಶಾಂತ್ ವೀರ್: 14.20 ಕೋಟಿ ರೂ.
2. ಕಾರ್ತಿಕ್ ಶರ್ಮಾ: 14.20 ಕೋಟಿ ರೂ.
ಇವರಿಬ್ಬರೂ ರಾಷ್ಟ್ರೀಯ ತಂಡಕ್ಕೆ ಇನ್ನೂ ಪದಾರ್ಪಣೆ ಮಾಡದ ಆಟಗಾರರಾಗಿದ್ದರೂ, ಸಿಎಸ್‌ಕೆ ಫ್ರಾಂಚೈಸಿ ಇವರ ಮೇಲೆ ದೊಡ್ಡ ಮಟ್ಟದ ನಂಬಿಕೆ ಇಟ್ಟು ಹೂಡಿಕೆ ಮಾಡಿದೆ.
ಕೆಕೆಆರ್ ತೆಕ್ಕೆಗೆ ಪತಿರಾನ
ಶ್ರೀಲಂಕಾದ ವೇಗಿ ಮತೀಶ ಪತಿರಾನ ಅವರನ್ನು ಕೆಕೆಆರ್ ತಂಡವು 18 ಕೋಟಿ ರೂ. ನೀಡಿ ಖರೀದಿಸಿದೆ. ಕಳೆದ ಸೀಸನ್‌ನಲ್ಲಿ ಸಿಎಸ್‌ಕೆ ಪರ ಆಡಿದ್ದ ಪತಿರಾನ ಅವರನ್ನು ಈ ಬಾರಿ ಕೆಕೆಆರ್ ತನ್ನದಾಗಿಸಿಕೊಂಡಿದೆ.
ಐಪಿಎಲ್ 2026 ಹರಾಜಿನ ಟಾಪ್ 10 ದುಬಾರಿ ಆಟಗಾರರ ಪಟ್ಟಿ (ಸದ್ಯದ ಮಾಹಿತಿ ಪ್ರಕಾರ):
1. ಕ್ಯಾಮರೂನ್ ಗ್ರೀನ್ (KKR) - 25.20 ಕೋಟಿ ರೂ.
2. ಮತೀಶ ಪತಿರಾನ (KKR) - 18 ಕೋಟಿ ರೂ.
3. ಪ್ರಶಾಂತ್ ವೀರ್ (CSK) - 14.20 ಕೋಟಿ ರೂ.
4. ಕಾರ್ತಿಕ್ ಶರ್ಮಾ (CSK) - 14.20 ಕೋಟಿ ರೂ.
5. ಆಕಿಬ್ ನಬಿ (DC) - 8.40 ಕೋಟಿ ರೂ.
6. ರವಿ ಬಿಷ್ಣೋಯಿ (RR) - 7.20 ಕೋಟಿ ರೂ.
7. ವೆಂಕಟೇಶ್ ಅಯ್ಯರ್ (RCB) - 7 ಕೋಟಿ ರೂ.
8. ತೇಜಸ್ವಿ ದಹಿಯಾ (KKR) - 3 ಕೋಟಿ ರೂ.
9. ಮುಕುಲ್ ಚೌಧರಿ (LSG) - 2.60 ಕೋಟಿ ರೂ.
10. ಅಕೀಲ್ ಹೊಸೈನ್ (CSK) - 2 ಕೋಟಿ ರೂ.

