ಐಪಿಎಲ್ 2024: 10 ಪಂದ್ಯ, 35 ಕೋಟಿ ಜನರಿಂದ ವೀಕ್ಷಣೆ
x
ಚೆನ್ನೈ ಸೂಪರ್‌ ಕಿಂಗ್ಸ್‌ ಅಭಿಮಾನಿಗಳು

ಐಪಿಎಲ್ 2024: 10 ಪಂದ್ಯ, 35 ಕೋಟಿ ಜನರಿಂದ ವೀಕ್ಷಣೆ


ಮುಂಬೈ, ಏಪ್ರಿಲ್ 4 -ಇಂಡಿಯನ್ ಪ್ರೀಮಿಯರ್ ಲೀಗ್ ನ ಮೊದಲ 10 ಪಂದ್ಯಗಳನ್ನು 35 ಕೋಟಿ ಮಂದಿ ವೀಕ್ಷಿಸಿದ್ದಾರೆ ಎಂದು ಡಿಸ್ನಿ ಸ್ಟಾರ್‌ ಹೇಳಿದೆ.ಇದು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ನಡೆದ ಋತು ಸೇರಿದಂತೆ ಟೂರ್ನಿಯ ಹಿಂದಿನ ಯಾವುದೇ ಆವೃತ್ತಿಗಿಂತ ಹೆಚ್ಚು ಎಂದು ಅಧಿಕೃತ ಪ್ರಸಾರಕರು ಗುರುವಾರ ಹೇಳಿದ್ದಾರೆ.

ಡಿಸ್ನಿ ಸ್ಟಾರ್ ಬಿಡುಗಡೆ ಮಾಡಿದ ಬಿಎಆರ್‌ಸಿ ಮಾಹಿತಿ ಪ್ರಕಾರ, ಪಂದ್ಯಾವಳಿಯನ್ನು 8028 ಕೋಟಿ ನಿಮಿಷ ವೀಕ್ಷಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ. 20 ಹೆಚ್ಚು. ʻಟಾಟಾ ಐಪಿಎಲ್ 2024ರ ದಾಖಲೆ ಮುರಿಯುವ ಅಂಕಿಅಂಶಗಳಿಂದ ದಿಗ್ಮೂಢರಾಗಿದ್ದೇವೆ. ಡಿಸ್ನಿ ಸ್ಟಾರ್ ನ 17 ನೇ ಸೀಸನ್ ಅಭೂತಪೂರ್ವವಾಗಿ ಆರಂಭಗೊಂಡಿದೆ,ʼ ಎಂದು ಡಿಸ್ನಿ ಸ್ಟಾರ್ (ಕ್ರೀಡೆ) ಮುಖ್ಯಸ್ಥ ಸಂಜೋಗ್ ಗುಪ್ತಾ ತಿಳಿಸಿದ್ದಾರೆ.

ಡಿಸ್ನಿ ಸ್ಟಾರ್ ಐಪಿಎಲ್ ನ್ನು 10 ಭಾಷೆ, 14 ಫೀಡ್‌ಗಳಲ್ಲಿ ಹಾಗೂ ವಿಶೇಷಚೇತನರಿಗಾಗಿ ಭಾರತೀಯ ಸಂಕೇತ ಭಾಷೆಯಲ್ಲಿ ವಿಶೇಷ ಫೀಡ್ ಮಾಡಲಾಗುತ್ತಿದೆ. ಮಾರ್ಚ್ 22 ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಋತುವಿನ ಮೊದಲ ಪಂದ್ಯವನ್ನು 16.8 ಕೋಟಿ ಜನ ವೀಕ್ಷಿಸಿದ್ದಾರೆ. 1,276 ಕೋಟಿ ನಿಮಿಷಗಳ ವೀಕ್ಷಣೆ ಸಮಯ ದಾಖಲಾಗಿದೆ; ಯಾವುದೇ ಋತುವಿನ ಮೊದಲ ದಿನದಲ್ಲಿ ಇದು ಅತ್ಯಧಿಕ.

Read More
Next Story