IPL 2024| ಆರ್‌ಸಿಬಿಗೆ ಆರಂಭಿಕ ಆಘಾತ: ಫಾಫ್-ಕೊಹ್ಲಿ ಔಟ್
x

IPL 2024| ಆರ್‌ಸಿಬಿಗೆ ಆರಂಭಿಕ ಆಘಾತ: ಫಾಫ್-ಕೊಹ್ಲಿ ಔಟ್


ಇಂದು (ಬುಧವಾರ) ಐಪಿಎಲ್ 2024 ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಿವೆ. ಆರ್‌ಸಿಬಿ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ.

ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್‌ಗೆ ಬಂದ ಆರ್‌ಸಿಬಿ ತಂಡದ ಆಟಗಾರರು ಆರಂಭಿಕ ಆಘಾತ ಎದುರಿಸಿದ್ದಾರೆ. ನಾಯಕ ಫಾಫ್ ಡುಪ್ಲೆಸಿಸ್‌ ಕೇವಲ 17ರನ್‌ಗೆ ಔಟಾದರು. ಆನಂತರ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 33 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಸ್ಪೋಟಕ ಬ್ಯಾಟರ್‌ ಪಟೀದಾರ್‌ ಹಾಗೂ ಗ್ರೀನ್‌ ಅವರು ರನ್‌ ಕಲೆ ಹಾಕಲು ಪರದಾಡುತ್ತಿದ್ದಾರೆ. ಸಧ್ಯ ಆರ್‌ಸಿಬಿ 12 ಓವರ್‌ಗೆ 95 ರನ್‌ ಗಳಿಸಿ 2 ವಿಕೆಟ್‌ ಕಳೆದುಕೊಂಡಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ. ಇದು ನಾಕೌಟ್ ಪಂದ್ಯವಾಗಿದ್ದು, ಸೋತ ತಂಡ ನೇರವಾಗಿ ಐಪಿಎಲ್‌ನಿಂದ ಹೊರಬೀಳಲಿದೆ. ಗೆಲ್ಲುವ ತಂಡ ಕ್ವಾಲಿಫೈಯರ್-2ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಬೇಕಾಗಿದೆ. ಮೇ 26 ರಂದು ಫೈನಲ್ ಪಂದ್ಯ ನಡೆಯಲಿದೆ.

Read More
Next Story