ಮಹಿಳಾ ಕ್ರಿಕೆಟ್: ಭಾರತ ಮುಡಿಗೆ ಚೊಚ್ಚಲ ವಿಶ್ವಕಪ್ ಕಿರೀಟ
ದಕ್ಷಿಣ ಆಫ್ರಿಕಾ ತಂಡದ ನಾಯಕಿ ವೋಲ್ವಾರ್ಟ್ ಅವರು ಶತಕ ಸಿಡಿಸಿದರೂ (101 ರನ್) ತಂಡವನ್ನು ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಭಾರತದ ದೀಪ್ತಿ ಶರ್ಮಾ ಅವರು 9.3 ಓವರ್ ಗಳಲ್ಲಿ 39 ರನ್ ನೀಡಿ ಐದು ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿಗೆ ನೆರವಾದರು.
ಮುಂಬೈನಲ್ಲಿ ನಡೆದ ಮಹಿಳಾ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅತಿಥೇಯ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್ ಗಳಿಂದ ಮಣಿಸಿ ಚೊಚ್ಚಲ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತು.
ದೀಪ್ತಿ ಶರ್ಮಾ ಅವರ ಕರಾರುವಕ್ ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆಯಲ್ಲಿ ಸಾಂಘಿಕ ಹೋರಾಟ ಪರಿಣಾಮ ಭಾರತದ ವನಿತೆಯರು ಎದುರಾಳಿ ಅಟಗಾರರನ್ನು ಕಟ್ಟಿ ಹಾಕಿದರು.
ಭಾರತ ತಂಡ ನೀಡಿದ 299 ರನ್ ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 45.3 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 246 ರನ್ ಗಳಿಗೆ ಅಲೌಟ್ ಅಯಿತು.
ದಕ್ಷಿಣ ಆಫ್ರಿಕಾ ತಂಡದ ನಾಯಕಿ ವೋಲ್ವಾರ್ಟ್ ಅವರು ಶತಕ ಸಿಡಿಸಿದರೂ (101 ರನ್) ತಂಡವನ್ನು ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಭಾರತದ ದೀಪ್ತಿ ಶರ್ಮಾ ಅವರು 9.3 ಓವರ್ ಗಳಲ್ಲಿ 39 ರನ್ ನೀಡಿ ಐದು ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿಗೆ ನೆರವಾದರು.
ಇನ್ನು ಟಾಸ್ ಸೋತು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತದ ತಂಡದ ಪರವಾಗಿ ಶಫಾಲಿ ವರ್ಮಾ 87 ರನ್ ಸಿಡಿಸಿದರೆ, ಸ್ಮೃತಿ ಮಂಧನ 45 ರನ್ ಗಳಿಸಿದರು. ದೀಪ್ತಿ ಶರ್ಮಾ ವೈಯಕ್ತಿಕನ 58 ರನ್ ಸಿಡಿಸಿ ತಂಡದ ಮೊತ್ತವನ್ನು ಮುನ್ನೂರರ ಗಡಿಗೆ ತೆಗೆದುಕೊಂಡು ಹೋಗಲು ನೆರವಾದರು.
ಸ್ಮೃತಿ ಮಂದಾನ 45 ರನ್ ಗಳಿಸಿ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ದೀರ್ಘಕಾಲದ ವಿಶ್ವಕಪ್ ದಾಖಲೆ ಮುರಿದರು.