ಕ್ರೀಡಾಪಟುಗಳಿಗೆ ಡಿಜಿಟಲ್ ಪ್ರಮಾಣಪತ್ರ: ಅನುರಾಗ್ ಠಾಕೂರ್
x

ಕ್ರೀಡಾಪಟುಗಳಿಗೆ ಡಿಜಿಟಲ್ ಪ್ರಮಾಣಪತ್ರ: ಅನುರಾಗ್ ಠಾಕೂರ್


ನವದೆಹಲಿ, ಫೆ.29 - ನೋಂದಾಯಿತ ಕ್ರೀಡಾಪಟುಗಳಿಗೆ ಸರ್ಕಾರ ಡಿಜಿಟಲ್ ಪ್ರಮಾಣಪತ್ರ ನೀಡಲಿದೆ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಗುರುವಾರ ಹೇಳಿದ್ದಾರೆ.

ʻಡಿಜಿಟಲ್ ಪ್ರಮಾಣಪತ್ರವು ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸುವ ದಿನಾಂಕಗಳನ್ನು ಹೊಂದಿರುತ್ತದೆ ಮತ್ತು ಅವರ ಸಾಧನೆಗಳ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆʼ ಎಂದು ಠಾಕೂರ್ ಎಕ್ಸ್‌ ನಲ್ಲಿ ಬರೆದಿದ್ದಾರೆ.

ಡಿಜಿಲಾಕರ್ ಮೂಲಕ ಅರ್ಹತೆ ಮತ್ತು ಭಾಗವಹಿಸುವಿಕೆ ಪ್ರಮಾಣಪತ್ರಗಳನ್ನು ಬಿಡುಗಡೆ ಮಾಡುವಂತೆ ಸಚಿವಾಲಯ ಎಲ್ಲಾ ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ (ಎನ್‌ಎಸ್‌ಎಫ್)ಗಳಿಗೆ ನಿರ್ದೇಶನ ನೀಡಿದೆ.

ರಾಷ್ಟ್ರೀಯ ಕ್ರೀಡಾ ದಿನವಾದ 2023ರ ಆಗಸ್ಟ್ 29ರಂದು ಕ್ರೀಡಾಪಟುಗಳು ಮತ್ತು ರಾಷ್ಟ್ರೀಯ ಕ್ರೀಡಾ ಫೆಡರೇಶನ್ (ಎನ್‌ಎಸ್‌ಎಫ್) ಗಳ ಪ್ರಕ್ರಿಯೆಗಳನ್ನು ಸರಳಗೊಳಿಸುವುದಾಗಿ ಸಚಿವರು ಘೋಷಿಸಿದ್ದರು.

ʻಕ್ರೀಡಾಪಟು ಮೊದಲು ನೀತಿ ಪ್ರಕಾರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಉಪಕ್ರಮವಾದ ಡಿಜಿಲಾಕರ್ ಮೂಲಕ ಕ್ರೀಡಾಪಟುಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ. ದಾಖಲೆಗಳ ಸುರಕ್ಷತೆ ಮತ್ತು ಎನ್‌ಎಸ್‌ಎಫ್‌ಗಳ ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಉತ್ತೇಜಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 2024 ಜೂನ್ 1 ರಿಂದ ಡಿಜಿಲಾಕರ್ ಮೂಲಕ ನೀಡುವ ಪ್ರಮಾಣಪತ್ರಗಳು ಮಾತ್ರ ಮಾನ್ಯʼ ಎಂದು ಸಚಿವರು ಹೇಳಿದರು.

Read More
Next Story