Paris Olympics 2024 | ಶೂಟರ್ ಮನು ಭಾಕರ್ ಫೈನಲ್‌ಗೆ
ಕಣದಲ್ಲಿದ್ದ ಮತ್ತೊಬ್ಬ ಭಾರತೀಯ ಶೂಟರ್ ರಿದಮ್ ಸಾಂಗ್ವಾನ್ 15ನೇ ಸ್ಥಾನ ಪಡೆದು ಫೈನಲ್ ಗೆ ಪ್ರವೇಶ ಪಡೆಯುವಲ್ಲಿ ವಿಫಲರಾದರು. ಅವರು 573 ಅಂಕ ಗಳಿಸಿದರು.
ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಫೈನಲ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಶೂಟರ್ ಎಂಬ ಖ್ಯಾತಿಗೆ ಪಾತ್ರರಾದರು.
ಫ್ರಾನ್ಸ್‌ನ ಚಟೆರೋನಲ್ಲಿ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಕರ್(22) 580 ಅಂಕಗಳೊಂದಿಗೆ ಮೂರನೇ ಸ್ಥಾನ ಗಳಿಸಿ, ಫೈನಲ್‌ಗೆ ಪ್ರವೇಶಿಸಿದರು. ಅಂತಿಮ ಸ್ಪರ್ಧೆ ಭಾನುವಾರ ನಡೆಯಲಿದೆ. ಕಣದಲ್ಲಿದ್ದ ಮತ್ತೊಬ್ಬ ಭಾರತೀಯ ಕ್ರೀಡಾಪಟು ರಿದಮ್ ಸಾಂಗ್ವಾನ್ 15ನೇ ಸ್ಥಾನ ಪಡೆದು, ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ಅವರು 573 ಅಂಕ ಗಳಿಸಿದರು. ಹಂಗೇರಿಯ ವೆರೋನಿಕಾ ಮೇಜರ್ 582 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರು.
ಟೋಕಿಯೊದಲ್ಲಿ ನಿರಾಶೆ: ಮೂರು ವರ್ಷಗಳ ಹಿಂದೆ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಭಾಕರ್, ಒಲಿಂಪಿಕ್ ಪದಕ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಕಿರಿಯ ವಯಸ್ಸಿನಲ್ಲೇ ಉತ್ತಮ ಸಾಧನೆಗಾಗಿ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ ಹರಿಯಾಣದ ಭಾಕರ್, ಉತ್ತಮ ಅರ್ಹತಾ ಪ್ರದರ್ಶನ ನೀಡಿದರು.97 ಪಾಯಿಂಟ್‌ಗಳೊಂದಿಗೆ ಶುಭಾರಂಭ ಮಾಡಿ, ಸರಣಿ 1ರ ಅಂತ್ಯದಲ್ಲಿ ನಾಲ್ಕನೇ ಸ್ಥಾನ ಪಡೆದರು. ಎರಡನೇ ಸರಣಿಯಲ್ಲೂ 97 ಅಂಕ ಗಳಿಸಿ, ನಾಲ್ಕನೇ ಸ್ಥಾನದಲ್ಲಿ ಉಳಿದರು. ಮೂರನೇ ಸರಣಿಯಲ್ಲಿ ಅತ್ಯುತ್ತಮ 98 ಅಂಕ ಗಳಿಸಿ, ಅಗ್ರ ಎರಡನೇ ಸ್ಥಾನಕ್ಕೆ ಮರಳಿ ದರು. ಐದನೇ ಸರಣಿಯಲ್ಲಿ 8 ನೇ ಸ್ಥಾನ ಗಳಿಸಿದರು. ಅಂತಿಮವಾಗಿ ಫೈನಲ್ಗೆ ಅರ್ಹತೆ ಪಡೆದರು.
ಫೈನಲ್ ಗೆ ಅರ್ಹತೆ ಪಡೆದವರು: ವೆರೋನಿಕಾ ಮೇಜರ್ (ಹಂಗೇರಿ): 582, ಓ ಯೆ ಜಿನ್ (ಕೊರಿಯಾ): 582,ಮನು ಭಾಕರ್ (ಭಾರತ): 580, ಥು ವಿನ್ಹ್ ಟ್ರಿನ್ಹ್ (ವಿಯೆಟ್ನಾಂ): 578, ಕಿಮ್ ಯೆಜಿ (ಕೊರಿಯಾ): 578, ಲಿ ಕ್ಸು (ಚೀನಾ): 577, ಸೆವ್ವಲ್ ತರ್ಹಾನ್ (ತುರ್ಕಿಯೆ): 577, ಜಿಯಾಂಗ್ ರಾಂಕ್ಸಿನ್ (ಚೀನಾ): ೫೭೭.