Paris Olympics| ಶೂಟರ್ ಅರ್ಜುನ್ ಬಬುಟಾಗೆ ಕಂಚಿನ ಪದಕ ಮಿಸ್‌
x

Paris Olympics| ಶೂಟರ್ ಅರ್ಜುನ್ ಬಬುಟಾಗೆ ಕಂಚಿನ ಪದಕ ಮಿಸ್‌


ಸೋಮವಾರ (ಜುಲೈ 29): ತಮ್ಮ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕದ ಸನಿಹಕ್ಕೆ ಬಂದ ಭಾರತದ ಶೂಟರ್ ಅರ್ಜುನ್ ಬಬುಟಾ, ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದರು.

ಬಬುಟಾ(25) ಒಟ್ಟು 208.4 ಅಂಕ ಗಳಿಸಿದರು. 10.7 ರಲ್ಲಿ ಪ್ರಾರಂಭಿಸಿ, ಆನಂತರ 10.2, ಮೂರನೇ ಹೊಡೆತ 10.5, ನಾಲ್ಕನೇ ಪ್ರಯತ್ನ 10.4 ರಿಂದ ಮೂರನೇ ಸ್ಥಾನಕ್ಕೆ ಏರಿದರು. ಮೊದಲ ಸರಣಿಯನ್ನು 10.6 ದೊಂದಿಗೆ ಮುಗಿಸಿದರು.

ಎರಡನೇ ಸರಣಿಯನ್ನು 10.7 ರೊಂದಿಗೆ ಪ್ರಾರಂಭಿಸಿ, 10.5, 10.8ರ ಮೂಲಕ ಎರಡನೇ ಸ್ಥಾನ ಗಳಿಸಿದರು. ಇದರಿಂದ ವಿಶ್ವ ದಾಖಲೆ ಹೊಂದಿರುವ ಚೀನಾದ ಶೆಂಗ್ ಲಿಹಾವೊ ನಡುವಿನ ಕೊರತೆ 0.1 ಪಾಯಿಂಟ್‌ಗೆ ತಗ್ಗಿತು. ಆದರೆ, ಫಾರ್ಮ್ ಉಳಿಸಿಕೊಳ್ಳಲು ಸಾಧ್ಯವಾಗದೆ ಪದಕ ವಂಚಿತರಾದರು.

ಶೆಂಗ್‌ ಲಿಹಾವೊ 252.2 ರ ಒಲಿಂಪಿಕ್ ದಾಖಲೆಯೊಂದಿಗೆ ಅಗ್ರ ಸ್ಥಾನ ಪಡೆದರು. ಸ್ವೀಡನ್‌ನ ವಿಕ್ಟರ್ ಲಿಂಡ್‌ಗ್ರೆನ್ 251.4 ಅಂಕಗಳೊಂದಿಗೆ ಬೆಳ್ಳಿ ಹಾಗೂ ಕ್ರೊಯೇಷಿಯಾದ ಮಿರಾನ್ ಮಾರಿಸಿಕ್ (230) ಕಂಚು ಪಡೆದರು.

Read More
Next Story