ಚೆಸ್ ವಿಶ್ವ ಚಾಂಪಿಯನ್‌ಶಿಪ್ ಗೆಲ್ಲಲು ಸಕಲ ಪ್ರಯತ್ನ: ಡಿ. ಗುಕೇಶ್
x

ಚೆಸ್ ವಿಶ್ವ ಚಾಂಪಿಯನ್‌ಶಿಪ್ ಗೆಲ್ಲಲು ಸಕಲ ಪ್ರಯತ್ನ: ಡಿ. ಗುಕೇಶ್


ಕ್ಯಾಂಡಿಡೇಟ್ಸ್ ಚೆಸ್ ಟೂರ್ನಮೆಂಟ್ ಗೆದ್ದು ಇತಿಹಾಸ ನಿರ್ಮಿಸಿರುವ ಚೆನ್ನೈನ ಡಿ. ಗುಕೇಶ್, ʻ ವಿಶ್ವ ಚಾಂಪಿಯನ್‌ಶಿಪ್‌ ನಲ್ಲಿ ಆಡುವುದು ನನ್ನ ಕನಸು. ಈಗ ಅವಕಾಶ ಸಿಕ್ಕಿದ್ದು, ಪ್ರಶಸ್ತಿ ಗೆಲ್ಲಲು ಎಲ್ಲವನ್ನೂ ಮಾಡುತ್ತೇನೆ. ಫಲಿತಾಂಶಗಳು ನನ್ನ ಪರವಾಗಿರುತ್ತದೆ ಎಂದು ಭಾವಿಸುತ್ತೇನೆʼ ಎಂದು ಹೇಳಿದ್ದಾರೆ.

ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. 2014 ರಲ್ಲಿ ವಿಶ್ವನಾಥನ್ ಆನಂದ್ ನಂತರ ಚಾಂಪಿಯನ್‌ಶಿಪ್‌ಗಾಗಿ ಆಡುತ್ತಿರುವ ಎರಡನೇ ಭಾರತೀಯ. 17 ನೇ ವಯಸ್ಸಿನ ಅವರು ಜಾಗತಿಕ ಚೆಸ್ ಕೂಟದ ಅತ್ಯಂತ ಕಿರಿಯ ಆಟಗಾರ. ಟೊರೊಂಟೊದಲ್ಲಿ ನಡೆದ ಫಿಡೆ ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿಯನ್ನುಗೆದ್ದು, ಚಾಂಪಿಯನ್‌ಶಿಪ್‌ಗೆ ಆಡಲು ಆಯ್ಕೆಯಾಗಿದ್ದಾರೆ.

ಗುಕೇಶ್ 11 ವರ್ಷದವರಾಗಿದ್ದಾಗ, ಚಾಂಪಿಯನ್‌ಶಿಪ್ ನ ಗುರಿ ಹಾಕಿಕೊಂಡರು. ಅವರ ತರಬೇತುದಾರ ವಿಷ್ಣು ಪ್ರಸನ್ನ ಅವರು ಗುಕೇಶ್‌ ಅವರ ʻಆಟದ ಮೇಲಿನ ಲಕ್ಷ್ಯ ಮತ್ತು ಪ್ರೀತಿʼ ಕುರಿತು ಹೇಳಿದ್ದಾರೆ. ಅವರ ಪೋಷಕರು, ಡಾ. ರಜನಿಕಾಂತ್ ಮತ್ತು ಸೂಕ್ಷ್ಮಜೀವಿಶಾಸ್ತ್ರಜ್ಞೆ ಪದ್ಮಾ, ತಮ್ಮ ಮಗ 14 ಪಂದ್ಯಗಳಲ್ಲಿ ಮಗ ಗೆದ್ದಾಗ ಉತ್ಸುಕರಾಗಿದ್ದರು. ತೀವ್ರ ಆರಂಕಕ್ಕೊಳಗಾಗಿದ್ದ ಅವರ ತಂದೆ ಫೈನಲ್ ಪಂದ್ಯವನ್ನು ವೀಕ್ಷಿಸಲಿಲ್ಲ.

ಗುಕೇಶ್ ಅವರು ತಮ್ಮ ಸಾಮರ್ಥ್ಯ, ಆಯ್ಕೆ, ಒಲವುಗಳ ಬಗ್ಗೆ ʻಫೆಡರಲ್‌ʼನೊಂದಿಗೆ ಮಾತನಾಡಿದರು.

ವಿಶ್ವ ಚಾಂಪಿಯನ್‌ಶಿಪ್ ಬಗ್ಗೆ ಹೇಳಿ

ನಾನು ನಿಜವಾಗಿಯೂ ರೋಮಾಂಚನಗೊಂಡಿದ್ದೇನೆ ಮತ್ತು ಉತ್ಸುಕನಾಗಿದ್ದೇನೆ. ವಿಶ್ವ ಚಾಂಪಿಯನ್‌ಶಿಪ್‌ಗೆ ಆಡುವುದು ನನ್ನ ಜೀವನದ ಕನಸಾಗಿತ್ತು. ಈಗ ಅವಕಾಶ ಸಿಕ್ಕಿದ್ದು, ಪ್ರಶಸ್ತಿ ಗೆಲ್ಲಲು ಸಾಧ್ಯವಿರುವುದನ್ನೆಲ್ಲ ಮಾಡುತ್ತೇನೆ. ಫಲಿತಾಂಶಗಳು ನನ್ನ ಪರವಾಗಿರುತ್ತದೆ ಎಂದು ಕೊಂಡಿದ್ದೇನೆ.

ನಿಮ್ಮ ಮತ್ತು ನಿಮ್ಮ ಎದುರಾಳಿಯ ಸಾಮರ್ಥ್ಯಗಳೇನು?

ನಾವಿಬ್ಬರೂ ಉತ್ತಮ ಆಟಗಾರರು. ನಾವಿಬ್ಬರೂ ವಿವಿಧ ರೀತಿಯ ಚೆಸ್ ಆಟಗಳನ್ನು ಆಡುವ ಸಾಮರ್ಥ್ಯ ಹೊಂದಿದ್ದೇವೆ. ನಿಸ್ಸಂಶಯವಾಗಿ, ಅವರು ಬಹಳ ಅನುಭವಿ ಮತ್ತು ದೀರ್ಘಕಾಲದಿಂದ ಅಗ್ರಸ್ಥಾನದಲ್ಲಿದ್ದಾರೆ. ಆದರೆ, ನನಗೆ ನನ್ನ ಮೇಲೆ ಸಂಪೂರ್ಣ ನಂಬಿಕೆ ಮತ್ತು ಆತ್ಮವಿಶ್ವಾಸವಿದೆ. ಹೀಗಾಗಿ ಇದೊಂದು ಕುತೂಹಲಕಾರಿ ಪಂದ್ಯವಾಗಲಿದೆ.

ಈ ಸ್ಥಾನ ತಲುಪಲು ನೀವು ಬಾಲ್ಯವನ್ನು ತ್ಯಾಗ ಮಾಡಿದ್ದೀರಿ ಎಂದು ಕೋಚ್ ಹೇಳುತ್ತಾರೆ. ಬಾಲ್ಯದಲ್ಲಿ ನೀವು ಕಳೆದುಕೊಂಡಿದ್ದೇನು?

ನಾನು ತಪ್ಪಿಸಿಕೊಂಡ ಕೆಲವು ವಿಷಯಗಳಿವೆ. ಆದರೆ, ಇತರ ಮಕ್ಕಳು ಹೊಂದಿಲ್ಲದ ಅನೇಕ ವಿಷಯಗಳನ್ನು ಹೊಂದಿರುವ ಅದೃಷ್ಟಶಾಲಿಯಾಗಿ ನಾನು. ನಾನು ಯಾವುದರಲ್ಲಿ ಉತ್ತಮ, ಏನು ಮಾಡಲು ಇಷ್ಟಪಡುತ್ತೇನೋ ಅದನ್ನು ವೃತ್ತಿಯನ್ನಾಗಿ ಮಾಡಿಕೊಳ್ಳುವುದು ಸಾಧ್ಯವಾಯಿತು. ಇದರಿಂದ ನನಗೆ ಖುಷಿಯಾಗಿದೆ. ನನ್ನ ತರಬೇತುದಾರ ನಾನು ಮಾಡಿದ ತ್ಯಾಗವನ್ನು ಪ್ರಸ್ತಾಪಿಸಿದ್ದಾರೆ. ಶಾಲಾ ದಿನಗಳನ್ನು ಕಳೆದುಕೊಂಡಿದ್ದೇನೆ, ಸ್ನೇಹಿತರೊಂದಿಗೆ ಭೇಟಿಯಾಗಲು ಆಗುತ್ತಿಲ್ಲ. ಇದು ಪ್ರತಿ ಮಗುವಿನ ಸಹಜ ವಿಷಯಗಳು. ಆದರೆ, ನಾನು ನನ್ನ ನಿರ್ಧಾರಕ್ಕೆ ವಿಷಾದಿಸುವುದಿಲ್ಲ.

ನೀವು ಇಷ್ಟಪಡುವ ಇತರ ಕ್ರೀಡೆಗಳು ಯಾವುವು?

ನಾನು ಮೊದಲು ಕ್ರಿಕೆಟ್ ಇಷ್ಟಪಡುತ್ತಿದ್ದೆ. ಈಗ ಟೆನಿಸ್. ಇತ್ತೀಚೆಗೆ ಆಗಾಗ ಟೆನಿಸ್ ಆಡುತ್ತೇನೆ. ಆದರೆ, ನಾನು ವಿವಿಧ ಕ್ರೀಡೆಗಳನ್ನು ಅನುಸರಿಸುತ್ತೇನೆ. ಏಕೆಂದರೆ, ನಾನು ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದೇನೆ.

Read More
Next Story