ಮಾಜಿ ಕ್ರಿಕೆಟಿಗ ಅನ್ಷುಮನ್ ಗಾಯಕ್ವಾಡ್ ನಿಧನ
x

ಮಾಜಿ ಕ್ರಿಕೆಟಿಗ ಅನ್ಷುಮನ್ ಗಾಯಕ್ವಾಡ್ ನಿಧನ


ಹೊಸದಿಲ್ಲಿ, ಜು.31- ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಾಜಿ ಕ್ರಿಕೆಟಿಗ ಅನ್ಷುಮನ್ ಗಾಯಕ್ವಾಡ್ ಬುಧವಾರ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.

40 ಟೆಸ್ಟ್ ಮತ್ತು 15 ಒಂದು ದಿನಗಳ ಪಂದ್ಯಗಳನ್ನು ಆಡಿರುವ ಅವರು 2000 ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದ ಭಾರತೀಯ ತಂಡದ ಕೋಚ್ ಆಗಿದ್ದರು.

ಗಾಯಕ್ವಾಡ್ ಅವರು ಕಳೆದ ತಿಂಗಳು ದೇಶಕ್ಕೆ ಹಿಂತಿರುಗುವ ಮೊದಲು ಲಂಡನ್ನಿನ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ ರಕ್ತದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಚಿಕಿತ್ಸೆಗೆ ಬಿಸಿಸಿಐ 1 ಕೋಟಿ ರೂ. ನೆರವು ನೀಡಿತ್ತು. 1983 ರ ವಿಶ್ವಕಪ್ ವಿಜೇತ ತಂಡದ ಸದಸ್ಯರು ಕ್ರಿಕೆಟಿಗನಿಗೆ ಸಹಾಯ ಮಾಡಿದರು.

ತಮ್ಮ 22 ವರ್ಷಗಳ ವೃತ್ತಿಜೀವನದಲ್ಲಿ 205 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಆನಂತರ ಭಾರತ ತಂಡದ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು. 1998 ರಲ್ಲಿ ಶಾರ್ಜಾದಲ್ಲಿ ಮತ್ತು 1999 ರಲ್ಲಿ ಫಿರೋಜ್‌ಶಾ ಕೋಟ್ಲಾದಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್‌ ಪಡೆದಿದ್ದು ಅವರ ತರಬೇತಿ ಜೀವನದ ಅದ್ಭುತ ಕ್ಷಣಗಳಾಗಿದ್ದವು.

Read More
Next Story