Football legend Messi meets Rahul Gandhi; Friendly match with Telangana CM
x

ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಹಾಗೂ ಫುಟ್ಬಾಲ್ ದಿಗ್ಗಜ ಮೆಸ್ಸಿ

ಫುಟ್ಬಾಲ್ ದಿಗ್ಗಜ ಮೆಸ್ಸಿ-ರಾಹುಲ್‌ ಗಾಂಧಿ ಭೇಟಿ; ತೆಲಂಗಾಣ ಸಿಎಂ ಜೊತೆ ಫ್ರೆಂಡ್ಲಿ ಮ್ಯಾಚ್‌

ರಾಹುಲ್ ಗಾಂಧಿ ಸಂಜೆ 4.30 ಕ್ಕೆ ವಿಶೇಷ ವಿಮಾನದಲ್ಲಿ ತೆಲಂಗಾಣಕ್ಕೆ ಆಗಮಿಸಲಿದ್ದು, ನಂತರ ಮೆಸ್ಸಿ ತಂಗಲಿರುವ ತಾಜ್ ಫಲಕ್ನುಮಾ ಪ್ಯಾಲೇಸ್ ಹೋಟೆಲ್‌ಗೆ ತೆರಳಲಿದ್ದಾರೆ.


Click the Play button to hear this message in audio format

ಭಾರತ ಪ್ರವಾಸದಲ್ಲಿರುವ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅವರನ್ನು ಇಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿಯಾಗಲಿದ್ದಾರೆ. ಅವರು ಶನಿವಾರ (ಡಿ.13) ಸಂಜೆ ತೆಲಂಗಾಣದ ರಾಜೀವ್‌ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಭಾಗವಹಿಸುವ ಗೋಟ್ ಇಂಡಿಯಾ ಟೂರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ರಾಹುಲ್ ಗಾಂಧಿ ಸಂಜೆ 4.30 ಕ್ಕೆ ವಿಶೇಷ ವಿಮಾನದಲ್ಲಿ ತೆಲಂಗಾಣಕ್ಕೆ ಆಗಮಿಸಲಿದ್ದು, ನಂತರ ಮೆಸ್ಸಿ ತಂಗಲಿರುವ ತಾಜ್ ಫಲಕ್ನುಮಾ ಪ್ಯಾಲೇಸ್ ಹೋಟೆಲ್‌ಗೆ ತೆರಳಲಿದ್ದಾರೆ. ಮೆಸ್ಸಿ ಹಾಗೂ ರಾಹುಲ್‌ ಗಾಂಧಿ ಭೇಟಿಯ ಹಿನ್ನೆಲೆ ಕ್ರೀಡಾಂಗಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತೆಲಂಗಾಣ ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಮೆಸ್ಸಿ-ರೇವಂತ್‌ ರೆಡ್ಡಿ ನಡುವೆ ಪಂದ್ಯ

ಸಿಂಗರೇಣಿ ಆರ್‌ಆರ್ 9 ಮತ್ತು ಅಪರ್ಣಾ-ಮೆಸ್ಸಿ ಆಲ್ ಸ್ಟಾರ್ಸ್ ತಂಡಗಳ ನಡುವೆ ಸ್ನೇಹಪರ ಪಂದ್ಯ ನಡೆಯಲಿದೆ. ಈ ಎರಡೂ ತಂಡಗಳು 20 ನಿಮಿಷಗಳ ಪಂದ್ಯವನ್ನು ಆಡಲಿವೆ. ಪಂದ್ಯಕ್ಕೆ ಐದು ನಿಮಿಷಗಳ ಮೊದಲು, ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಮತ್ತು ಮೆಸ್ಸಿ ಸೇರಿಕೊಂಡು ಚೆಂಡನ್ನು ಒಟ್ಟಿಗೆ ಡ್ರಿಬಲ್ ಮಾಡಲಿದ್ದಾರೆ. ಪಂದ್ಯ ವೀಕ್ಷಿಸಿದ ನಂತರ, ರಾಹುಲ್ ಗಾಂಧಿ ರಾತ್ರಿ 10.30 ರ ವೇಳೆಗೆ ರಾಷ್ಟ್ರ ರಾಜಧಾನಿಗೆ ತೆರಳಲಿದ್ದಾರೆ.

ಕ್ರೀಡಾಂಗಣದ ಸುತ್ತ ಭದ್ರತೆ ಹೆಚ್ಚಳ

ರಾಜೀವ್‌ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕಾಗಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, 3,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ರಾಚಕೊಂಡ ಪೊಲೀಸ್ ಆಯುಕ್ತ ಸುಧೀರ್ ಬಾಬು ತಿಳಿಸಿದ್ದಾರೆ.

ಪ್ರತಿಮೆ ಅನಾವರಣ

ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರ 70 ಅಡಿ (ಸುಮಾರು 21 ಮೀಟರ್) ಎತ್ತರದ ಬೃಹತ್ ಪ್ರತಿಮೆಯನ್ನು ಕೋಲ್ಕತ್ತಾದ ಲೇಕ್ ಟೌನ್‌ನಲ್ಲಿರುವ ಶ್ರೀ ಭೂಮಿ ಸ್ಪೋರ್ಟಿಂಗ್ ಕ್ಲಬ್ ಬಳಿ ಅನಾವರಣಗೊಳಿಸಲಾಗಿದೆ. ವಿಶ್ವದಲ್ಲೇ ಮೆಸ್ಸಿ ಅವರ ಅತಿ ದೊಡ್ಡ ಪ್ರತಿಮೆ ಇದು ಎಂದು ಹೇಳಲಾಗುತ್ತಿದೆ. ಮೆಸ್ಸಿ ಅವರು 2022ರ ಫಿಫಾ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿರುವ ಭಂಗಿಯನ್ನು ಈ ಪ್ರತಿಮೆಯು ಹೊಂದಿದೆ.

ಮೆಸ್ಸಿ ಅವರು ತಮ್ಮ 'GOAT ಇಂಡಿಯಾ ಟೂರ್ 2025' ಕಾರ್ಯಕ್ರಮದ ಭಾಗವಾಗಿ ಕೋಲ್ಕತ್ತಾಗೆ ಆಗಮಿಸಿದ್ದು, ಸುರಕ್ಷತೆಯ ಕಾರಣಗಳಿಂದಾಗಿ ಅವರು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಿಂದಲೇ ವರ್ಚುವಲ್ ರೂಪದಲ್ಲಿ ಈ ಪ್ರತಿಮೆಯನ್ನು ಅನಾವರಣಗೊಳಿಸಿದರು. ಮೆಸ್ಸಿ 14 ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡಿದ್ದು, ಈ ಮೂರು ದಿನಗಳ ಪ್ರವಾಸದಲ್ಲಿ ಕೋಲ್ಕತ್ತಾ, ಹೈದರಾಬಾದ್, ಮುಂಬೈ ಮತ್ತು ದೆಹಲಿಗೆ ಭೇಟಿ ನೀಡಲಿದ್ದಾರೆ.

ಶಾರುಖ್‌- ಮೆಸ್ಸಿ ಭೇಟಿ

ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್‌ ಬಾದ್‌ಶಾ ಶಾರುಖ್‌ ಖಾನ್‌ ಹಾಗೂ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಪರಸ್ಪರ ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದಾರೆ. ದಿಗ್ಗಜರಿಬ್ಬರ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ವೇದಿಕೆ ಕಾರ್ಯಕ್ರಮದಲ್ಲಿ ಒಟ್ಟಿಗೆ ಹಾಣಿಸಿಕೊಂಡ ನಟ ಶಾರುಖ್‌ ಖಾನ್‌ ಹಾಗೂ ಮೆಸ್ಸಿ

Read More
Next Story