ಕೆಕೆಆರ್ ಪಡೆ ಸೇರಿದ ವೇಗಿ ಮತೀಶ ಪತಿರಣ: ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ಲಭ್ಯ
x
ಮಹೀಶ್ ಪತಿರಾಣಾ (ಕೃಪೆ- ಎಕ್ಸ್​ಪೋಸ್ಟ್​)

ಕೆಕೆಆರ್ ಪಡೆ ಸೇರಿದ ವೇಗಿ ಮತೀಶ ಪತಿರಣ: ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ಲಭ್ಯ

ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಬಿಡುಗಡೆಯಾಗಿದ್ದ ಪತಿರಣ ಅವರನ್ನು, ಹರಾಜಿನಲ್ಲಿ ಕೆಕೆಆರ್ ಬರೋಬ್ಬರಿ 18 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೂ ಗಾಯದ ಸಮಸ್ಯೆ ಅವರನ್ನು ಕಾಡಿತ್ತು.


Click the Play button to hear this message in audio format

ಐಪಿಎಲ್ 2026ರ ಟೂರ್ನಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಕ್ಕೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಶ್ರೀಲಂಕಾದ ಯುವ ವೇಗಿ ಮತೀಶ ಪತಿರಣ ಫಿಟ್ನೆಸ್ ಸಾಬೀತುಪಡಿಸಿದ್ದು, ತಮ್ಮ ಹಳೆಯ ತಂಡ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಕೆಕೆಆರ್ ಕ್ಯಾಂಪ್ ಸೇರಿಕೊಳ್ಳಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಬಿಡುಗಡೆಯಾಗಿದ್ದ ಪತಿರಣ ಅವರನ್ನು, ಹರಾಜಿನಲ್ಲಿ ಕೆಕೆಆರ್ ಬರೋಬ್ಬರಿ 18 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ, ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಅವರು ಸಂಪೂರ್ಣ ಫಿಟ್ ಆಗಿದ್ದು, ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ (NOC) ಪಡೆದುಕೊಂಡಿದ್ದಾರೆ ಎಂದು 'ಕ್ರಿಕ್‌ಬಜ್' ವರದಿ ಮಾಡಿದೆ.

ಡೆತ್ ಬೌಲಿಂಗ್‌ಗೆ ಮೇಜರ್ ಬೂಸ್ಟ್

ಪ್ರಸ್ತುತ ಅಂಕಪಟ್ಟಿಯಲ್ಲಿ ತೀರಾ ಕೆಳಹಂತದಲ್ಲಿರುವ ಕೆಕೆಆರ್ ತಂಡದ ಡೆತ್ ಬೌಲಿಂಗ್ ವಿಭಾಗ ಮಂಕಾಗಿದೆ. ಇದೀಗ ತಮ್ಮ ವಿಭಿನ್ನ ಸ್ಲಿಂಗಿ ಆಕ್ಷನ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡುವ ಪತಿರಣ ಆಗಮನವು ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ಆನೆಬಲ ತಂದಿದೆ. ತಮ್ಮ ಹಳೆಯ ಫ್ರಾಂಚೈಸಿಯಾದ ಸಿಎಸ್‌ಕೆ ವಿರುದ್ಧವೇ ಕಣಕ್ಕಿಳಿಯುವ ಮೂಲಕ ಪತಿರಣ ಈ ಬಾರಿಯ ಐಪಿಎಲ್ ಅಭಿಯಾನ ಆರಂಭಿಸುವ ಸಾಧ್ಯತೆಯಿದೆ.

Read More
Next Story