Paris Olympics| ಮೊದಲ ಚಿನ್ನದ ಪದಕ ಚೀನಾ ಮಡಿಲಿಗೆ
x

Paris Olympics| ಮೊದಲ ಚಿನ್ನದ ಪದಕ ಚೀನಾ ಮಡಿಲಿಗೆ


ಪ್ಯಾರಿಸ್, ಜುಲೈ 27 - ಚೀನಾ ಪ್ಯಾರಿಸ್ ಒಲಿಂಪಿಕ್ಸ್‌ನ ಮೊದಲ ಚಿನ್ನದ ಪದಕವನ್ನು ಮಿಶ್ರ ತಂಡ ಏರ್ ರೈಫಲ್ ಶೂಟಿಂಗ್‌ನಲ್ಲಿ ಗೆದ್ದಿದೆ. ಜೊತೆಗೆ, ಚೀನಾದ ಚಾಂಗ್ ಯಾನಿ ಮತ್ತು ಚೆನ್ ಯಿವೆನ್ ತಂಡ ಡೈವಿಂಗ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತು.

ಚೀನಾ ದಶಕಗಳಿಂದ ಡೈವಿಂಗ್ ಕ್ಷೇತ್ರವನ್ನು ಆಳಿದೆ. ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ ನಡೆದ ಒಲಿಪಿಂಕ್ಸ್‌ ನಲ್ಲಿ ಎಂಟು ಚಿನ್ನದ ಪದಕಗಳಲ್ಲಿ ಏಳನ್ನು ಗೆದ್ದಿದೆ. ಐದು ಡೈವ್‌ಗಳಲ್ಲಿ 337.68 ಅಂಕಗಳೊಂದಿಗೆ ಮಹಿಳೆಯರ ಸಿಂಕ್ರೊನೈಸ್ಡ್ 3 ಮೀಟರ್ ಸ್ಪ್ರಿಂಗ್‌ ಬೋರ್ಡ್‌ನಲ್ಲಿ ಚೀನಾದ ಕ್ರೀಡಾಳುಗಳು ಮೊದಲ ಸ್ಥಾನ ಗಳಿಸಿದರು. ನಂತರದ ಸ್ಥಾನ ಅಮೆರಿಕದ ಸಾರಾ ಬೇಕನ್ ಮತ್ತು ಕ್ಯಾಸಿಡಿ ಕುಕ್ (314.64 ಅಂಕ) ಹಾಗೂ ಬ್ರಿಟಿಷ್ ತಂಡ ಯಾಸ್ಮಿನ್ ಹಾರ್ಪರ್ ಮತ್ತು ಸ್ಕಾರ್ಲೆಟ್ ಮೆವ್ ಜೆನ್ಸನ್ ಕಂಚು(302.28 ಅಂಕ) ಗಳಿಸಿದರು. ಪ್ರತಿ ಬಾರಿ ಚೀನಿಯರು ಡೈವ್ ಮಾಡಲು ಹೊರಟಾಗ ಅಭಿಮಾನಿಗಳು ಮತ್ತು ಧ್ವಜಗಳಿಂದ ತುಂಬಿದ್ದ ಜನಸಮೂಹ ʻಜಿಯೌʼ( ಎಂದು ಮುಂದೆ ಹೋಗೋಣ) ಎಂದು ಜಯಘೋಷ ಮಾಡಿದರು.

ಈ ಆಟವನ್ನು 2000ರಲ್ಲಿ ಸೇರಿಸಲಾಯಿತು. ಚೀನಿ ಮಹಿಳೆಯರು ಏಳರಲ್ಲಿ ಆರು ಬಾರಿ ಚಿನ್ನ ಗೆದ್ದಿದ್ದಾರೆ. 2000ರಲ್ಲಿ ರಷ್ಯಾದಿಂದ ಸೋಲುಂಡರು.ಚೀನಾ ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ ಶಿ ಟಿಂಗ್ಮಾವೊ ಮತ್ತು ವಾಂಗ್ ಹಾನ್ ಅವರೊಂದಿಗೆ ಗೆದ್ದಿತು.

1984 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಡೈವಿಂಗ್‌ ನಲ್ಲಿ ಮೊದಲ ಚಿನ್ನ ಗೆದ್ದ ಚೀನಾ, ಆನಂತರ 64 ಚಿನ್ನದ ಪದಕಗಳಲ್ಲಿ 47 ನ್ನು, 23 ಬೆಳ್ಳಿ ಮತ್ತು 10 ಕಂಚು ಗೆದ್ದಿದೆ. 2008 ರ ಬೀಜಿಂಗ್ ಒಲಿಂಪಿಕ್ಸ್‌ನಿಂದ ಎಣಿಸಲು ಪ್ರಾರಂಭಿಸಿದರೆ, 32 ಚಿನ್ನದಲ್ಲಿ 27 ಚಿನ್ನದ ಪದಕ ಚೀನಾ ಪಾಲಾಗಿದೆ.

Read More
Next Story