Chess Olympiad 2024| ಭಾರತಕ್ಕೆ ಐತಿಹಾಸಿಕ 2 ಚಿನ್ನದ ಪದಕ
x

Chess Olympiad 2024| ಭಾರತಕ್ಕೆ ಐತಿಹಾಸಿಕ 2 ಚಿನ್ನದ ಪದಕ


ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆದ 2024 ರ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ಮೊದಲ ಬಾರಿಗೆ ಮುಕ್ತ ಮತ್ತು ಮಹಿಳೆಯರ ವಿಭಾಗದಲ್ಲಿ ಎರಡು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ಬರೆದಿದೆ.

ಡಿ. ಗುಕೇಶ್, ಅರ್ಜುನ್ ಎರಿಗೇಸಿ ಮತ್ತು ಆರ್. ಪ್ರಗ್ನಾನಂಧಾ ಅವರು 11ನೇ ಸುತ್ತಿನ ಪಂದ್ಯದಲ್ಲಿ ಸ್ಲೊವೇನಿಯಾ ವಿರುದ್ಧ ತಮ್ಮ ಪಂದ್ಯಗಳನ್ನು ಗೆದ್ದ ನಂತರ, ಮುಕ್ತ ವಿಭಾಗದಲ್ಲಿ ಮೊದಲ ಪದಕ ಖಚಿತವಾಯಿತು.

ಗ್ರ್ಯಾಂಡ್‌ಮಾಸ್ಟರ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ನ ಚಾಲೆಂಜರ್ ಗುಕೇಶ್, ವ್ಲಾಡಿಮಿರ್ ಫೆಡೋಸಿವ್ ಅವರನ್ನು ಹಾಗೂ ಎರಿಗೇಸಿ ಅವರು ಜಾನ್ ಸುಬೆಲ್ಜಿ ವಿರುದ್ಧ ಮೇಲುಗೈ ಸಾಧಿಸಿದರು. ಇನ್ನುಳಿದ ಎರಡು ಪಂದ್ಯಗಳಲ್ಲಿ ಸೋತರೂ, ಪ್ರಶಸ್ತಿ ಗೆಲ್ಲಲು 11ನೇ ಸುತ್ತಿನಲ್ಲಿ ಡ್ರಾ ಮಾಡಿಕೊಳ್ಳಬೇಕಿದ್ದ ಭಾರತೀಯರು ಚಿನ್ನ ಗೆಲ್ಲುತ್ತಾರೆ.

ಮಹಿಳೆಯರ ವಿಜಯ: ಭಾರತೀಯ ಮಹಿಳೆಯರು ಅಂತಿಮ ಸುತ್ತಿನಲ್ಲಿ ಅಜರ್‌ಬೈಜಾನ್ ವಿರುದ್ಧ 3.5-0.5 ಅಂತರದಲ್ಲಿ ಜಯ ಸಾಧಿಸಿದರು.10ನೇ ಸುತ್ತಿನಲ್ಲಿ ಭಾರತ 2.5-1.5 ಅಂಕಗಳಿಂದ ಅಮೆರಿಕವನ್ನು ಮಣಿಸಿತು.

ಡಿ. ಗುಕೇಶ್ ಅವರು ಫ್ಯಾಬಿಯಾನೊ ಕರುವಾನಾ ಅವರನ್ನು ಮತ್ತು ಅರ್ಜುನ್ ಅವರು ಲೆನಿಯರ್ ಡೊಮಿಂಗಸ್ ಅವರನ್ನು ಮಣಿಸಿದರು.

ಗೆಲುವಿನ ನಂತರ ಬಗ್ಗೆ ಮಾತನಾಡಿದ ಗುಕೇಶ್ ,ʼ ಆರಂಭದಲ್ಲಿ ಅವರು ತಮ್ಮ ನಡೆಗಳಿಂದ ಆಶ್ಚರ್ಯಗೊಳಿಸಿದರು. ಮೊದಲಿಗೆ ಸಮಾನ ಸ್ಥಾನ ತಲುಪಿದ್ದೆವು. ಅವರ ಸಮಸ್ಯೆ ಎನ್‌ಇ 7 ರಿಂದ ಆರಂಭವಾಯಿತು .ಅರ್ಜುನ್ ಎರಿಗೇಸಿ ಸಂಪೂರ್ಣ ಗೆಲುವು ಸಾಧಿಸಿರುವುದರಿಂದ, ಡ್ರಾ ಆದರೂ ಸರಿ ಎಂದು ನಾನು ಭಾವಿಸಿದೆ. ಆದರೆ, ಉತ್ತಮ ನಡೆಗಳನ್ನು ಕಂಡುಕೊಂಡೆ,ʼ ಎಂದರು.

ಒಲಿಂಪಿಯಾಡ್‌ನಲ್ಲಿ ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿ,ʼ ನನಗೆ ಸಂತೋಷವಾಗಿದೆ. ಆದರೆ, ಒಂದು ತಂಡವಾಗಿ ಪ್ರದರ್ಶನ ನೀಡುವುದು ಮುಖ್ಯವಾಗಲಿದೆ,ʼ ಎಂದು ಹೇಳಿದರು.

ಭಾರತೀಯ ಪುರುಷರು 2014 ಮತ್ತು 2022 ರಲ್ಲಿ ಕಂಚು ಹಾಗೂ ಚೆನ್ನೈನಲ್ಲಿ ನಡೆದ 2022ರ ಆವೃತ್ತಿಯಲ್ಲಿ ಮಹಿಳೆಯರು ಕಂಚಿನ ಪದಕ ಗೆದ್ದಿದ್ದರು.

Read More
Next Story