ಏಷ್ಯಾ ಚಾಂಪಿಯನ್‌ಶಿಪ್ : ಭಾರತದ ಮಹಿಳೆಯರು ಚೊಚ್ಚಲ ಫೈನಲ್‌ಗೆ
x
ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಮಹಿಳಾ ತಂಡ.

ಏಷ್ಯಾ ಚಾಂಪಿಯನ್‌ಶಿಪ್ : ಭಾರತದ ಮಹಿಳೆಯರು ಚೊಚ್ಚಲ ಫೈನಲ್‌ಗೆ


ಶಾ ಆಲಂ (ಮಲೇಷ್ಯಾ), ಫೆ.17: ಎರಡು ಬಾರಿ ಚಾಂಪಿಯನ್ ಜಪಾನ್ ವಿರುದ್ಧಸೆಮಿಫೈನಲ್‌ ನಲ್ಲಿ ಗೆಲುವು ಸಾಧಿಸಿದ ಭಾರತೀಯ ಮಹಿಳಾ ಷಟ್ಲರ್‌ಗಳು, ಏಷ್ಯಾ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಚಿನ್ನಕ್ಕೆ ಹತ್ತಿರವಾಗಿದ್ದಾರೆ.

ವಿಶ್ವದ ನಂ. 23 ಜೋಡಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್, ವಿಶ್ವದ ನಂ. 53 ಜೋಡಿ ಅಶ್ಮಿತಾ ಚಲಿಹಾ ಮತ್ತು ಅನ್ಮೋಲ್ ಖಾರ್ಬ್(17) ಮೊದಲ ಡಬಲ್ಸ್ ಮತ್ತು ಸಿಂಗಲ್ಸ್‌ನಲ್ಲಿ ಅದ್ಭುತ ಗೆಲುವು ದಾಖಲಿಸಿದರು. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಥಾಯ್ಲೆಂಡ್‌ ತಂಡವನ್ನು ಎದುರಿಸಲಿದೆ. ಜಪಾನ್ ವಿಶ್ವದ ನಂ. 4 ಅಕಾನೆ ಯಮಗುಚಿ, ನಂ. 7 ಜೋಡಿ ಯುಕಿ ಫುಕುಶಿಮಾ ಮತ್ತು ಸಯಾಕಾ ಹಿರೋಟಾ ಮತ್ತು ವಿಶ್ವ ನಂ. 8 ಮಯೂ ಮಾಟ್ಸುಮೊಟೊ ಮತ್ತು ವಕಾನಾ ನಗಾಹರಾ ಅಸಾಧಾರಣ ತಂಡವಾಗಿದ್ದು, ಗೆಲುವು ಕಠಿಣವಾಗಿತ್ತು. ಸುದೀರ್ಘ ವಿರಾಮದ ಬಳಿಕ ಹಿಂದಿರುಗಿದ ಸಿಂಧು, ಚೀನಾದ ಹಾನ್ ಯು ಮತ್ತು ಹಾಂಗ್ ಕಾಂಗ್‌ನ ಲೊ ಸಿನ್ ಯಾನ್ ಹ್ಯಾಪಿ ವಿರುದ್ಧ ಜಯ ಗಳಿಸಿದ್ದರು. ಆದರೆ, ಎಡಗೈ ಆಟಗಾರ್ತಿ ಅಯಾ ಒಹೊರಿ ವಿರುದ್ಧ 13-21, 20-22 ಅಂತರದಲ್ಲಿ ಸೋತರು.ಮೊದಲ ಡಬಲ್ಸ್‌ನಲ್ಲಿ ಟ್ರೀಸಾ ಮತ್ತು ಗಾಯತ್ರಿ ಜೋಡಿ, ನಮಿ ಮತ್ಸುಯಾಮಾ ಮತ್ತು ಚಿಹಾರು ಶಿದಾ ಅವರನ್ನು 73 ನಿಮಿಷಗಳಲ್ಲಿ ಸೋಲಿಸಿದರು.

20ನೇ ಶ್ರೇಯಾಂಕಿತೆ, ಮಾಜಿ ವಿಶ್ವ ಚಾಂಪಿಯನ್ ನೊಜೊಮಿ ಒಕುಹರಾ ವಿರುದ್ಧ ಎಡಗೈ ಆಟಗಾರ್ತಿ ಅಶ್ಮಿತಾ ಆಕ್ರಮಣಕಾರಿ ಆಟ ಪ್ರದರ್ಶಿಸಿ, 21-17, 21-14 ರಿಂದ ಗೆಲುವು ದಾಖಲಿಸಿದರು. ಇದರಿಂದ ಭಾರತ 2-1 ರಿಂದ ಮುನ್ನಡೆ ಸಾಧಿಸಿತು. ಸಿಂಧು ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ವಿಶ್ವದ ನಂ. 11 ಜೋಡಿ ರೆನಾ ಮಿಯೌರಾ ಮತ್ತು ಅಯಾಕೊ ಸಕುರಾಮೊಟೊ ಅವರಿಂದ ಅಪಜಯಗೊಂಡಿತು. ಐದು ಪಂದ್ಯಗಳ ರಬ್ಬರ್ 2-2 ರಲ್ಲಿ ಸಮನಾಯಿತು. ವಿಶ್ವ ನಂ. 29 ನಟ್ಸುಕಿ ನಿದೈರಾವನ್ನು ಅವರನ್ನು ಅನ್ಮೋಲ್‌ 21-14, 21-18 ರಿಂದ ಮಣಿಸಿದರು.

ʻನಮ್ಮ ಹುಡುಗಿಯರು ಮ್ಯಾಜಿಕ್ ಮಾಡುತ್ತಿದ್ದಾರೆ. ಅವರು ಇಂದು ಅತ್ಯುತ್ತಮವಾಗಿ ಆಡಿದ್ದಾರೆʼ ಎಂದು ಮಾಜಿ ಕೋಚ್ ವಿಮಲ್ ಕುಮಾರ್ ತಿಳಿಸಿದ್ದಾರೆ. ʻಗಾಯತ್ರಿ ಮತ್ತು ಟ್ರೀಸಾ ಮತ್ತು ಅಶ್ಮಿತಾಗೆ ಕ್ರೆಡಿಟ್ ನೀಡುತ್ತೇನೆ. ಇದು ಅಶ್ಮಿತಾ ಅವರ ಅತ್ಯುತ್ತಮ ಪ್ರದರ್ಶನ. ಅವರು ಒಕುಹರಾ ಅವರನ್ನು ಮೀರಿಸಿದರು. ತಮ್ಮ ಆಟವನ್ನು ಮತ್ತೊಂದು ಹಂತಕ್ಕೆ ಏರಿಸಿದರುʼ ಎಂದು ಶ್ಲಾಘಿಸಿದರು.

ಥೈಲ್ಯಾಂಡಿನ ವಿಶ್ವದ ನಂ. 10 ಜೋಡಿ ಜೊಂಗ್‌ಕೋಲ್ಫಾನ್ ಕಿಟಿಥರಾಕುಲ್ ಮತ್ತು ರವಿಂದ ಪ್ರಜೊಂಗ್‌ಜೈ ಮತ್ತು ನಂ. 13 ಬೆನ್ಯಾಪಾ ಐಮ್‌ಸಾರ್ಡ್ ಮತ್ತು ನುಂಟಕರ್ನ್ ಐಮ್‌ಸಾರ್ಡ್ ಪ್ರಬಲ ಆಟಗಾರರು. ಇಂಡಿಯದ ಪುರುಷರ ತಂಡ 2016 ಮತ್ತು 2020ರ ಆವೃತ್ತಿಗಳಲ್ಲಿ ಎರಡು ಕಂಚಿನ ಪದಕ ಗೆದ್ದಿತ್ತು.

Read More
Next Story