ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಶಿಪ್‌: ಭಾರತಕ್ಕೆ ಗೆಲುವು
x
ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಶಿಪ್‌: ಭಾರತಕ್ಕೆ ಗೆಲುವು

ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಶಿಪ್‌: ಭಾರತಕ್ಕೆ ಗೆಲುವು

ಅನ್ಮೋಲ್ ಖರ್ಬ್: ಏಷ್ಯನ್ ಚಾಂಪಿಯನ್‌ಶಿಪ್‌ನ ಸ್ಟಾರ್


ಭಾರತದ ಸೂಪರ್‌ ಸ್ಟಾರ್ ಆಟಗಾರ್ತಿಯಾದ ಅನ್ಮೋಲ್ ಖರ್ಬ್ ಅವರು ಭಾರತದ ಬ್ಯಾಡ್ಮಿಂಟನ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಏಷ್ಯಾ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಮಹಿಳಾ ತಂಡ ಜಯಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಮೂರು ನಿರ್ಣಾಯಕ ಪಂದ್ಯಗಳಲ್ಲಿ ಅನ್ಮೋಲ್ ಖರ್ಬ್ ಅವರು ಅದ್ಭುತ ಆಟವಾಡಿದ್ದಾರೆ. ಭಾನುವಾರ ನಡೆದ ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ 17 ವರ್ಷದ ಅನ್ಮೋಲ್ ಅವರು ಅತ್ಯುತ್ತಮ ಆಟವಾಡಿದ್ದಾರೆ.

ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತ ತಂಡವು ಥಾಯ್ಲೆಂಡ್ ಅನ್ನು ಸೋಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಈ ಮೂಲಕ ಭಾರತವು ಮೊಟ್ಟ ಮೊದಲ ಬಾರಿಗೆ ಏಷ್ಯಾ ಟೀಮ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಗೆಲ್ಲಲ್ಲು ಸಾಧ್ಯವಾಗಿದೆ.

ಭಾನುವಾರ ಥಾಯ್ಲೆಂಡ್‌ನ ವಿರುದ್ಧ ನಡೆದ ಪಂದ್ಯದಲ್ಲಿ ಎರಡೂ ಸೆಟ್‌ಗಳಲ್ಲಿ ಮೇಲುಗೈ ಸಾಧಿಸಿದ ಅನ್ಮೋಲ್ 21-14, 21-9 ರಲ್ಲಿ ಎದುರಾಳಿಯನ್ನು ಸೋಲಿಸಿದರು .

ಸತತ ಮೂರನೇ ಗೆಲುವು

ಏಷ್ಯನ್ ಚಾಂಪಿಯನ್‌ಶಿಪ್‌ನ ಮೂರು ನಿರ್ಣಾಯಕ ಪಂದ್ಯಗಳಲ್ಲಿಯೂ ಅನ್ಮೋಲ್ ಖರ್ಬ್ ಅವರು ಸತತ ಗೆಲುವು ದಾಖಲಿಸಿದ್ದಾರೆ.

ಚೀನಾದೊಂದಿಗೆ ತೀವ್ರ ಪೈಪೋಟಿಯೊಂದಿಗೆ ನಿರ್ಣಾಯಕ ಪಂದ್ಯದಲ್ಲಿ ಅವರು ವಿಶ್ವದ 149 ನೇ ಶ್ರೇಯಾಂಕದ ಚೀನಾದ ವು ಲುವೊ ಯು ಅವರನ್ನು ಸೋಲಿಸಿದರು.

22-20, 14-21, ಮತ್ತು 21-18 ರಲ್ಲಿ ಅನ್ಮೋಲ್ ಅವರ ಕಠಿಣ ಹೋರಾಟದಿಂದ ಭಾರತವು

ಏಷ್ಯಾ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್‌ ಆಗಿ ಹೊರ ಹೊಮ್ಮಲು ಸಾಧ್ಯವಾಗಿದೆ. ಇನ್ನು ಜಪಾನ್‌ನೊಂದಿಗಿನ ಪ್ರಮುಖ ಸೆಮಿಫೈನಲ್‌ನಲ್ಲಿ, ಅವರು ವಿಶ್ವದ 29 ನೇ ಶ್ರೇಯಾಂಕದ ನಟ್ಸುಕಿ

ನಿದೈರಾ ಅವರನ್ನು ಸೋಲಿಸುವ ಮೂಲಕ ಭಾರತೀಯ ಗೆಲುವನ್ನು ಖಚಿತಪಡಿಸಿದ್ದರು. ವಿಶ್ವದ ನಂ 472 ಖಾರ್ಬ್ ಅವರು ಜಪಾನಿನ ಎದುರಾಳಿಯನ್ನು 443 ಸ್ಥಾನಗಳಿಗಿಂತ ಹೆಚ್ಚು ಶ್ರೇಯಾಂಕದಲ್ಲಿ 21-14, 21-18ರಲ್ಲಿ ಗೆದ್ದರು.

ಅಮೋಘ ಪ್ರದರ್ಶನ, ಅಪಾರ ಮೆಚ್ಚುಗೆ

ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಅನ್ಮೋಲ್ ಅವರ ಅವರು ಅಮೋಘ ಪ್ರದರ್ಶನವನ್ನು ನೀಡಿದ್ದು, ಅವರ ಆಟಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಅನ್ಮೋಲ್ ಖರ್ಬ್ ಅವರ ಆಟದ ಬಗ್ಗೆ ರಾಷ್ಟ್ರೀಯ ಕೋಚ್ ಪುಲ್ಲೇಲ ಗೋಪಿಚಂದ್ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಈ ಕುರಿತು ಮಾತನಾಡಿರುವ

ಗೋಪಿಚಂದ್ ಅವರು, ಅನ್ಮೋಲ ಅವರ ಆಟವು ಭಾರತೀಯ ಬ್ಯಾಡ್ಮಿಂಟನ್‌ಗೆ ಹೊಸ ಉತ್ಸಾಹ ತುಂಬಿದೆ ಎಂದಿದ್ದಾರೆ.

ಅನ್ಮೋಲ್‌ ಅವರು ಅಮೋಘ ಪ್ರದರ್ಶನವನ್ನು ನೀಡಿದ್ದು, ಒತ್ತಡವನ್ನು ಎದುರಿಸಿ, ಉತ್ತಮ ಆಟವಾಡಿದ್ದಾರೆ ಎಂದಿದ್ದಾರೆ.

Read More
Next Story