3ನೇ ಟೆಸ್ಟ್: ಭಾರತಕ್ಕೆ 434 ರನ್‌ ದಾಖಲೆ ಜಯ
x

3ನೇ ಟೆಸ್ಟ್: ಭಾರತಕ್ಕೆ 434 ರನ್‌ ದಾಖಲೆ ಜಯ


3ನೇ ಟೆಸ್ಟ್: ಭಾರತಕ್ಕೆ 434 ರನ್‌ ದಾಖಲೆ ಜಯ

557 ರನ್‌ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 122ಕ್ಕೆ ಆಲ್‌ಔಟ್‌

........................‌

ರಾಜಕೋಟೆ, ಫೆ.18- 3ನೇ ಟೆಸ್ಟ್‌ ನಲ್ಲಿ ಇಂಗ್ಲೆಂಡ್‌ ನ್ನು 434 ರನ್‌ ಗಳಿಂದ ಮಣಿಸಿದ ಭಾರತ, ಸರಣಿಯಲ್ಲಿ 2-1 ರಿಂದ ಮುನ್ನಡೆದಿದೆ. ಇದು ರನ್‌ ಲೆಕ್ಕಾಚಾರದಲ್ಲಿ ಭಾರತದ ಅತ್ಯಂತ ಭಾರಿ ಜಯ. 2021ರಲ್ಲಿ ನ್ಯೂಜಿಲೆಂಡ್‌ ಮೇಲೆ 372 ರನ್‌ ಗಳಿಂದ ಜಯ ಗಳಿಸಿತ್ತು. ಭಾರತ ಒಡ್ಡಿದ 557 ರನ್‌ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್‌, 39.4 ಓವರ್‌ ಗೆ 122 ರನ್‌ ಮಾಡಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡಿತು. ರವೀಂದ್ರ ಜಡೇಜಾ ಬೌಲಿಗಿನಲ್ಲಿ ಉತ್ತಮ ಸಾಧನೆ ಮಾಡಿದ್ದು, 12.4 ಓವರ್‌ ಗಳಲ್ಲಿ 41 ರನ್‌ ನೀಡಿ 5 ವಿಕೆಟ್‌ ಉರುಳಿಸಿದರು. ಇದು ಸರಣಿಯಲ್ಲಿ ಇಂಗ್ಲೆಂಡಿನ ಅತ್ಯಂತ ಕೆಟ್ಟ ಬ್ಯಾಟಿಂಗ್‌ ಪ್ರಯತ್ನವಾಗಿದ್ದು, 10 ನೇ ಕ್ರಮಾಂಕದ ಮಾರ್ಕ್‌ ವುಡ್(33)‌ ಹೊರತುಪಡಿಸಿ, ಬೇರೆ ಯಾವ ಆಟಗಾರನೂ ಎರಡಂಕಿ ದಾಟಲಿಲ್ಲ. ಆದರೆ, ಇದೇ ಪಿಚ್‌ ನಲ್ಲಿ ಭಾರತ 445 ಹಾಗೂ 4 ವಿಕೆಟಿಗೆ 430 ರನ್‌ ಹೊಡೆದು,ಡಿಕ್ಲೇರ್‌ ಮಾಡಿಕೊಂಡಿತ್ತು.

ಭಾರತದ 2ನೇ ಇನ್ನಿಂಗ್ಸ್‌ ನಲ್ಲಿ ಯಶಸ್ವಿ ಜೈಸ್ವಾಲ್‌ 214 ರನ್‌ ಮಾಡಿ, ಔಟಾಗದೆ ಉಳಿದಿದ್ದು ಈ ಭಾರಿ ಜಯಕ್ಕೆ ಒಂದು ಕಾರಣ. ರೋಹಿತ್‌ ಶರ್ಮಾ ಹಾಗೂ ರವೀಂದ್ರ ಜಡೇಜಾ ಕೂಡ ಸೆಂಚುರಿ ಹೊಡೆದ ಗೌರವಕ್ಕೆ ಪಾತ್ರರಾದರು. ಸರ್ಫರಾಜ್‌ ಖಾನ್‌ ತಮ್ಮ ಮೊದಲನೇ ಪಂದ್ಯದ ಎರಡೂ ಇನ್ನಿಂಗ್ಸ್‌ ನಲ್ಲಿ 50 ರನ್‌ ಹೊಡೆದರು. 4 ನೇ ಟೆಸ್ಟ್‌ ಫೆಬ್ರವರಿ 23ರಂದು ರಾಂಚಿಯಲ್ಲಿ ನಡೆಯಲಿದೆ.

ಸ್ಕೋರ್‌ ಪಟ್ಟಿ:

ಇಂಡಿಯ 445 ಮತ್ತು 98 ಓವರ್‌ ಗಳಲ್ಲಿ 4 ವಿಕೆಟ್‌ಗೆ 430

ಇಂಗ್ಲೆಂಡ್‌ 319 ಮತ್ತು 122

Read More
Next Story