ಶಮಿ ವಿಶ್ವದ ಅತ್ಯುತ್ತಮ ಬೌಲರ್‌: ಕೇನ್ ವಿಲಿಯಮ್ಸನ್
x

ಶಮಿ ವಿಶ್ವದ ಅತ್ಯುತ್ತಮ ಬೌಲರ್‌: ಕೇನ್ ವಿಲಿಯಮ್ಸನ್

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರು ಭಾರತದ ವೇಗಿ ಮೊಹಮ್ಮದ್ ಶಮಿ ಅವರು ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು ಎಂದು ಹೊಗಳಿದ್ದಾರೆ.


Click the Play button to hear this message in audio format

ವಿಶ್ವಕಪ್ ಸೆಮಿಫೈನಲ್‌ನಲ್ಲಿ ತಮ್ಮ ತಂಡ ಸೋಲು ಕಂಡ ಬಳಿಕ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರು ಭಾರತದ ವೇಗಿ ಮೊಹಮ್ಮದ್ ಶಮಿ ಅವರು ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು ಎಂದು ಹೊಗಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಶಮಿ ಅವರ ಬೌಲಿಂಗ್‌ ಪ್ರದರ್ಶನ ನಂಬಲಸಾಧ್ಯವಾಗಿದೆ. ಬಹುಶಃ ಅವರು ವಿಶ್ವಕಪ್‌ನಲ್ಲಿ ಅರ್ಧದಷ್ಟು ಪಂದ್ಯಗಳನ್ನು ಮಾತ್ರ ಆಡಿದ್ದಾರೆ, ಆದರೆ ಅವರು ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ ಎನಿಸಬಹುದುʼʼ ಎಂದು ವಿಲಿಯಮ್ಸನ್ ಪಂದ್ಯದ ನಂತರ ಹೇಳಿದ್ದಾರೆ.

"ನನ್ನ ಪ್ರಕಾರ ಅವರು ನಿಸ್ಸಂದೇಹವಾಗಿ ವಿಶ್ವದ ಅಗ್ರ ಬೌಲರ್‌ಗಳಲ್ಲಿ ಒಬ್ಬರು ಎಂದು ಹೇಳಬಹುದು ಮತ್ತು ಅವರ ಆಟ ನಿಜವಾಗಿಯೂ ಅಸಾಧಾರಣವಾಗಿದೆ. ಅವರು ಆಡಿರುವ ಕಡಿಮೆ ಪಂದ್ಯಗಳಲ್ಲಿ ಅತಿಹೆಚ್ಚು ವಿಕೆಟ್‌ ಪಡೆದಿದ್ದಾರೆ. ಈ ವಿಶ್ವಕಪ್‌ನಲ್ಲಿ ಭಾರತ ತಂಡವು ಎಲ್ಲಾ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ ಹಾಗಾಗಿ ಈ ಬಾರಿ ಅವರೇ ವಿಶ್ವಕಪ್‌ನ್ನು ಗೆಲ್ಲಬಹುದು ಎಂದು ಹೇಳಿದರು..

ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ ವಿಲಿಯಮ್ಸನ್, ವಿರಾಟ್ ಕೊಹ್ಲಿ ಏಕದಿನ ಪಂದ್ಯದ 50 ನೇ ಶತಕವನ್ನು ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ ಮತ್ತು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದುಹಾಕಿದ್ದಾರೆ. ಈ ಸಾಧನೆಯನ್ನು ಪದಗಳಲ್ಲಿ ಹೇಳಲು ಕಷ್ಟ ಎಂದು ವಿಲಿಯಮ್ಸನ್ ಹೇಳಿದರು.

ವಾಂಖೆಡೆ ಕ್ರೀಡಾಂಗಣದ ಪಿಚ್‌ ಸುತ್ತಲಿನ ವಿವಾದವನ್ನು ವಿಲಿಯಮ್ಸನ್ ತಳ್ಳಿಹಾಕಿದ್ದಾರೆ. ಭಾರತೀಯ ಕ್ರಿಕೆಟ್ ತಂಡ ಆಟಕ್ಕೆ "ಸ್ಲೋ ಪಿಚ್" ಅನ್ನು ಹುಡುಕಿದೆ ಎಂಬ ವರದಿಗಳು ಬಂದಿದ್ದವು.

ಒಂದು ವರದಿಯ ಪ್ರಕಾರ, ಆತಿಥೇಯ ತಂಡದ ಸ್ಪಿನ್ನರ್‌ಗಳಿಗೆ ಸಹಾಯವಾಗುವಂತೆ ಪಿಚ್ ತಯಾರಿಸಲಾಗಿದೆ ಎಂದು ಹೇಳಲಾಗಿದೆ.

ಡೇರಿಲ್ ಮಿಚೆಲ್ ಏಳು ಸಿಕ್ಸರ್‌ಗಳು ಮತ್ತು ಒಂಬತ್ತು ಬೌಂಡರಿಗಳೊಂದಿಗೆ 119 ಎಸೆತಗಳಲ್ಲಿ 134 ರನ್ ಗಳಿಸಿ ನ್ಯೂಜಿಲೆಂಡ್ ಪರ ಏಕಾಂಗಿ ಹೋರಾಟ ನಡೆಸಿದರು. ಆದರೆ ಅವರ ಪ್ರಯತ್ನ ವ್ಯರ್ಥವಾಯಿತು. ಅವರ ಸ್ಪೋಟಕ ಬ್ಯಾಟಿಂಗ್‌ ಕುರಿತು ವಿಲಿಯಮ್ಸನ್ ಪ್ರಶಂಸೆ ವ್ಯಕ್ತಪಡಿಸಿದರು.

"ಮಿಚೆಲ್, ಅದ್ಭುತ ಆಟಗಾರ ಮತ್ತು ಫಿನಿಶರ್‌ ಆಗಿ ಸಾಕಷ್ಟು ಪಂದ್ಯಗಳಲ್ಲಿ ತಂಡಕ್ಕೆ ನೆರವಾಗಿದ್ದಾರೆʼʼ ಎಂದು ಅವರು ಹೇಳಿದರು.

Read More
Next Story