Arvind Kejriwal | ಕೇಜ್ರಿವಾಲ್‌ಗೇ ಸೋಲು; ಆಪ್‌ಗೆ ಭಾರೀ ಮುಖಭಂಗ
x
ಅವರಿಂದ್‌ ಕೇಜ್ರಿವಾಲ್‌

Arvind Kejriwal | ಕೇಜ್ರಿವಾಲ್‌ಗೇ ಸೋಲು; ಆಪ್‌ಗೆ ಭಾರೀ ಮುಖಭಂಗ

Arvind Kejriwal: ಎಂಟನೇ ಹಂತದ ಮತ ಎಣಿಕೆಯಲ್ಲಿ, ಕೇಜ್ರಿವಾಲ್ 18,097 ಮತಗಳನ್ನು ಪಡೆದಿದ್ದರೆ, ಪರವೇಶ್ ವರ್ಮಾ 19,267 ಮತಗಳನ್ನುಪಡೆದು ಗೆದ್ದರು.


ರಾಷ್ಟ್ರ ರಾಜಧಾನಿ ದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದು, ಸತತ 10 ವರ್ಷಗಳಿಂದ ಅಧಿಕಾರದಲ್ಲಿದ್ದ ಆಮ್‌ ಆದ್ಮಿ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಹೊಸದಿಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆಪ್‌ ಮುಖ್ಯಸ್ಥ, ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರಿಗೆ ಸೋಲಾಗಿದೆ. ತೀವ್ರ ಹಣಾಹಣಿಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ್ವೇಶ್‌ ವರ್ಮಾ (Parvesh Verma) ಕೇಜ್ರಿವಾಲ್‌ ಮಣಿಸಿದ್ದಾರೆ.

ಕೇಜ್ರಿವಾಲ್ ಅವರು ಸ್ವಲ್ಪ ಹೊತ್ತು ಪರವೇಶ್ ವರ್ಮಾ ವಿರುದ್ಧ ಮುನ್ನಡೆ ಸಾಧಿಸಿದ್ದರೂ, ಕೊನೆಗೆ ಸೋಲನುಭವಿಸಿದರು. ಎಂಟನೇ ಹಂತದ ಮತ ಎಣಿಕೆಯಲ್ಲಿ, ಕೇಜ್ರಿವಾಲ್ 18,097 ಮತಗಳನ್ನು ಪಡೆದರೆ, ಪರವೇಶ್ ವರ್ಮಾ 19,267 ಮತಗಳನ್ನು ಪಡೆದು ಗೆದ್ದರು. ಬಿಜೆಪಿ ದೆಹಲಿಯ 70 ವಿಧಾನಸಭಾ ಸ್ಥಾನಗಳ ಪೈಕಿ 45 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಈ ಸೋಲು ಕೇಜ್ರಿವಾಲ್‌ ರಾಜಕೀಯದಲ್ಲಿ ಮಹತ್ವದ ತಿರುವಾಗಿದೆ. ಏಕೆಂದರೆ ಅವರು ನಾಲ್ಕನೇ ಬಾರಿಗೆ ನವ ದೆಹಲಿ ವಿಧಾನಸಭಾ ಕ್ಷೇತ್ರದಿಂದ ಪುನರಾಯ್ಕೆಗಾಗಿ ಸ್ಪರ್ಧಿಸಿದ್ದರು. ಕಳೆದ ಮೂರು ಚುನಾವಣೆಯಲ್ಲಿ ಅವರು ಈ ಸ್ಥಾನವನ್ನು ಯಶಸ್ವಿಯಾಗಿ ಕಾಯ್ದುಕೊಂಡಿದ್ದರು.

ಈ ನಡುವೆ, ನವ ದೆಹಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವೇಶ್ ವರ್ಮಾ ಗೆಲುವಿನ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ.

ಮತದಾರರ ತೀರ್ಪು

ಕಳೆದ 10 ವರ್ಷಗಳಿಂದ ದೆಹಲಿಯಲ್ಲಿ ಆಪ್‌ ಪ್ರಭಾವ ಇತ್ತು. 1998ರಿಂದ ಅಧಿಕಾರಕ್ಕೆ ಮರಳಲು ಕಸರತ್ತು ನಡೆಸುತ್ತಿದ್ದ ಬಿಜೆಪಿ, ಈ ಚುನಾವಣೆಯಲ್ಲಿ ದೊಡ್ಡ ಮುನ್ನಡೆ ಸಾಧಿಸುತ್ತಿದೆ.

1998ರಿಂದ 2013ರವರೆಗೆ ದೆಹಲಿಯಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್, ಈ ಬಾರಿ ಶೂನ್ಯ ಸಂಪಾದನೆ ಮಾಡಿದೆ. 1.55 ಕೋಟಿ ಅರ್ಹ ಮತದಾರರು ಇರುವ ದೆಹಲಿಯಲ್ಲಿ, ಫೆಬ್ರವರಿ 5ರಂದು ನಡೆದ ಚುನಾವಣೆ ನಡೆದಿತ್ತು.

ಯಾರು ಪರ್ವೇಶ್‌ ವರ್ಮಾ?

ಪರ್ವೇಶ್‌ ವರ್ಮಾ ಈ ಹಿಂದೆ 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಈ ಬಾರಿ ಅವರು ಮಾಜಿ ಸಿಎಂ ವಿರುದ್ಧ ಕಣಕ್ಕೆ ಇಳಿದಿದ್ದರು. ಅವರನ್ನೀಗ ಸೋಲಿಸಿ ದೇಶದ ಗಮನ ಸೆಳೆದಿದ್ದಾರೆ.

ಪರ್ವೇಶ್‌ ಜಾಟ್‌ ಸಮುದಾಯದ ಪ್ರಭಾವಿ ನಾಯಕರಾಗಿದ್ದು, ಅವರ ತಂದೆ ಸಾಹಿಬ್‌ ಸಿಂಗ್‌ ವರ್ಮಾ ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ಹಾಗೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ದಿಲ್ಲಿ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. ಪರ್ವೇಶ್‌ ಅವರ ಮಾವ ಅಝಾದ್‌ ಸಿಂಗ್‌ ಉತ್ತರ ದಿಲ್ಲಿಯ ಮೇಯರ್‌ ಆಗಿದ್ದರು.

Read More
Next Story