ಮಹಿಳೆಯರಿಗೆ ಹಕ್ಕು ಪತ್ರ ವಿತರಣೆಗೆ ಎಪಿ ಸಿಎಂ ಚಾಲನೆ
x
ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ

ಮಹಿಳೆಯರಿಗೆ ಹಕ್ಕು ಪತ್ರ ವಿತರಣೆಗೆ ಎಪಿ ಸಿಎಂ ಚಾಲನೆ

ಉಚಿತ ಮನೆ ನಿವೇಶನಗಳ ಹಕ್ಕು ಪತ್ರಗಳನ್ನು ವಿತರಿಸುವ ಹತ್ತು ದಿನಗಳ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಶುಕ್ರವಾರ ಚಾಲನೆ ನೀಡಿದ್ದಾರೆ.


Click the Play button to hear this message in audio format

ಒಂಗೋಲ್: 31 ಲಕ್ಷ ಮಹಿಳಾ ಫಲಾನುಭವಿಗಳಿಗೆ ಉಚಿತ ಮನೆ ನಿವೇಶನಗಳ ಹಕ್ಕು ಪತ್ರಗಳನ್ನು ವಿತರಿಸುವ ಹತ್ತು ದಿನಗಳ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಶುಕ್ರವಾರ ಚಾಲನೆ ನೀಡಿದ್ದಾರೆ.

ಬಡ ಮಹಿಳೆಯರಿಗೆ ಸ್ವಂತ (ನವರತ್ನಲೂ ಪೇದರಂದಲಕೀ ಇಲ್ಲು ಯೋಜನೆ) ಮನೆಯನ್ನು ಪಡೆಯುವ ಉದ್ದೇಶದಿಂದ ಸಂಪೂರ್ಣ ಹಕ್ಕು ಪತ್ರಗಳನ್ನು ಫಲಾನುಭವಿಗಳ ಹೆಸರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೆಡ್ಡಿ, ಕಳೆದ 58 ತಿಂಗಳಲ್ಲಿ ನಾವು ತೆಗೆದುಕೊಂಡ ಎಲ್ಲಾ ಕ್ರಮಗಳು ಬಡವರ ಜೀವನವನ್ನು ಬದಲಾಯಿಸುವ ಗುರಿಯನ್ನು ಹೊಂದಿವೆ. ಆ ಬಡ ಮಕ್ಕಳು ಬೆಳೆದು ಬಡತನದಿಂದ ಹೊರಬರಬೇಕು ಎಂದು ಹೇಳಿದರು.

ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರನ್ನು ದೂರಿದ ರೆಡ್ಡಿ, ಬಡವರಿಗೆ ಉಚಿತ ಮನೆ ನಿವೇಶನಗಳನ್ನು ವಿತರಿಸುವುದನ್ನು ತಡೆಯಲು ಮಾಜಿ ಸಿಎಂ ಮತ್ತು ಅವರ ಬೆಂಬಲಿಗರು ನ್ಯಾಯಾಲಯದಲ್ಲಿ 1,191 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ಈ ಮೆಗಾ ವಿತರಣಾ ಅಭಿಯಾನದ ಪೂರ್ವಭಾವಿಯಾಗಿ ಹೈಕೋರ್ಟ್ ನಲ್ಲಿ ಹೊಸ ಪ್ರಕರಣವನ್ನು ದಾಖಲಿಸಲಾಗಿದೆ. ಕಾನೂನು ಅಡೆತಡೆಗಳನ್ನು ನಿವಾರಿಸಲಾಗಿದ್ದು, ಒಂಗೋಲ್ ಒಂದರಲ್ಲೇ 25,000 ಪತ್ರಗಳನ್ನು ವಿತರಿಸಲಾಗಿದೆ ಎಂದರು.

ನಾಯ್ಡು ಅವರು 14 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಅವರ ಹೆಸರು ಹೇಳಿದಾಗ ಒಂದೇ ಒಂದು ಒಳ್ಳೆಯ ವಿಷಯವಾದರೂ ಜನರಿಗೆ ನೆನಪಾಗುತ್ತದೆಯೇ ಎಂದು ಪ್ರಶ್ನಿಸಿದರು. ಪ್ರತಿಪಕ್ಷದ ನಾಯಕರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಚಿನ್ನ ಮತ್ತು ಐಷಾರಾಮಿ ಕಾರುಗಳನ್ನು ವಿತರಿಸುವಂತಹ ಹಲವಾರು ನಕಲಿ ಭರವಸೆಗಳೊಂದಿಗೆ ಜನಸಾಮಾನ್ಯರಿಗೆ ನೀಡುತ್ತಾರೆ ಎಂದು ಆರೋಪಿಸಿದರು.

ತನಗೆ ಆಯ್ದ ಮಾಧ್ಯಮ ಸಂಸ್ಥೆಗಳು ಅಥವಾ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಮತ್ತು ಇತರರಿಂದ ಬೆಂಬಲವಿಲ್ಲ, ಆದರೆ ದೇವರು ಮತ್ತು ಜನರ ಬೆಂಬಲ ಮಾತ್ರ ಇದೆ ಎಂದು ಅವರು ಒತ್ತಿ ಹೇಳಿದರು.

ತಮ್ಮ ಆಡಳಿತದಲ್ಲಿ ಕುಟುಂಬಗಳು ಯಾವ ಪ್ರಯೋಜನಗಳನ್ನು ಪಡೆದಿವೆ ಹಾಗೂ ತಮ್ಮ ಸರ್ಕಾರದ ಯೋಜನೆಗಳಿಂದ ಪ್ರಯೋಜನ ಪಡೆದಿದ್ದರೆ ಅವರ ಬೆಂಬಲಕ್ಕೆ ನಿಲ್ಲುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

Read More
Next Story