ಧ್ರುವ ಪ್ರದೇಶದಲ್ಲಿ ನೀರ್ಗಲ್ಲು ಪ್ರವಾಹದ ಅಪಾಯ ಹೆಚ್ಚಳ: ಅಧ್ಯಯನ
x

ಧ್ರುವ ಪ್ರದೇಶದಲ್ಲಿ ನೀರ್ಗಲ್ಲು ಪ್ರವಾಹದ ಅಪಾಯ ಹೆಚ್ಚಳ: ಅಧ್ಯಯನ

ಟಿಬೆಟಿಯನ್ ಪ್ರಸ್ಥಭೂಮಿ ಮತ್ತು ಸುತ್ತಮುತ್ತಲಿನ ಹಿಮಾಲಯ, ಹಿಂದುಕುಶ್ ಮತ್ತು ಟಿಯಾನ್ಶಾನ್ ಪರ್ವತ ಶ್ರೇಣಿಗಳನ್ನು ವ್ಯಾಪಿಸಿರುವ ಮೂರನೇ ಧ್ರುವವು ಹವಾಮಾನ ಬದಲಾವಣೆಯಿಂದ ಅಪಾಯಕ್ಕೆ ಸಿಲುಕಲಿದೆ.


ಧ್ರುವ ಪ್ರದೇಶದಲ್ಲಿ ನೀರ್ಗಲ್ಲು ಪ್ರವಾಹದ ಅಪಾಯ ಹೆಚ್ಚಳ: ಅಧ್ಯಯನ ̲


ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಇತ್ತೀಚೆಗೆ ಪ್ರಕಟಗೊಂಡ ಅಧ್ಯಯನದ ಪ್ರಕಾರ, ಮೂರನೇ ಧ್ರುವ ಪ್ರದೇಶ ಹವಾಮಾನ ಬದಲಾವಣೆಗೆ ಪಕ್ಕಾಗಲಿದೆ.

ಅಧ್ಯಯನವು 1981-1990 ರಿಂದ 2011-2020 ರವರೆಗಿನ ನೀರ್ಗಲ್ಲು ಸರೋವರಗಳ ಪ್ರವಾಹ(ಜಿಒಎಲ್‌ಎಫ್)ಗಳನ್ನು ಹೋಲಿಸಿದೆ ಮತ್ತು ಪ್ರವಾಹಗಳ ಸಂಭವನೀಯತೆ ವಾರ್ಷಿಕ ಸರಾಸರಿ 1.5 ರಿಂದ 2.7 ಕ್ಕೆ ಏರಿದೆ ಎಂದು ಕಂಡುಹಿಡಿದಿದೆ. ಈ ಹೆಚ್ಚಳವು ನೀರ್ಗಲ್ಲುಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ ಕುರಿತು ಕಳವಳ ಹುಟ್ಟುಹಾಕಿದೆ.

ಟಿಬೆಟಿಯನ್ ಪ್ರಸ್ಥಭೂಮಿ, ಹಿಮಾಲಯ, ಹಿಂದೂ ಕುಶ್ ಮತ್ತು ಟಿಯಾನ್ ಶಾನ್ ಪರ್ವತ ಶ್ರೇಣಿಗಳನ್ನು ಒಳಗೊಂಡಿರುವ ಮೂರನೇ ಧ್ರುವವು ಹವಾಮಾನ ಬದಲಾವಣೆಗೆ ಪಕ್ಕಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಹಿಮನದಿಗಳ ವಿಸ್ತರಣೆ ಮತ್ತು ಹೊಸ ಸರೋವರಗಳ ಸೃಷ್ಟಿಯು ಭವಿಷ್ಯದಲ್ಲಿ ಪ್ರತಿ ವರ್ಷ ನೀರ್ಗಲ್ಲು ಪ್ರವಾಹಗಳ ಹೆಚ್ಚಳಕ್ಕೆ ಕಾರಣ ವಾಗಬಹುದು. ಸಂಭಾವ್ಯ ವಿಪತ್ತುಗಳಿಗೆ ಸಿದ್ಧರಾಗಲು ವಿಶ್ಲೇಷಣಾತ್ಮಕ ವಿಧಾನಗಳು ಮತ್ತು ದತ್ತಾಂಶಗಳ ಅಭಿವೃದ್ಧಿ ಪಡಿಸಬೇಕೆಂದು ಶಿಫಾರಸು ಮಾಡಿದ್ದಾರೆ.

ಹವಾಮಾನ ಮತ್ತು ಮಳೆಯಲ್ಲಿ ಬದಲಾವಣೆಯಿಂದಾಗಿ ಕಳೆದ ಮೂರು ದಶಕಗಳಲ್ಲಿ ಈ ಪ್ರದೇಶದಲ್ಲಿ 10,000 ನೀರ್ಗಲ್ಲು ಸರೋವರಗಳು ಸೃಷ್ಟಿಯಾಗಿವೆ. ನಿರುಪದ್ರವಿಯಂತೆ ಕಾಣಿಸಿಕೊಂಡರೂ, ನೀರ್ಗಲ್ಲು ಸರೋವರಗಳು ಪ್ರವಾಹ ಉಂಟುಮಾಡುವ ಸಾಮರ್ಥ್ಯ ಹೊಂದಿವೆ. ನೀರ್ಗಲ್ಲುಗಳು ಕರಗಿದಾಗ, ಕುಸಿದಾಗ ನೀರ್ಗಲ್ಲು ಸರೋವರ ಅನಿಶ್ಚಿತತೆ ಪ್ರಕರಣ(ಜಿಎಲ್‌ಇ)ಗಳು ಸಂಭವಿಸುತ್ತವೆ. ಇದರಿಂದ ಸರೋವರಗಳಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆಯಾಗುತ್ತದೆ.

ಅಪಾಯಗಳ ವಿಶ್ಲೇಷಣೆ

ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ಸಂಶೋಧಕರ ತಂಡ 2018 ಮತ್ತು 2022 ರ ನಡುವೆ ಸೆಂಟಿನೆಲ್-2ಎ ಮತ್ತು ಸೆಂಟಿನೆಲ್-2ಬಿ ಮಿಷನ್‌ಗಳಿಂದ ಉಪಗ್ರಹ ಚಿತ್ರಗಳನ್ನು ಪಡೆದುಕೊಂಡಿದ್ದಾರೆ. ಎಲ್ಲ ನೀರ್ಗಲ್ಲು ಸರೋವರಗಳನ್ನು ಭೌಗೋಳಿಕ ತತ್ವಗಳನ್ನು ಆಧರಿಸಿ, ಗುರುತಿಸಿದರು ಮತ್ತು ವರ್ಗೀಕರಿಸಿದರು. ಇದರಿಂದ ಕಳೆದ ೩ ದಶಕಗಳಲ್ಲಿ ಈ ಪ್ರದೇಶದಲ್ಲಿ ಸಂಭವಿಸಿದ ಬದಲಾವಣೆಗಳನ್ನು ವಿಶ್ಲೇಷಿಸಲು ಸಾಧ್ಯವಾಯಿತು.

ವಿಜ್ಞಾನಿಗಳ ತಂಡ 5,535 ನೀರ್ಗಲ್ಲು ಸರೋವರಗಳಲ್ಲಿ 1,499 ಪ್ರವಾಹಕ್ಕೆ ಸಿಲುಕಬಹುದು ಎಂದು ಪತ್ತೆ ಹಚ್ಚಿದ್ದು, ಇವುಗಳಿಂದ ಸಂಭವನೀಯ ವಿಪತ್ತಿನ ಪ್ರಮಾಣವನ್ನು ನಿರ್ಣಯಿಸಿದ್ದಾರೆ. ಸರಿಸುಮಾರು, 55,808 ಕಟ್ಟಡಗಳು, 105 ನಿರ್ಮಾಣಗೊಂಡಿರುವ ಅಥವಾ ಯೋಜಿತ ಜಲವಿದ್ಯುತ್ ಯೋಜನೆಗಳು, 194 ಚದರ ಕಿಲೋಮೀಟರ್ ಕೃಷಿ ಭೂಮಿ, 5,005 ಕಿಲೋಮೀಟರ್ ರಸ್ತೆಗಳು ಮತ್ತು 4,038 ಸೇತುವೆಗಳು ಅಪಾಯಕ್ಕೀಡಾಗುವ ಸಾಧ್ಯತೆಯಿದೆ ಎಂದು ಟಿಬೆಟ್ ಸಂಶೋಧನಾ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ವೈಕೈ ವಾಂಗ್ ಹೇಳಿದ್ದಾರೆ.

ಹವಾಮಾನ ಬದಲಾವಣೆ, ನೀರ್ಗಲ್ಲು ಸರೋವರದ ಏಕಾಏಕಿ ಪ್ರವಾಹ ಟಿಬೆಟಿಯನ್ ಪ್ರಸ್ಥಭೂಮಿ ಮತ್ತು ಸುತ್ತಮುತ್ತಲಿನ ಹಿಮಾಲಯ, ಹಿಂದುಕುಶ್ ಮತ್ತು ಟಿಯಾನ್ಶಾನ್ ಪರ್ವತ ಶ್ರೇಣಿಗಳನ್ನು ವ್ಯಾಪಿಸಿರುವ ಮೂರನೇ ಧ್ರುವವು ಹವಾಮಾನ ಬದಲಾವಣೆಯಿಂದ ಅಪಾಯಕ್ಕೆ ಸಿಲುಕಲಿದೆ.

...........................



Read More
Next Story