ದಕ್ಷಿಣ ರಾಜ್ಯಗಳ ಸಿಎಂಗಳಿಗೆ ʼಗರ್ಭಕೋಶಗಳುʼ ಮತ ಪೆಟ್ಟಿಗೆಗಳಂತೆ ಕಂಡಿದ್ದು ಯಾಕೆ?
ರಾಜಕೀಯ ನಾಯಕರ ʼಆಪರೇಷನ್ ಜನಸಂಖ್ಯೆ ಹೆಚ್ಚಳʼ ಹೊರೆಯನ್ನು ಹೊತ್ತುಕೊಳ್ಳುವವರು ಯಾರು? ಇದು ಭಾರತೀಯ ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ವಿನಾಶಕಾರಿ ಪ್ರಯೋಗವಾಗುವುದಂತೂ ನಿಶ್ಚಿತ
ನಿಮಗೆ ಏನು ಬೇಕೋ ಅದರ ಬಗ್ಗೆ ಎಚ್ಚರಿಕೆ ವಹಿಸಿ ಎಂಬುದು ಸಂತರ ಸಂದೇಶ.
ಸ್ವಾತಂತ್ರ್ಯ ಭಾರತವು, ಹಲವು ದಶಕಗಳವರೆಗೆ ತನ್ನ ಜನಸಂಖ್ಯೆ ನಿಯಂತ್ರಣಕ್ಕಾಗಿ ಹೆಣಗಾಡಿತು. ಈ ಕಾರ್ಯಾಚರಣೆಯಲ್ಲಿ ಹೆಚ್ಚು ಉತ್ಸಾಹ ತೋರಿದ್ದು ದಕ್ಷಿಣ ಭಾರತಗಳು. ಅವುಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡವು. ಪರಿಣಾಮವಾಗಿ ದಕ್ಷಿಣ ಭಾರತವು ಅಭಿವೃದ್ಧಿಯ ರಿಪೋರ್ಟ್ಕಾರ್ಡ್ ಪಡೆದುಕೊಂಡಿತು.
ಪ್ರಭಾವಶಾಲಿ ಸಾಧನೆಯ ನಡುವೆ ಈ ರಾಜ್ಯಗಳಲ್ಲಿ ಫಲವತ್ತತೆ ಪ್ರಮಾಣ ಕುಸಿಯಿತು. ದಕ್ಷಿಣ ಭಾರತದ ರಾಜ್ಯಗಳು 1951-61ರಲ್ಲಿ ಹೊಂದಿದ್ದ ಒಟ್ಟು ಫಲವತ್ತತೆ ದರವಾದ (ಟಿಎಫ್ಆರ್) 5.74 ರಿಂದ 2019-21ರಲ್ಲಿ 1.64 ಕ್ಕೆ ಇಳಿಯಿತು. . 2019-21ರಲ್ಲಿ ರಾಷ್ಟ್ರೀಯ ಸರಾಸರಿಯೂ 2.0 ಆಗಿತ್ತು. ಇದರರ್ಥ ದಕ್ಷಿಣ ಭಾರತದ ಜನಸಂಖ್ಯಾ ಬೆಳವಣಿಗೆ ಶರ ವೇಗದಲ್ಲಿ ಕಡಿಮೆಯಾಗುತ್ತಿದೆ . ಈ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಈ ವಿಷಯ ಚಿಂತೆಗೆ ಮೂಲವಾಯಿತು. ಆತಂಕ ಯಾಕೆಂದರೆ ಯುವ (ದುಡಿಯುವ ವಯಸ್ಸಿನ ಜನಸಂಖ್ಯೆ) ಪಡೆಯ ಗಾತ್ರ ಫಲವತ್ತತೆಯ ದರ ಕುಸಿದಾಗ ಕುಗ್ಗಿದೆ ಹಾಗೂ ಮತ ಯಂತ್ರವೂ ಕಿರಿದಾಗಿದ್ದು ಅವರ ಆತಂಕ್ಕೆ ಕಾರಣ.
ಪುನರ್ವಿಂಗಡನೆಯಲ್ಲಿ ಹಿನ್ನಡೆ
ರಾಜಕೀಯ ನೇತಾತರ ಕಳವಳಕ್ಕೆ ಅತಿದೊಡ್ಡ ಕಾರಣವೆಂದರೆ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ. 2026 ರ ಆರಂಭದಲ್ಲಿ ಈ ಕಾರ್ಯ ಪ್ರಾರಂಭವಾಗಬಹುದು ಮತ್ತು ದಕ್ಷಿಣದ ರಾಜಕಾರಣಿಗಳಿಗೆ ತಮಗೆ ಸಿಗುವ ಮತ ಪ್ರಮಾಣ ಕಡಿಮೆಯಾಗುವ ಭಯ ಹೆಚ್ಚಾಗಿದೆ.
ದಕ್ಷಿಣ ಭಾರತದ ಜನಸಂಖ್ಯೆಯು ಕುಸಿಯುತ್ತಿರುವ ಕಾರಣ ದಕ್ಷಿಣದ ಐದು ರಾಜ್ಯಗಳಿಗೆ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಇಳಿಕೆಯಾಗಬಹುದು. ಆದ್ದರಿಂದ ಸಂಸತ್ತಿನಲ್ಲಿ ಕಡಿಮೆ ಪ್ರಾತಿನಿಧ್ಯ ಸಿಗುವ ಅಪಾಯ ಎದುರಾಗಿದೆ. ಈ ಮಟ್ಟಿಗೆ, ಆತಂಕಕ್ಕೆ ಒಂದು ಘನ ಕಾರಣವಿದೆ. ಆದರೆ, ನೇತಾರರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಿರುವ ರೀತಿ ವಿಲಕ್ಷಣ ತಿರುವು ಪಡೆಯುತ್ತದೆ. ಯಾಕೆಂದರೆ ಅವರ ದೃಷ್ಟಿಯಲ್ಲಿ, ದಕ್ಷಿಣ ಭಾರತೀಯರು ಹೆಚ್ಚು ಮಕ್ಕಳನ್ನು ಹೊಂದುವುದು ಇದಕ್ಕೆ ಏಕೈಕ ಪರಿಹಾರ.
ಕಳೆದ ತಿಂಗಳು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ನಾಡಿನ ದಂಪತಿಗಳು ಹಳೆ ಗಾದೆ ಮಾತಿನಂತೆ 16 ಮಕ್ಕಳನ್ನು ಹೆರಬೇಕು ಎಂದು ಹೇಳಿಕೆ ನೀಡಿದರು. ಗಾದೆಯ ಪ್ರಕಾರ ಮಕ್ಳಳು ಸಮಾಜದ ಸಂಪತ್ತು.
ಆಂಧ್ರಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಕಾನೂನನ್ನು ಜಾರಿಗೆ ತಂದರು. ಆಂಧ್ರಪ್ರದೇಶ ಮುನ್ಸಿಪಲ್ ಕಾನೂನುಗಳ ತಿದ್ದುಪಡಿ ಮಸೂದೆ, 2024 ಜನಸಂಖ್ಯಾ ನಿಯಂತ್ರಣ ಕ್ರಮವಾಗಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಈ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸುವ ಹಿಂದಿನ ನಿಯಮವನ್ನು ತೆಗೆದುಹಾಕಿದರು.
ಈ ತಿದ್ದುಪಡಿಯು ಆಂಧ್ರಪ್ರದೇಶದಲ್ಲಿ ಕ್ಷೀಣಿಸುತ್ತಿರುವ ಫಲವತ್ತತೆ ದರಕ್ಕೆ ಪರಿಹಾರ ಎನ್ನುತ್ತಿದೆ ನಾಯ್ಡು ಸರ್ಕಾರ ..
ಹಿಮ್ಮುಖ ಪ್ರಗತಿ
ಮಹಿಳಾ ಶಿಕ್ಷಣ ಮತ್ತು ಕಾರ್ಮಿಕ ಭಾಗವಹಿಸುವಿಕೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವ ಎರಡು ಅಭಿವೃದ್ಧಿ ಹೊಂದಿದ ರಾಜ್ಯಗಳ ಮುಖ್ಯಮಂತ್ರಿಗಳು ಒಂದೇ ನಿರ್ಧಾರದ ಮೂಲಕ ಪ್ರಗತಿಯಲ್ಲಿ ಹಿಂದಡಿ ಇಡುವ ಸಾಧ್ಯತೆಗಳನ್ನು ಸೃಷ್ಟಿಸಿರುವುದು ಆಘಾತಕಾರಿ. ಅಷ್ಟಕ್ಕೂ, ಅವರ ʼಜನಸಂಖ್ಯಾ ಹೆಚ್ಚಳದ ಆಪರೇಷನ್ʼನ ಹೊರೆಯನ್ನು ಹೊತ್ತುಕೊಳ್ಳುವವರು ಯಾರು?
ಮಕ್ಕಳ ಪಾಲನೆಯನ್ನು ಸಕ್ರಿಯವಾಗಿ ಉತ್ತೇಜಿಸಲು ಅವರು ಜಪಾನ್ ಉದಾಹರಣೆ ಅನುಸರಿಸಿದರೂ ಇದು ಅಸಾಧ್ಯವಾದುದು. ಹೆಚ್ಚು ಮಕ್ಕಳನ್ನು ಹೊಂದುವ ರಾಜ್ಯ ಪ್ರಾಯೋಜಿತ ಪ್ರೋತ್ಸಾಹ, ಭಾರತೀಯ ಮಹಿಳೆಯರ ಆರೋಗ್ಯದ ಮೇಲೆ ಹಾನಿಯನ್ನುಂಟು ಮಾಡಲಿದೆ.
ಭಾರತದಲ್ಲಿ ಹೆಚ್ಚಿನ ಮಹಿಳೆಯರು ಈಗ ಶಿಕ್ಷಣ ಪಡೆಯುತ್ತಿದ್ದಾರೆ. ಅವರಲ್ಲಿ ಒಂದು ಭಾಗವು ಲಾಭದಾಯಕ ಉದ್ಯೋಗದಲ್ಲಿದ್ದರೆ ಈ ಪ್ರೋತ್ಸಾಹ ಸುಲಭವಲ್ಲ. ಪಿತೃ ಪ್ರಧಾನ ಸಮಾಜ, ಸ್ತ್ರೀದ್ವೇಷ, ಪೌಷ್ಟಿಕಾಂಶದ ಕೊರತೆ, ಕಳಪೆ ಶಿಕ್ಷಣ ಸೇರಿದಂತೆ ಎಲ್ಲ ಅಡೆತಡೆಗಳನ್ನು ಎದುರಿಸಲು ಮಹಿಳೆ ದೀರ್ಘ ಕಾಲ ಹೋರಾಡಬೇಕಾಯಿತು. ಹೀಗಿರುವಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ಮಹಿಳೆ ಮನೆಯಲ್ಲಿಯೇ ಉಳಿಯುತ್ತಾಳೆ ಮತ್ತು ಹೆಚ್ಚು ಮಕ್ಕಳನ್ನು ಹೊಂದುತ್ತಾಳೆ ಎಂದು ಹೇಳುವುದೇ ಅಸಂಭವ.
ನಗರ ವಿದ್ಯಾವಂತ ಮಹಿಳೆಯರು ಮುಖ್ಯಮಂತ್ರಿಗಳ ಸಲಹೆಗೆ ಕಿವಿಗೊಡಲಿಕ್ಕಿಲ್ಲ. ಆದರೆ ಈ ಅದೃಷ್ಟ ಎಲ್ಲರ ಪಾಲಿಗೆ ಇರುವುದಿಲ್ಲ. ಕೆಲವು ಸಮುದಾಯಗಳಲ್ಲಿನ ಮಹಿಳೆಯರು ಪುರುಷಾಹಂಕಾರದ ಭಾಗವಾಗಿ ಹೆಚ್ಚು ಮಕ್ಕಳನ್ನು ಹೆರಬೇಕಾಗಬಹುದು.
ಸರಳೀಕೃತ ದೃಷ್ಟಿಕೋನ
'ಪರಿಹಾರ' ಅತಿರೇಕದ್ದು ಮತ್ತು ಸಮಸ್ಯೆಯನ್ನು ತುಂಬಾ ಸರಳವಾಗಿ ನೋಡಲಾಗುತ್ತಿದೆ. ಫಲವತ್ತತೆ ದರ ಕಡಿಮೆಯಾಗುತ್ತಿದೆ ಎಂದರೆ ಜನಸಂಖ್ಯೆ ಕಡಿಮೆ ಇದೆ ಎಂದು ಅರ್ಥವಲ್ಲ. ವಾಸ್ತವವೆಂದರೆ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಮತ್ತು ದಕ್ಷಿಣವು ಒಟ್ಟು ಜನಸಂಖ್ಯೆಯ ಶೇಕಡಾ 20 ರಷ್ಟನ್ನು ಹೊಂದಿದೆ. ಚೆನ್ನೈ ಹೊರತುಪಡಿಸಿ ತಮಿಳುನಾಡಿನ ಜನಸಂಖ್ಯೆಯು ಥೈಲ್ಯಾಂಡ್ನಷ್ಟಿದೆ . ಕರ್ನಾಟಕದ ಜನಸಂಖ್ಯೆಯು ಯುನೈಟೆಡ್ ಕಿಂಗ್ಡಮ್ಗೆ ಸಮನಾಗಿದೆ. ಬೆಂಗಳೂರಿನಲ್ಲಿರುವ 1.3 ಕೋಟಿ ಜನಸಂಖ್ಯೆ ಮುಂದಿನ ಒಂದು ದಶಕದಲ್ಲಿ ಸುಮಾರು 2.5 ಕೋಟಿಗೆ ದ್ವಿಗುಣಗೊಳ್ಳಲಿದೆ.
ನಗರಗಳಲ್ಲಿ ಮೂಲಸೌಕರ್ಯಗಳು ಕಾಣೆಯಾಗಿವೆ. ದಕ್ಷಿಣದ ಸಣ್ಣ ಗ್ರಾಮವು ಹಿಂದಿ ಪ್ರದೇಶದ ನಗರಕ್ಕಿಂತ ಹೆಚ್ಚು ಅಭಿವೃದ್ಧಿ ಹೊಂದಿದ್ದರೂ ಸಾಗಬೇಕಾದ ಹಾದಿ ದೂರವಿದೆ. ಉದಾಹರಣೆಗೆ, ತಮಿಳುನಾಡಿನಲ್ಲಿ, ದ್ರಾವಿಡ ಅಭಿವೃದ್ಧಿಯ ಹೊರತಾಗಿಯೂ, ಹೆಣ್ಣು ಶಿಶುಹತ್ಯೆ ಮತ್ತು ಬಾಲ್ಯ ವಿವಾಹಗಳು ವ್ಯಾಪಕವಾಗಿವೆ. ಹಾಗಾದರೆ ಹೆಚ್ಚು ಮಕ್ಕಳನ್ನು ಹೆರುವುದೇ ಪರಿಹಾರ ಎಂಬ ಕಲ್ಪನೆ ಸೃಷ್ಟಿಸಿದವರು ಯಾರು?
ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ, ಅನೇಕ ಯುವ ದಂಪತಿಗಳಿಗೆ ಮಕ್ಕಳಿಲ್ಲ. ಆ ಸರ್ಕಾರಗಳು ಒಂದು ಅಥವಾ ಎರಡು ಮಕ್ಕಳನ್ನು ಹೊಂದಲು ಅವರನ್ನು ಒತ್ತಾಯಿಸುತ್ತವೆ. ಆದರೆ, ತೃತಿಯ ದರ್ಜೆಯ ದೇಶಗಳಲ್ಲಿ ಹೆಚ್ಚು ಹೆಚ್ಚು ಮಕ್ಕಳನ್ನು ಹೊಂದುವಂತೆ ಪೋಷಕರನ್ನು ಕೇಳುವುದು ತರ್ಕಕ್ಕೆ ಮೀರಿದ್ದು.
ಆರೋಗ್ಯದಲ್ಲಿ ಏರುಪೇರು
ಕ್ಷೇತ್ರ ಮರುವಿಂಗಡಣೆಯ ಅಪಾಯದ ಹಿನ್ನೆಲೆಯಲ್ಲಿ ನಾಯ್ಡು ಮತ್ತು ಸ್ಟಾಲಿನ್ ಅವರ ವಾದದ ದೊಡ್ಡ ಅಪಾಯವೆಂದರೆ ಮಹಿಳೆಯರ ಆರೋಗ್ಯ. ಮಕ್ಕಳನ್ನು ಹೆರುವುದು ತಾಯಿಯ ಯೋಗಕ್ಷೇಮದ ಮೇಲೆ ಹಾನಿಯನ್ನುಂಟು ಮಾಡುತ್ತದೆ. ಗರ್ಭಧಾರಣೆ ಮತ್ತು ಹೆರಿಗೆ ಆರೋಗ್ಯವಂತ ಮಹಿಳೆಯರಿಗೆ ಸಹ ದೈಹಿಕವಾಗಿ ನೋವುಂಟು ಮಾಡುತ್ತದೆ. ಕೆಲವು ಮಹಿಳೆಯರು ನೋವಿನ ಐವಿಎಫ್ ಕಾರ್ಯವಿಧಾನಗಳಿಗೆ ಒಳಗಾಗುತ್ತಾರೆ. ಪ್ರಸವಾನಂತರದ ಖಿನ್ನತೆ ಕ್ಷುಲ್ಲಕ ವಿಚಾರವಲ್ಲ.
ಪ್ರಸೂತಿಯ ಅಸಹನೆ ಭಾರತದಲ್ಲಿ ಅಪಾಯಕಾರಿ ಮಟ್ಟದಲ್ಲಿ . ಗ್ರಾಮೀಣ ಮತ್ತು ಅರೆ-ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣೀಯರ ದೈಹಿಕ ಮತ್ತು ಮಾನಸಿಕ ದೌರ್ಜನ್ಯದ ಘಟನೆಗಳು ನಡೆಯುತ್ತವೆ. "ನಿರ್ಲಕ್ಷ್ಯ, ತಾರತಮ್ಯದ ಆರೈಕೆ, ಮಹಿಳೆಯರ ಮೇಲೆ ಬಲವಂತದ ಕಾರ್ಯವಿಧಾನಗಳು ಅನೇಕ ಆರೋಗ್ಯ ಕೇಂದ್ರಗಳ ಹೆರಿಗೆ ಸಂಸ್ಕೃತಿಯ ಭಾಗ"ಎಂದು ಡೌನ್ ಟು ಅರ್ಥ್ ವರದಿ ಹೇಳುತ್ತದೆ. ಹೆರಿಗೆ ಕೋಣೆಗಳು ಅಶುಚಿಯಾಗಿರುತ್ತವೆ ಮತ್ತು ಸೋಂಕಿನ ಕೇಂದ್ರವಾಗಿರುತ್ತದೆ.
ಮಹಿಳೆಯರಿಗೆ ಪೌಷ್ಟಿಕಾಂಶದ ಕೊರತೆ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಮಾಮೂಲಿ. 'ಹಸಿವು, ರಕ್ತಹೀನತೆ ಮತ್ತು ನ್ಯೂರಲ್ -ಟ್ಯೂಬ್ ದೋಷಗಳ (ಎನ್ಟಿಡಿ) ಮೌನ ದುರಂತ' ಎಂಎಂದು ಲ್ಯಾನ್ಸೆಟ್ ವರದಿ ಹೇಳುತ್ತದೆ. ಜೀವನದುದ್ದಕ್ಕೂ, ಹೆಚ್ಚಿನ ಭಾರತೀಯರು ಕಬ್ಬಿಣ, ಫೋಲೇಟ್ ಮತ್ತು ವಿಟಮಿನ್-ಬಿ 12 ಕೊರತೆ ಎದುರಿಸುತ್ತಾರೆ. ಋತುಸ್ರಾವ, ಗರ್ಭಧಾರಣೆ ಮತ್ತು ಹಾಲುಣಿಸುವ ಸಮಯದಲ್ಲಿ ಇವುಗಳು ಬೇಕಾಗಿದ್ದುಪೋಷಕಾಂಶಗಳ ಕೊರತೆಗಳು ತೀವ್ರವಾಗಿ ಕಾಡುತ್ತವೆ.
ಸರ್ವವ್ಯಾಪಿ ಸಮಸ್ಯೆ
ವರದಿಯು ಬಿಹಾರ ಅಥವಾ ಛತ್ತೀಸ್ಗಢದ ಯಾವುದೋ ದೂರದ ಹಳ್ಳಿಯನ್ನು ಉಲ್ಲೇಖಿಸಿರಬೇಕು ಎಂದು ನೀವು ಭಾವಿಸಿದರೆ, ಅದು ಸತ್ಯಕ್ಕೆ ದೂರ. 'ಭಾರತದಲ್ಲಿ ಮಹಿಳೆಯರ ಸಂತಾನೋತ್ಪತ್ತಿ ಜೀವನ ಹಂತಗಳಲ್ಲಿ ಆಹಾರ ಸೇವನೆ,; ಎಂಬ ವರದಿಯನ್ನು ಪಬ್ಮೆಡ್ ಸೆಂಟ್ರಲ್ ಪ್ರಕಟಿಸಿದೆ.
ಭಾರತದ ನಾಲ್ಕು ಜಿಲ್ಲೆಗಳ ಅಡ್ಡ-ವಿಭಾಗ ಸಮೀಕ್ಷೆಯು ಶ್ರೀ ಗಂಗಾನಗರ (ರಾಜಸ್ಥಾನ), ಪಾಟ್ನಾ, ಪಶ್ಚಿಮ ದೆಹಲಿ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿನ ಮಹಿಳೆಯರು ಮತ್ತು ಹುಡುಗಿಯರ ಆಹಾರ ಪದ್ಧತಿಯನ್ನು ಈ ವರದಿ ವಿಶ್ಲೇಷಿಸಿದೆ. ಬೆಂಗಳೂರು ದಕ್ಷಿಣದ ಮಹಿಳೆಯರು ಕಬ್ಬಿಣ ಮತ್ತು ಸತುವಿನಂತಹ ಇತರ ಪೋಷಕಾಂಶಗಳ ಸೇವನೆಯು ಉತ್ತಮವಾಗಿದ್ದರೂ, ಗರ್ಭಾವಸ್ಥೆಯಲ್ಲಿ ನಿರ್ಣಾಯಕವಾದ ಕ್ಯಾಲ್ಸಿಯಂ ಮತ್ತು ಫೋಲಿಕ್ ಆಮ್ಲವನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ.
ಹೆಚ್ಚು ಮಕ್ಕಳನ್ನು ಹೊಂದುವುದು ಕಳಪೆ ಆರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಭಾರತದ ಗರ್ಭಿಣಿಯರ ರಕ್ತಹೀನತೆ ಮತ್ತು ಇತರ ಪೌಷ್ಟಿಕಾಂಶದ ಕೊರತೆಗಳು ಮಕ್ಕಳಿಗೆ ಹರಡುತ್ತವೆ. ತಿನ್ನುವುದಕ್ಕೆ ಹೆಚ್ಚು ಹೆಚ್ಚು ಮಕ್ಕಳಿರುವುದೇ ಪೌಷ್ಟಿಕಾಂಶದ ಕೊರತೆಗೆ ಕಾರಣ.
ವೃತ್ತಿಯಲ್ಲಿ ಹಿನ್ನಡೆ
'ಹೆಚ್ಚು ಮಕ್ಕಳ' ಸೂತ್ರವು ಮಹಿಳೆಯ ವೃತ್ತಿಜೀವನದ ಮೇಲೆ ಭಾರಿ ಹಾನಿಯನ್ನುಂಟು ಮಾಡುತ್ತದೆ. ಇದು ಈಗಾಗಲೇ ಸವಾಲಿನದ್ದಾಗಿದೆ. 560 ಕಂಪನಿಗಳಲ್ಲಿ 24,000 ಮಹಿಳಾ ಉದ್ಯೋಗಿಗಳನ್ನು ಸಮೀಕ್ಷೆ ಮಾಡಿದ ಅಯ್ನ 2024ರ ʼವಾಯ್ಸ್ ಆಫ್ ವುಮೆನ್ ಅಧ್ಯಯನʼವು ವ್ಯಾಪಕವಾದ 'ಹೆರಿಗೆ ಶಿಕ್ಷೆಯ ' ಬಗ್ಗೆ ಮಾತನಾಡಿದೆ.
ಸುಮಾರು 40 ಪ್ರತಿಶತದಷ್ಟು ಕೆಲಸ ಮಾಡುವ ತಾಯಂದಿರು ಹೆರಿಗೆ ರಜೆಯ ಮೇಲೆ ಹೋಗುವುದರಿಂದ ಅವರ ವೇತನಕ್ಕೆ ಧಕ್ಕೆ ತರುತ್ತದೆ. ಅನೇಕರು ತಮ್ಮ ಕೆಲವನ್ನು ತಾವು ಇಷ್ಟಪಡದ ಜಾಗದಲ್ಲಿ ಮಾಡುತ್ತಾರೆ ಎಂದು ಅದು ಹೇಳಿದೆ.
ಸುಮಾರು 75 ಪ್ರತಿಶತದಷ್ಟು ಕೆಲಸ ಮಾಡುವ ತಾಯಂದಿರು ಹೆರಿಗೆ ರಜೆಯಿಂದ ಹಿಂದಿರುಗಿದ ನಂತರ ಒಂದರಿಂದ ಎರಡು ವರ್ಷಗಳ ತನಕ ವೃತ್ತಿಜೀವನದ ಹಿನ್ನಡೆ ಅನುಭವಿಸುತ್ತಾರೆ. ಮಹಿಳೆಯರು ಕೇವಲ ಒಂದು ಅಥವಾ ಎರಡು ಮಕ್ಕಳನ್ನು ಹೊಂದಿರುವಾಗ ಈ ಪರಿಸ್ಥಿತಿ ಆದರೆ, ನೇತಾರರು ಮೂರು ಅಥವಾ ನಾಲ್ಕು ಅಥವಾ ಇನ್ನೂ ಹೆಚ್ಚು ಮಕ್ಕಳ ಸಂಖ್ಯೆಯನ್ನು 'ಶಿಫಾರಸು' ಮಾಡಿದರೆ ಮಹಿಳೆಯರು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಲೇಬೇಕಾಗುತ್ತದೆ.
ಎರಡು ಆಯ್ಕೆಗಳು
ಕ್ಷೇತ್ರ ವಿಂಗಡಣೆ ಸಮಸ್ಯೆಗೆ ದಕ್ಷಿಣ ಭಾರತವು ಪರಿಹಾರವನ್ನು ಕಂಡುಹಿಡಿಯಬಹುದೇ? ಇತರ ರಾಜ್ಯಗಳಿಂದ ವಲಸಿಗರನ್ನು ಸ್ವಾಗತಿಸಬಹುದು ಮತ್ತು ಅವರನ್ನು ತಮ್ಮವರಂತೆ ನಡೆಸಿಕೊಳ್ಳಬೇಕು. ಇದಕ್ಕೆ ಪೂರಕ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ-ಆರ್ಥಿಕ ಪರಿಸ್ಥಿತಿಗಳನ್ನು ಸೃಷ್ಟಿಸಲು ಕೇಂದ್ರ ಮತ್ತು ಉತ್ತರ ಭಾರತ ಸರ್ಕಾರಗಳು ದಕ್ಷಿಣದೊಂದಿಗೆ ನಿಕಟವಾಗಿ ಕೆಲಸ ಮಾಡಬೇಕು.
ಪರಿಸ್ಥಿತಿಯನ್ನು ರಾಜಕೀಯವಾಗಿ ಎದುರಿಸುವುದು ಮತ್ತೊಂದು ಆಯ್ಕೆ. ನಾಯ್ಡು ಅವರ ಟಿಡಿಪಿ ಕೇಂದ್ರದಲ್ಲಿ ಆಡಳಿತಾರೂಢ ಎನ್ಡಿಎಯ ನಿರ್ಣಾಯಕ ಭಾಗವಾಗಿದೆ. ಸ್ಟಾಲಿನ್ ಅವರ ಡಿಎಂಕೆ ಪ್ರತಿಪಕ್ಷ ಇಂಡಿಯಾ ಬಣದ ಪ್ರಮುಖ ಅಂಶವಾಗಿದೆ. ಕುಸಿಯುತ್ತಿರುವ ಫಲವತ್ತತೆ ದರವು ಸಂಸತ್ತಿನಲ್ಲಿ ದಕ್ಷಿಣ ಭಾರತದ ಪ್ರಾತಿನಿಧ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಸಾಂವಿಧಾನಿಕ ಬದಲಾವಣೆಗಳನ್ನು ತರಲು ಅವರು ತಮ್ಮ ರಾಜಕೀಯ ಶಕ್ತಿಯ ಬಳಸುವುದು ಒಳ್ಳೆಯದು.
ಮಹಿಳೆಯರನ್ನು ಹೆಚ್ಚು ಸಂತಾನೋತ್ಪತ್ತಿ ಮಾಡಲು ಕೇಳುವ ಬಗ್ಗೆ ಅವರು ಯೋಚಿಸುವ ಮೊದಲು, ಇದು ಒಳ್ಳೆಯದೇ ಎಂದು ಮಹಿಳೆಯರನ್ನು ಕೇಳುವುದನ್ನು ಅವರು ಪರಿಗಣನೆಗೆ ತೆಗೆದುಕೊಳ್ಳಬೇಕು. ಇದು ಅವರ ಖಾಸಗಿ ವಲಯಕ್ಕೂ ಅನ್ವಯ.
ರಾಚೆಲ್ ಗ್ರೀನ್ (ಜೆನ್ನಿಫರ್ ಅನಿಸ್ಟನ್ ನಟಿಸಿದ್ದಾರೆ) ಜನಪ್ರಿಯ ಸಿಟ್ಕಾಮ್ ಫ್ರೆಂಡ್ಸ್ ಸಿನಿಮಾದಲ್ಲಿ ನಿರರ್ಗಳವಾಗಿ ಹೇಳಿದಂತೆ, "ಗರ್ಭಾಶಯವಿಲ್ಲದಿದ್ದರೆ ಅಭಿಪ್ರಾಯವಿಲ್ಲ"