ಉದಯನಿಧಿಯನ್ನು ಉಪಮುಖ್ಯಮಂತ್ರಿ ಪದವಿಗೇರಿಸುವಂಥ ಯಾವ ಒತ್ತಡ ಸ್ಟ್ಯಾಲಿನ್‌ ಮೇಲಿತ್ತು?
x
ಉದಯನಿಧಿ

ಉದಯನಿಧಿಯನ್ನು ಉಪಮುಖ್ಯಮಂತ್ರಿ ಪದವಿಗೇರಿಸುವಂಥ ಯಾವ ಒತ್ತಡ ಸ್ಟ್ಯಾಲಿನ್‌ ಮೇಲಿತ್ತು?

ತಮಿಳುನಾಡಿನ ನೂತನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಚೆನ್ನೈನಲ್ಲಿರುವ ತಮ್ಮ ತಾತ ಹಾಗೂ ಡಿಎಂಕೆ ನಾಯಕ ಕರುಣಾನಿಧಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. 2049 ರಲ್ಲಿ ಡಿಎಂಕೆ 100 ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಉದಯನಿಧಿ ಈ ಪಕ್ಷವನ್ನು ಮುನ್ನಡೆಸುತ್ತಾರೆ ಎಂಬ ದೂರದ ಆಸೆ ಡಿಎಂಕೆಯದು.


Click the Play button to hear this message in audio format

ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ತಮ್ಮ ಪುತ್ರ ಉದಯನಿಧಿ ಅವರನ್ನು ಉಪಮುಖ್ಯಮಂತ್ರಿ ಹುದ್ದೆಗೆ ಏರಿಸಿರುವುದು ಮುಂದಿನ ಚುನಾವಣೆಗಂತೂ ಅಲ್ಲ, ಈ ಬೆಳವಣಿಗೆಯನ್ನು ಸ್ಟ್ಯಾಲಿನ್‌ ಅವರ ಮುಂದಿನ ಮೂರು ದಶಕಗಳವರೆಗಿನ ತಮ್ಮ ಪ್ರತಿಸ್ಪರ್ಧಿ ಎಐಎಡಿಎಂಕೆ ಮತ್ತು ಬಿಜೆಪಿಯನ್ನು ಎದುರಿಸಲು ರೂಪಿಸಿರುವ ಕಾರ್ಯತಂತ್ರದ ಒಂದು ನಡೆ ಎಂದು ಪರಿಗಣಿಸಬಹುದು. ಇತ್ತೀಚೆಗೆ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ ಮೂವರು ನಟರೆಂದರೆ ಉದಯೋನ್ಮುಖ ನಿರ್ದೇಶಕ-ನಟ ಸೀಮಾನ್ (NTK), ಕಮಲ್ ಹಾಸನ್ (ಮಕ್ಕಳ್ ನೀದಿ ಮಯ್ಯಂ) ಮತ್ತು ಟಾಪ್ ಸ್ಟಾರ್ ವಿಜಯ್ (TVK). 2026 ರಲ್ಲಿ ನಡೆಯಲಿರುವ ವಿಧಾನ ಸಭೆಯ ಚುನಾವಣೆಯಲ್ಲಿ ವಿಜಯ್ ಅವರು ತಮ್ಮ ಅಪಾರ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿಯುವುದು ಸ್ಪಷ್ಟವಾಗಿ ಕಾಣುತ್ತಿದೆ.

ಸುಪ್ರಸಿದ್ಧ ಸಿಎನ್ ಅಣ್ಣಾದೊರೈ, ಕರುಣಾನಿಧಿ, ಎಂಜಿ ರಾಮಚಂದ್ರನ್ (ಎಂಜಿಆರ್) ಮತ್ತು ಜೆ. ಜಯಲಲಿತ ಅವರ ರಾಜಕೀಯ ಆಕಾಂಕ್ಷೆಗಳನ್ನು ಪೋಷಿಸಿರುವ ಚಲನಚಿತ್ರ ಜಗತ್ತಿಗೆ ಕಾಲಿಡುತ್ತಿರುವಾಗಲೇ ಉದಯನಿಧಿ ಅವರು ತಮ್ಮ ಅಜ್ಜ ಮುತ್ತುವೇಲ್ ಕರುಣಾನಿಧಿ ಅವರ ಪರಂಪರೆಯನ್ನು ಆನುವಂಶಿಕವಾಗಿ ಪಡೆದುಕೊಳ್ಳುತ್ತಾರೆ ಎನ್ನುವುದು ಎಚ್ಚರಿಕೆಯಿಂದ ರೂಪಿಸಿದ ತಂತ್ರವಾಗಿದೆ.

2012 ರಲ್ಲಿ, ಉದಯನಿಧಿ ಅವರ ಮೊದಲ ಪ್ರಮುಖ ಪಾತ್ರವೊಂದರಲ್ಲಿ ನಟಿಸುವ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ಅಂದಿನಿಂದ ಇಂದಿನವರೆಗೂ ಅವರು ಚಿತ್ರಗಳಲ್ಲಿ ನಟಿಸುತ್ತಲೇ ಇದ್ದಾರೆ. ಅದೇ ಸಮಯದಲ್ಲಿ ಅವರ ನಿರ್ಮಾಣ ಸಂಸ್ಥೆ ರೆಡ್ ಜೈಂಟ್ ಮೂವೀಸ್ ಮೂಲಕ ಚಲನಚಿತ್ರೋದ್ಯಮದಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ, ನಿರ್ಮಾಣ ಮತ್ತು ವಿತರಣೆ ಎರಡನ್ನೂ ನಿರ್ವಹಿಸುತ್ತಿದ್ದಾರೆ. ನಟ ಕಮಲ್ ಹಾಸನ್ ಅವರೊಂದಿಗೆ ವೃತ್ತಿಪರ ಸಂಬಂಧವನ್ನು ಬೆಸೆಯುವ ಮೂಲಕ, ಉದಯನಿಧಿ ಅವರು ಡಿಎಂಕೆ ನೇತೃತ್ವದ ಒಕ್ಕೂಟದ ಅವರನ್ನು ಒಂದು ಭಾಗವಾಗಿಸುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ರಾಜ್ಯಸಭಾ ನಾಮನಿರ್ದೇಶನವನ್ನು ಸ್ವೀಕರಿಸಲು ಒಪ್ಪಿಕೊಳ್ಳುವಂತೆ ಮಾಡಿದ್ದಾರೆ. ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಕಮಲ ಹಾಸನ್‌ ಅವರು ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕಾಗಿ ಪ್ರಚಾರ ಮಾಡಿದ್ದು ಇದಕ್ಕೆ ನಿದರ್ಶನ.

ಆರಂಭಿಕ ಉತ್ತರಾಧಿಕಾರ ಯೋಜನೆ

ಎಡಿಎಂಕೆ ಮೂಲಕ ಎಂಜಿಆರ್ ಪ್ರವೇಶಿಸಿದ ಕಾರಣ ತಮಿಳು ನಾಡಿನ ರಾಜಕೀಯ ಕ್ಷೇತ್ರದಲ್ಲಿ ಪ್ರಾಮುಖ್ಯತೆಯನ್ನು ಕಳೆದುಕೊಂಡು (1977 ರಿಂದ 1989 ರವರೆಗೆ ಕರುಣಾನಿಧಿ ಅವರನ್ನು ಅಧಿಕಾರದಿಂದ ದೂರವಿಡುವಂತೆ ಎಂಜಿಆರ್ ನೋಡಿಕೊಂಡರು), ರಾಜಕೀಯ ಚಾಣಾಕ್ಷತನವಿದ್ದು ಕರುಣಾನಿಧಿ ಮತ್ತು ಡಿಎಂಕೆ ಸೋಲಿನ ರುಚಿಯನ್ನು ಅನುಭವಿಸಿದವು. (ಎಂಜಿಆರ್ ಮತ್ತು ನಂತರ ಜಯಲಲಿತಾ , ಭಾಗಶಃ), ಡಿಎಂಕೆಗೆ ಕರುಣಾನಿಧಿ ಪರಂಪರೆಯಷ್ಟೇ ಅಲ್ಲ, ಎದುರಾಳಿಗಳನ್ನು ಮಣಿಸಿದ್ದು, ಡಿಎಂಕೆಗೆ ಪಾಠ ಕಲಿಸಿದಂತಿದೆ. ಅಧಿಕಾರದ ಆಟದಲ್ಲಿ ಡಿಎಂಕೆಯನ್ನು ಮುನ್ನಡೆಸಲು ಚಲನಚಿತ್ರ ಮಾಧ್ಯಮ, ಮತ್ತು ಯುವ ಶಕ್ತಿಯ ಅಗತ್ಯವಿರುವುದನ್ನು ಸ್ಟ್ಯಾಲಿನ್‌ ಸಮರ್ಥವಾಗಿ ಅರ್ಥಮಾಡಿಕೊಂಡಿದ್ದಾರೆ.

ಡಿಎಂಕೆ ಈತ ತನ್ನ 75 ವರ್ಷಗಳ ಕಾಲಾವಧಿಯನ್ನು ಪೂರ್ಣಗೊಳಿಸಿದೆ. ಅದರ ಅನೇಕ ಹಿರಿಯ ನಾಯಕರು ನಿಧನರಾಗಿದ್ದಾರೆ, ಆದರೆ ಕೆಲವು ಅನುಭವಿಗಳು ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಚುನಾವಣಾ ಪ್ರಚಾರ ಮತ್ತು ಪಕ್ಷಕ್ಕೆ ಸಂಬಂಧಿಸಿದಂತೆ ಅಧಿಕೃತ ಕೆಲಸಗಳ ಕಠಿಣ ಕಾರ್ಯವನ್ನು ನಿಭಾಯಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಕರುಣಾನಿಧಿ ಅವರ ನೇತೃತ್ವದ ಹಲವಾರು ಫೈರ್‌ಬ್ರಾಂಡ್ ಮಾತುಗಾರರು ಮತ್ತು ನಾಯಕರು ಕಾಣೆಯಾಗುತ್ತಿದ್ದಾಋಎ. ಕರುಣಾನಿಧಿಯವರಂತೆ ಸಾಹಿತ್ಯಿಕ ಹಿನ್ನೆಲೆ ಮತ್ತು ತಮಿಳು ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಆಳವಾದ ತಿಳುವಳಿಕೆ ಮತ್ತು ಅಧಿಕೃತತೆ ಇರುವ ಐವತ್ತು ಮತ್ತು ಅರವತ್ತರ ದಶಕದ ನಾಯಕರ ಕೊರತೆ ಈಗ ಡಿಎಂಕೆಯನ್ನು ಕಾಡುತ್ತಿದೆ.

ಹಾಗೆಂದು ಇತರ ರಾಜಕೀಯ ಪಕ್ಷಗಳು ಅಂತಹ ವಾಗ್ಮಿಗಳನ್ನು, ತಿಳುವಳಿಕೆಯುಳ್ಳವರನ್ನು ಹೊಂದಿದೆ ಎಂದು ಅರ್ಥವಲ್ಲ. ಆ ಪಕ್ಷಗಳು ಕೂಡ ಈ ಕೊರತೆಯನ್ನು ಎದುರಿಸುತ್ತಿವೆ. ದ್ದಾರೆ. ಕರುಣಾನಿಧಿಯವರ ಮಗಳು ಕನಿಮೊಳಿಯನ್ನು ಬಿಟ್ಟರೆ ಸ್ವಲ್ಪ ಮಟ್ಟಿಗೆ, ಯಾವುದೇ ಹಿರಿಯ ಅಥವಾ ಮಧ್ಯಮ ಮಟ್ಟದ ನಾಯಕರು ತಮಿಳು ಸಾಹಿತ್ಯ-ಸಂಸ್ಕೃತಿಯನು ಆಳವಾಗಿ ಅಧ್ಯಯನ ಮಾಡಿದಂತೆ ಕಾಣುತ್ತಿಲ್ಲ. ತಮಿಳು ನಾಡಿನ ದ್ರಾವಿಡ ಪರಂಪರೆಯನ್ನು ಕುರಿತು ಶಕ್ತಿಯುತವಾಗಿ ಜನರನ್ನು ತಲುಪುವಂಥ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಕೆಲವು ಮಂದಿ ಅಂಥವರಿದ್ದರೂ, ಅವರು ತಮಿಳು ಮಹಾಕಾವ್ಯಗಳನ್ನುಆಧರಿಸಿ ಮಾತನಾಡುವ ಜಾಣ್ಮೆ ಇದ್ದರೂ, ಅವರು ಅತ್ತ ಗಮನ ನೀಡದೆ ಅಧಿಕಾರ ಹಿಡಿಯುವಲ್ಲಿ ಮಾತ್ರ ಮಗ್ನರಾಗಿದ್ದರೆಂದು ಅಂದುಕೊಳ್ಳಬಹುದು. ಈ ಎಲ್ಲ ಶಕ್ತಿಯನ್ನು ಹೊಂದಿದ್ದ ಕೊನೆಯ ನಾಯಕರೆಂದರೆ ವೈಕೋ.ಆದರೆ ಅವರು ಡಿಎಂಕೆಯೊಂದಿಗೆ ಒಡನಾಟವನ್ನು ತೊರೆದರು ಮತ್ತು ತಮ್ಮದೇ ಆದ ಎಂಡಿಎಂಕೆ ಪಕ್ಷವನ್ನು ಪ್ರಾರಂಭಿಸಿದರು. ಅವರು ಈಗ ಡಿಎಂಕೆಯ ಮಿತ್ರರಾಗಿದ್ದರೂ, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಮಗ ದುರೈ ಅವರು ಪಕ್ಷದ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.

ರಾಜಕೀಯ ಪರಿಸ್ಥಿತಿ ಹೀಗಿರುವುದರಿಂದ, ಡಿಎಂಕೆ ಪಕ್ಷವನ್ನು ಮುಂದಿನ ದಿನಗಳಲ್ಲಿ ಮುನ್ನಡೆಸುವ ತುರ್ತು ಅಗತ್ಯವನ್ನು ಮನಗಂಡಿರುವ ಡಿಎಂಕೆ ಆರಂಭಿಕವಾಗಿ ಉತ್ತರಾಧಿಕಾರಿ ಯೋಜನೆಯನ್ನು ರೂಪಿಸುವ ಒತ್ತಡದಲ್ಲಿದೆ ಎಂದು ಹೇಳಬಹುದು. ಅದರ ಫಲಿತವೇ, ಉದಯನಿಧಿಯನ್ನು ಉಪಮುಖ್ಯಮಂತ್ರಿ ಪಟ್ಟಕ್ಕೇರಿಸಿರುವುದು ಎಂದು ಅರ್ಥೈಸಬಹುದು.

ಕುಟುಂಬ ರಾಜಕಾರಣ

ಆದರೆ ಉದಯನಿಧಿ ಅವರನ್ನು ಉಪಮುಖ್ಯಮಂತ್ರಿ ಮಾಡುವ ಕ್ರಮವು ರಾಜಕೀಯ ವಿರೋಧಿಗಳಿಂದ ಟೀಕೆಗೆ ಗುರಿಯಾಗಿದೆ, ಅವರು ನಿರೀಕ್ಷಿಸಿದಂತೆ, ಡಿಎಂಕೆಯ ಕುಟುಂಬ ರಾಜಕಾರಣವನ್ನು ವಿರೋಧಿಗಳು ಕಟುವಾಗಿ ಟೀಕಿಸುತ್ತಿದ್ದಾರೆ. ಸ್ಟ್ಯಾಲಿನ್‌ ಈ ಹಂತ ತಲುಪಲು ಸಾಕಷ್ಟು ಕಾಲಾವಕಾಶವನ್ನು ತೆಗೆದುಕೊಂಡಿದ್ದನ್ನು ಈ ಹಿನ್ನೆಲೆಯಲ್ಲಿ ಗಮನಿಸುವುದು ಅಗತ್ಯ. ಅವರು ಬಹುಕಾಲ ಪಕ್ಷಕ್ಕೆ ಶಾಸಕರಾಗಿ ಸೇವೆ ಸಲ್ಲಿಸಿದರು, ಚೆನ್ನೈ ಕಾರ್ಪೊರೇಷನ್ ಮೇಯರ್ ಆಗಿ ಸೇವೆ ಸಲ್ಲಿಸಿದರು, ಮಂತ್ರಿ ಮತ್ತು ನಂತರ ಉಪಮುಖ್ಯಮಂತ್ರಿಯಾಗಿದ್ದರು. ಸ್ಟ್ಯಾಲಿನ್ ಅವರು 2009 ರಲ್ಲಿ ತಮ್ಮ 56 ನೇ ವಯಸ್ಸಿನಲ್ಲಿ ಉಪಮುಖ್ಯಮಂತ್ರಿಯಾದರು. ಆ ಅರ್ಥದಲ್ಲಿ ನೋಡಿದರೆ, ತಮ್ಮ ಮೊದಲ ಅವಧಿಯ ಶಾಸಕರಾಗಿದ್ದಾಗ 46 ನೇ ವಯಸ್ಸಿನಲ್ಲಿ ಉಪಮುಖ್ಯಮಂತ್ರಿ ಹುದ್ದೆಯನ್ನು ಪಡೆದ ಉದಯನಿಧಿ ಅವರು ಉಪ ಮುಖ್ಯಮಂತ್ರಿಯಾಗಿ ಕಡಿಮೆ ಅವಧಿಯನ್ನು ಹೊಂದಿರಬಹುದು ಎಂದು ಹೇಳಬಹುದು.

ಸ್ಟ್ಯಾಲಿನ್‌ ದಿನದಿಂದ ದಿನಕ್ಕೆ ಕಿರಿಯರೇನೂ ಆಗುತ್ತಿಲ್ಲ. ಅವರ ಮೇಲೆ ಈಗ ಸಾಕಷ್ಟ ಒತ್ತಡಗಳಿವೆ. ಅವರು ಸರ್ಕಾರ ಮತ್ತು ಪಕ್ಷದ ಮಟ್ಟದಲ್ಲಿ ತಮ್ಮ ಹೊರೆಯನ್ನು ಹಗುರಗೊಳಿಸಿಕೊಳ್ಳಬೇಕಾಗಿದೆ. 2009 ರಿಂದ, ಕರುಣಾನಿಧಿ ಅವರ ಹೊರೆಯನ್ನು ಕಡಿಮೆ ಮಾಡಲು ಸ್ಟಾಲಿನ್ ರಾಜ್ಯದಾದ್ಯಂತ ವ್ಯಾಪಕವಾಗಿ ಪ್ರವಾಸಮಾಡಿ ಜನಮನ್ನಣೆ ಗಳಿಸಲು ಸತತ ಪ್ರಯತ್ನ ನಡೆಸಿದ್ದರು. ಈ ಒತ್ತಡಗಳು ಸ್ಟ್ಯಾಲಿನ್‌ ಅವರ ಮೇಲೆ ಮಾಡಿರುವ ಪರಿಣಾಮ ಕೂಡ ಕಾಣಿಸುತ್ತಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ನೋಡಿದರೆ, ಡಿಎಂಕೆ ಸಾಂಸ್ಥಿಕ ರಚನೆಯು ಶೀಘ್ರದಲ್ಲೇ ಬದಲಾವಣೆಯನ್ನು ಕಾಣಬಹುದು, ಉದಯನಿಧಿ ಮತ್ತು ಅವರ ಯುವ ಪದಾಧಿಕಾರಿಗಳ ತಂಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಈಗಾಗಲೇ ಸಿಕ್ಕಿದೆ. ಕಿರಿಯ ಪದಾಧಿಕಾರಿಗಳಿಗೆ ಅವಕಾಶಗಳನ್ನು ಒದಗಿಸಲು ಜಿಲ್ಲಾ ಘಟಕಗಳನ್ನು ದ್ವಿ-ವಿಭಜನೆ ಮತ್ತು ತ್ರಿ-ವಿಭಜನೆ ಮಾಡಲಾಗಿದೆ. ಇದುವರೆಗೆ ಈ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಅನೇಕ ಹಿರಿಯರ ಅಧಿಕಾರವನ್ನು ಈಗಾಗಲೇ ಮೊಟಕುಗೊಳಿಸಲಾಗಿದೆ. . ಈ ಪ್ರಕ್ರಿಯೆಯು ಈಗ ಮತ್ತಷ್ಟು ವೇಗವನ್ನು ಪಡೆದುಕೊಳ್ಳುವುದು ನಿಶ್ಚಿತ.

ಮದುರೈಗೆ ಕೇಂದ್ರದ ಅನುದಾನದ ಏಮ್ಸ್ (AIMS) ನೀಡಲು ಕೇಂದ್ರದ ಬಿಜೆಪಿ ಸರ್ಕಾರ ಹಿಂದೇಟು ಹಾಕುತ್ತಿರುವುದನ್ನು ಬಳಸಿಕೊಂಡು ಚುನಾವಣಾ ಪ್ರಚಾರದಲ್ಲಿ ಯಶಸ್ವಿಯಾದ ಉದಯನಿಧಿ ಅವರು ಪಕ್ಷದ ಕಾರ್ಯಕರ್ತರಿಗೆ ಆತ್ಮೀಯರಾಗಿದ್ದಾರೆ.

Read More
Next Story