ಉತ್ತರಾಖಂಡ ಯುಸಿಸಿ: ಅಸಮಾನತೆಗಳ ಕೂಪ
x
ಯುಸಿಸಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ನಾಗರಿಕರು

ಉತ್ತರಾಖಂಡ ಯುಸಿಸಿ: ಅಸಮಾನತೆಗಳ ಕೂಪ


ಉತ್ತರಾಖಂಡ ವಿಧಾನಸಭೆ ಬುಧವಾರ (ಫೆಬ್ರವರಿ 7) ಅಂಗೀಕರಿಸಿದ ಏಕರೂಪ ನಾಗರಿಕ ಸಂಹಿತೆ ಮಸೂದೆಯು ಲಿವ್‌ ಇನ್‌ ಸಂಬಂಧಗಳನ್ನುನಿಯಂತ್ರಿಸುವ ಮೂಲಕ ನಾಗರಿಕರ ಖಾಸಗಿತನದ ಮೂಲಭೂತ ಹಕ್ಕನ್ನು ತೀವ್ರವಾಗಿ ಮೊಟಕುಗೊಳಿಸುತ್ತದೆ ಮತ್ತು ಅಂತಹ ದಂಪತಿ ಮೇಲೆ ಸರ್ಕಾರದ ಅಧಿಕಾರವನ್ನು ಅಸಮಾನವಾಗಿ ಹೆಚ್ಚಿಸುವ ಮೂಲಕ ಲಿವ್-ಇನ್ ಸಂಬಂಧಗಳನ್ನು ಹಲ್ಲೆಕೋರರ ಸುಪರ್ದಿಗೆ ಒಪ್ಪಿಸುತ್ತದೆ. ಆದರೆ, ಬಹುಶಃ ಅರಿವಿಲ್ಲದೆ ಇನ್ನೊಂದು ಉದ್ದೇಶವನ್ನೂ ಪೂರೈಸಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ವೈಯಕ್ತಿಕ ಕಾನೂನುಗಳನ್ನು ಸಮನ್ವಯಗೊಳಿಸಲು ಸಂಹಿತೆಯ ತಕ್ಷಣದ ಸಾರ್ವಜನಿಕ ಪರಿಶೀಲನೆಯನ್ನು ಇದು ದುರ್ಬಲಗೊಳಿಸಿದೆ.

ಯುಸಿಸಿ ಮತ್ತು ಹಿಂದುತ್ವ: ಯುಸಿಸಿ ಜಾರಿ ಬಿಜೆಪಿಯ ಹಳೆಯ ಚುನಾವಣಾ ಭರವಸೆ. ಮದುವೆಯ ವಿಷಯಗಳಲ್ಲಿ ಅವರ ನಂಬಿಕೆ, ಜಾತಿ ಮತ್ತು ಲಿಂಗವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರನ್ನು ನಿಯಂತ್ರಿಸಲು ವಿಚ್ಛೇದನ, ನಿರ್ವಹಣೆ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಒಂದು ಕ್ರೋಡೀಕೃತ ನಾಗರಿಕ ಕಾನೂನುಗಳನ್ನು ಹೊಂದಿರುವುದು ಬಿಜೆಪಿಯ ಕಾರ್ಯಸೂಚಿಗಳಲ್ಲಿ ಒಂದಾಗಿದೆ. ಈ ಸಂಹಿತೆ ಯು ಅಸ್ತಿತ್ವದಲ್ಲಿರುವ ಮತ್ತು ಸಂವಿಧಾನ ಸಂರಕ್ಷಿತ ಎಲ್ಲ ವೈಯಕ್ತಿಕ ಕಾನೂನುಗಳನ್ನು ಒಳಗೊಳ್ಳುತ್ತದೆ. ಬಿಜೆಪಿ ಪ್ರಕಾರ, ಸಮಾನತೆ ಮತ್ತು ಲಿಂಗ ನ್ಯಾಯಸಮ್ಮತ ಸಮಾಜವನ್ನು ಖಚಿತಪಡಿಸಿಕೊಳ್ಳಲು ದೇಶವನ್ನು ಒಂದು ಕಾನೂನಿನ ಅಡಿಯಲ್ಲಿ ಒಂದುಗೂಡಿಸುತ್ತದೆ.

ಯುಸಿಸಿ ಮುಂದೊತ್ತುವಿಕೆಯಲ್ಲಿ ಅಸಹ್ಯಕರವಾಗಿದೆ ಎಂದು ಹಲವರು ಭಾವಿಸಿದ್ದಾರೆ. ಏಕೆಂದರೆ, ಪಕ್ಷದ ವಿಭಜಕ ಹಿಂದುತ್ವ ಸಿದ್ಧಾಂತವು ಮುಸ್ಲಿಮರ ವೈಯಕ್ತಿಕ ಕಾನೂನುಗಳು ಮಾತ್ರವಲ್ಲದೆ, ಹೆಚ್ಚಿನದನ್ನು ದೋಚುವ ಹುನ್ನಾರ ಹೊಂದಿವೆ. ಇಸ್ಲಾಮಿಕ್ ಪಾದ್ರಿಗಳು ಮತ್ತು ಮುಸ್ಲಿಂ ರಾಜಕೀಯ ನಾಯಕರು ಧರ್ಮದಲ್ಲಿನ ದಬ್ಬಾಳಿಕೆಯ ಮತ್ತು ಪ್ರತಿಗಾಮಿ ಅಭ್ಯಾಸಗಳಾದ ತಲಾಕ್-ಎ-ಬಿದ್ದತ್ (ತ್ರಿವಳಿ ತಲಾಖ್; 2017 ರಲ್ಲಿ ಸುಪ್ರೀಂ ಕೋರ್ಟ್‌ ಕಾನೂನುಬಾಹಿರಗೊಳಿಸಿದೆ ಮತ್ತು ತರುವಾಯ ಸಂಸತ್‌ ಅಪರಾಧ ಎಂದು ಹೇಳಿತು), ಬಹುಪತ್ನಿತ್ವ ಮತ್ತು ನಿಕಾ ಹಲಾಲಾವನ್ನುನಿವಾರಿಸಲು ನಿರಾಕರಿಸುತ್ತಿರುವುದು ಬಿಜೆಪಿ ಯುಸಿಸಿಯನ್ನುಜಾರಿಗೊಳಿಸಲು ಅವಕಾಶ ಮಾಡಿಕೊಟ್ಟಿತು.

ಪ್ರಮುಖ ಅಂಶಗಳು: ಹೀಗಿದ್ದರೂ, ದಶಕಗಳವರೆಗೆ ಯುಸಿಸಿಯು ಆಕಾರ ಅಥವಾ ರೂಪ ಗೊತ್ತಿಲ್ಲದ ಗುಮ್ಮನಾಗಿ ಉಳಿದುಕೊಂಡಿದೆ. ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಬಿಜೆಪಿ ಸರ್ಕಾರ ತಂದಿರುವ ಯುಸಿಸಿಯು ಪಕ್ಷ ಅಧಿಕಾರದಲ್ಲಿರುವ ಇತರ ರಾಜ್ಯಗಳಲ್ಲೂ ಪುನರಾವರ್ತನೆಯಾಗುವ ನಿರೀಕ್ಷೆಯಿದೆ. ಅಂತಿಮವಾಗಿ ಆ ಮೃಗದ ಬಾಹ್ಯರೇಖೆಗಳು ಸ್ಪಷ್ಟವಾಗಲಿವೆ. ಮತ್ತು ಹೌದು, ಅದು ತರಬಹುದಾದ ಅಪಾಯಗಳು ಭಯಕ್ಕೆ ಕಾರಣವಾಗಿವೆ. ಈ ಬೃಹತ್ ಸಂಹಿತೆ 392 ವಿಭಾಗಗಳನ್ನು ಒಳಗೊಂಡಿರುವುದರಿಂದ ಅದರ ವಿಸ್ತೃತ ವಿಶ್ಲೇಷಣೆ ಕಷ್ಟಕರ. ಹೀಗಾಗಿ, ಸಂಹಿತೆಯ ಕೆಲವು ಪ್ರಮುಖ ಅಂಶಗಳನ್ನು ಪರಿಶೀಲಿಸೋಣ ಮತ್ತು ಹೊಸ ಕಾನೂನು ನಾಗರಿಕ ಕಾನೂನುಗಳ ಏಕರೂಪತೆ, ಮಹಿಳೆಯರ ಕಾನೂನು ಹಕ್ಕುಗಳ ಬಲಪಡಿಸುವಿಕೆ ಮತ್ತು ದಬ್ಬಾಳಿಕೆಯನ್ನು ತೊಡೆದುಹಾಕುವ ಮೂಲಕ ಲಿಂಗ ನ್ಯಾಯವನ್ನು ಖಾತರಿಪಡಿಸುತ್ತೇವೆ ಎನ್ನುವ ಬಿಜೆಪಿಯ ಭರವಸೆಯನ್ನು ಈಡೇರಿಸುತ್ತದೆಯೇ ಎಂದು ಪರಿಶೀಲಿಸೋಣ. ಉತ್ತರಾಖಂಡ್ ಏಕರೂಪ ನಾಗರಿಕ ಸಂಹಿತೆ ಎಂದು ಕರೆಯಲ್ಪಡುವ ಈ ಕಾಯಿದೆ ರಾಜ್ಯದ ಎಲ್ಲ ನಾಗರಿಕರಿಗೆ ಏಕರೂಪವಾಗಿ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಬೇಕಿದೆ. ಪರಿಚ್ಛೇದ 2 ʻಭಾರತದ ಸಂವಿಧಾನದ 342 ನೇ ವಿಧಿಯೊಂದಿಗೆ ವಿಧಿ 366 ರ ಷರತ್ತು 25 ಮತ್ತು ಸಂವಿಧಾನದ ವಿಭಾಗ 21 ರ ಅಡಿಯಲ್ಲಿ ಸಂರಕ್ಷಿಸಲ್ಪಟ್ಟಿರುವ ವ್ಯಕ್ತಿಗಳು ಮತ್ತು ವ್ಯಕ್ತಿಗಳ ಗುಂಪುಗಳಿಗೆ ಈ ಕಾನೂನು ಅನ್ವಯವಾಗುವುದಿಲ್ಲʼ ಎಂದು ಸ್ಪಷ್ಟವಾಗಿ ಹೇಳುತ್ತದೆ. ಹೀಗಾಗಿ, ಈ ಕಾಯಿದೆ ರಾಜ್ಯದ ಜನಸಂಖ್ಯೆಯ ಅಂದಾಜು ಶೇ.3ರಷ್ಟು ಇರುವ ಜೌನ್ಸಾರಿ, ಭೋಟಿಯಾ, ಥಾರಿ, ಬುಕ್ಸಾ, ರಾಜಿ ಅಥವಾ ಎಸ್ಟಿ ಎಂದು ಗುರುತಿಸಲ್ಪಡುವ ಸಮುದಾಯಗಳನ್ನು ಹೊರಗಿಡುತ್ತದೆ.

ಇದಲ್ಲದೆ, ಹಿಂದು ಅವಿಭಜಿತ ಕುಟುಂಬ (ಎಚ್‌ಯುಎಫ್)‌ವನ್ನು ಒಂದು ಗುಂಪು ಎಂದು ಗುರುತಿಸದೆ ಇರುವುದರಿಂದ, ಅವರಿಗೆ ತೆರಿಗೆ ವಿನಾಯಿತಿ ನೀಡುವುದಲ್ಲದೆ, ಉತ್ತರಾಧಿಕಾರ ಮತ್ತು ಆಸ್ತಿಗೆ ಸಂಬಂಧಿಸಿದಂತೆ ಹೆಣ್ಣುಮಕ್ಕಳ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ.

ಎಲ್‌ಜಿಬಿಟಿಕ್ಯು ಸಮುದಾಯ: ಲಿಂಗ ಸಮಾನತೆ ಮತ್ತು ಲಿಂಗ ನ್ಯಾಯ ಕುರಿತು ಅತ್ಯಂತ ಸ್ಪಷ್ಟವಾದ ಅಸಮಾನತೆ ಇದೆ. ಎಲ್‌ಜಿಬಿ ಟಿಕ್ಯು ಸಮುದಾಯವನ್ನು ಗುರುತಿಸದಿರುವ ಮೂಲಕ ಕಳೆದ ವರ್ಷ ಸುಪ್ರೀಂ ಕೋರ್ಟ್‌ನಿಂದ ಈ ಸಮುದಾಯಕ್ಕೆ ಮಾಡಿದ ಅನ್ಯಾಯವನ್ನು ಮತ್ತಷ್ಟು ಶಾಶ್ವತಗೊಳಿಸುತ್ತದೆ. ಈ ತೀರ್ಪು ಸಲಿಂಗ ಮದುವೆಗೆ ಕಾನೂನು ಸಮ್ಮತಿಯನ್ನು ನೀಡಲು ನಿರಾಕರಿಸಿತು. ಅದೇ ತೀರ್ಪು ಕ್ವೀರ್‌ ಸಮುದಾಯಕ್ಕೆ ವೈವಾಹಿಕ ಹಕ್ಕುಗಳನ್ನು ನೀಡಲು ಕಾನೂನು ಉಪಕ್ರಮ ತೆಗೆದುಕೊಳ್ಳಬೇಕೆಂದು ಶಾಸಕಾಂಗಕ್ಕೆ ಕರೆ ನೀಡಿತ್ತು. ಉತ್ತರಾಖಂಡ ಸರ್ಕಾರವು ನಿಜವಾದ ಪ್ರಗತಿಪರ ಕಾನೂನನ್ನು ರೂಪಿಸಲು ಇದನ್ನು ಬಳಸಬಹುದಿತ್ತು. ಆದರೆ ಹಾಗೆ ಮಾಡದೆ ಒಂದು ಹೆಜ್ಜೆ ಹಿಂದಕ್ಕೆ ಹೋಗಲು ನಿರ್ಧರಿಸಿತು.

ಲಿವ್-ಇನ್‌ಗಳ ನಿಯಂತ್ರಣ: ಸುಪ್ರೀಂ ಕೋರ್ಟ್‌ 2018ರಲ್ಲಿ ಸಲಿಂಗ ಸಂಬಂಧಗಳನ್ನು ಕಾನೂನುಬದ್ಧಗೊಳಿಸಿದರೆ, 2024ರಲ್ಲಿ ಕಾನೂನುಬಾಹಿರಗೊಳಿಸಿತು. ಉತ್ತರಾಖಂಡ್ ವಿಲಕ್ಷಣ ನಿಬಂಧನೆ ಮೂಲಕ ಕಾನೂನುಬದ್ಧವಾಗಿ ವಾಸಿಸುವ ಸಾಧ್ಯತೆಯನ್ನು ಸಹ ತೆಗೆದುಹಾಕುತ್ತದೆ; ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸುತ್ತದೆ. ಮದುವೆ ವಯಸ್ಸನ್ನು ಪುರುಷರಿಗೆ 21 ಹಾಗೂ ಮಹಿಳೆಯರಿಗೆ 18 ವರ್ಷ ಎಂದು ನಿಗದಿಗೊಳಿಸಿರುವ ಹಿಂದೂ ವಿವಾಹ ಕಾಯ್ದೆ ಮತ್ತು ವಿಶೇಷ ವಿವಾಹ ಕಾಯಿದೆಯ ಷರತ್ತುಗಳನ್ನು ವಿಧಿಸುವ ಮೂಲಕ ವೈಯಕ್ತಿಕ ಕಾನೂನುಗಳಲ್ಲಿ ಏಕರೂಪತೆಯನ್ನು ಸಾಧಿಸುತ್ತದೆ. ಸಂಹಿ ತೆಯ ಸೆಕ್ಷನ್ 4 (iii) ರಲ್ಲಿರುವ ಈ ನಿಬಂಧನೆಯು ಪ್ರೌಢಾವಸ್ಥೆಯನ್ನು ತಲುಪಿದ ಅಪ್ರಾಪ್ತ ವಯಸ್ಕರ ಮದುವೆಗೆ ಇಸ್ಲಾಮಿಕ್ ಷರಿಯತ್ ನೀಡಿದ ಅನುಮತಿಯನ್ನು ಅಮಾನ್ಯಗೊಳಿಸುತ್ತದೆ.

ವಿಚ್ಛೇದನ, ಬಹುಪತ್ನಿತ್ವ ಮತ್ತು ಬಹುಪತಿತ್ವ: ಬಿಜೆಪಿ ಮತ್ತು ಇತರರು ಕಾಯಿದೆಯು ಬಹುಪತ್ನಿತ್ವ, ಬಹುಪತಿತ್ವ,ನಿಖಾ- ಹಲಾಲಾಗಳನ್ನು ನಿಷೇಧಿಸುತ್ತದೆ ಮತ್ತು ಅಪರಾಧಗೊಳಿಸುತ್ತದೆ ಮತ್ತು ಎಲ್ಲಾ ರೀತಿಯ ವಿಚ್ಛೇದನವನ್ನು ರದ್ದುಗೊಳಿಸುತ್ತದೆ ಎಂದು ಸಮರ್ಥಿಸಿಕೊಳ್ಳುತ್ತಾರೆ. ಸೆಕ್ಷನ್ 4 ರ ಅಡಿಯಲ್ಲಿ ಬಹುಪತ್ನಿತ್ವ ಮತ್ತು ಬಹುಪತಿತ್ವವನ್ನು ನಿಷೇಧಿಸುತ್ತದೆ; ʻಮದುವೆ ಸಮಯದಲ್ಲಿ ಸಂಗಾತಿಯನ್ನು ಹೊಂದಿಲ್ಲದಿದ್ದರೆʼ ಮಾತ್ರ ʻಪುರುಷ ಮತ್ತು ಮಹಿಳೆ ನಡುವೆʼ ವಿವಾಹ ನಡೆಸಬಹುದು ಎಂದು ಹೇಳುತ್ತದೆ. ಅಂತೆಯೇ, ಸೆಕ್ಷನ್ 30 (2) ಅಡಿಯಲ್ಲಿ ನಿಖಾ ಹಲಾಲಾವನ್ನು ನಿಷೇಧಿಸುತ್ತದೆ. ʻಯಾವುದೇ ಷರತ್ತುಗಳಿಲ್ಲದೆ ವಿಚ್ಛೇದಿತ ಸಂಗಾತಿಯನ್ನು ಮರುಮದುವೆ ಮಾಡುವ ಹಕ್ಕನ್ನು ನೀಡುತ್ತದೆ. ಸೆಕ್ಷನ್ 32 (1) (iii) ರ ಮೂಲಕ ನಿಖಾ ಹಲಾಲಾವನ್ನು ಮತ್ತಷ್ಟು ಅಪರಾಧೀಕರಣ ಗೊಳಿಸುತ್ತದೆ. ಉಲ್ಲಂಘನೆಗೆ 3 ವರ್ಷಗಳವರೆಗೆ ಜೈಲು ಮತ್ತು 1 ಲಕ್ಷ ರೂ. ದಂಡ ಮತ್ತು ದಂಡ ನೀಡದೆ ಇದ್ದಲ್ಲಿ ಆರು ತಿಂಗಳು ಹೆಚ್ಚಿನ ಜೈಲು ಶಿಕ್ಷೆ ನೀಡಬಹುದು.

ಅಕ್ರಮ ಮಗು: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ರಂಜನಾ ದೇಸಾಯಿ ನೇತೃತ್ವದ ಐದು ಸದಸ್ಯರ ತಜ್ಞರ ಸಮಿತಿಯು ಅನೂರ್ಜಿತ ಅಥವಾ ಕಾನೂನು ಮಾನ್ಯತೆ ಪಡೆದ ಲಿವ್-ಇನ್ ಸಂಬಂಧಗಳಲ್ಲಿ ಜನಿಸಿದ ಮಕ್ಕಳನ್ನು ಕಾನೂನುಬದ್ಧವೆಂದು ಗುರುತಿಸುತ್ತದೆ. ಆದರೆ, ಮದುವೆ ಮತ್ತು ವಿಚ್ಛೇದನ ಎರಡರ ನಡುವೆ 60 ದಿನಗಳಿಂದ ಆರು ತಿಂಗಳು ಅಂತರ ಇರಬೇಕು ಮತ್ತು ದಂಪತಿಯಲ್ಲಿ ಒಬ್ಬರು ರಾಜ್ಯದ ನಿವಾಸಿಯಾಗಿರಬೇಕು ಎಂಬʻಕಡ್ಡಾಯ ನೋಂದಣಿʼ ಶರತ್ತು ಹೇರುವ ಮೂಲಕ ರಾಜ್ಯಕ್ಕೆ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪದ ಅನಗತ್ಯ ಹಕ್ಕು ಮತ್ತು ದಂಡನಾತ್ಮಕ ಅಧಿಕಾರ ನೀಡಲು ಪ್ರಯತ್ನಿಸಿದೆ.

ಮದುವೆ ನೋಂದಣಿ: ಮದುವೆಯನ್ನು ನೋಂದಾಯಿಸದೆ ಇರುವುದು ಸಹಯೋಗವನ್ನು ಅಮಾನ್ಯಗೊಳಿಸುವುದಿಲ್ಲ ಎಂದು ಸಂಹಿತೆ ಹೇಳುತ್ತದಾದರೂ, ನಿಗದಿತ ಸಮಯದೊಳಗೆ ಮದುವೆ ಅಥವಾ ವಿಚ್ಛೇದನವನ್ನು ನೋಂದಾಯಿಸದೆ ಇದ್ದಲ್ಲಿ 10,000 ರೂ. ರಿಂದ 25,000 ರೂ.ವರೆಗೆ ದಂಡ ವಿಧಿಸುತ್ತದೆ. ಸೆಕ್ಷನ್‌ 15 ಹೇಳುವ, ʻಮದುವೆ ಮತ್ತು ವಿಚ್ಛೇದನದ ದಾಖಲೆʼಗಳನ್ನು ತಪಾಸಣೆಗೊಳಿಸಬಹುದು ಮತ್ತು ವ್ಯಕ್ತಿ ಅರ್ಜಿ ಸಲ್ಲಿಸಿದ ನಂತರ ಮದುವೆ/ವಿಚ್ಛೇದನ ನೋಂದಣಿಯ ಪ್ರಮಾಣೀಕೃತ ಪತ್ರ ಪಡೆಯಬಹುದು ಎಂಬುದು ಇನ್ನಷ್ಟು ಹಾಸ್ಯಾಸ್ಪದ. ದೇಶದಲ್ಲಿ ಅಂತರ್-ಜಾತಿ ಮತ್ತು ಅಂತರ್ ಧರ್ಮ ವಿವಾಹಗಳು ನೈತಿಕ ಪೊಲೀಸರಿಂದ ಹಸ್ತಕ್ಷೇಪ ಮತ್ತು ಕಿರುಕುಳಕ್ಕೆ ಸಿಲುಕಿವೆ. ವಿವಾಹಗಳ ಕಡ್ಡಾ ಯ ನೋಂದಣಿ ಮತ್ತು ಅಂತಹ ದಾಖಲೆಗಳನ್ನು ಸಾರ್ವಜನಿಕಗೊಳಿಸಿದರೆ, ಅದನ್ನು ಮತಾಂಧರು ಮತ್ತು ನಿರ್ದಿಷ್ಟ ಸಿದ್ಧಾಂತದ ರಾಜಕೀಯ ಕಾರ್ಯಕರ್ತರು ದುರುಪಯೋಗಪಡಿಸಿಕೊಳ್ಳಬಹುದು; ಅಂತಹ ದಂಪತಿಗಳು ಅಪಾಯಕ್ಕೆ ಸಿಲುಕಿಸಬಹುದು.

ಕಿರುಕುಳಕ್ಕೆ ಆಹ್ವಾನ: ಉತ್ತರಾಖಂಡದಲ್ಲಿರುವ ಹಾಗೂ ಹೊರ ರಾಜ್ಯದಲ್ಲಿರುವ ಲಿವ್‌ ಇನ್‌ ದಂಪತಿ ಒಂದು ತಿಂಗಳ ನಂತರ ಸಂಬಂಧವನ್ನು ನೋಂದಾಯಿಸಿ ಕೊಳ್ಳಬೇಕು ಮತ್ತು ಇಂಥ ಸಂಬಂಧಗಳ ರಿಜಿಸ್ಟರ್‌ ನ್ನು ನಿರ್ವಹಿಸಬೇಕು. ಇದೊಂದು ವಿಲಕ್ಷಣ ನಿಯಮ. ರಿಜಿಸ್ಟ್ರಾರ್‌ಗೆ ಇಂಥ ಸಂಬಂಧವನ್ನು ನೋಂದಾಯಿಸುವ ಅಥವಾ ನಿರಾಕರಿಸುವ ಅಧಿಕಾರ ಇದೆ. ಲಿವ್‌ಇನ್‌ ಪಾಲುದಾರರು ಮಾತ್ರವಲ್ಲದೆ ʻಯಾವುದೇ ವ್ಯಕ್ತಿಯನ್ನುʼಕರೆಸಿ ವಿಚಾರಣೆ ಮಾಡಬಹುದು. ಲಿವ್ಇನ್ ಸಂಬಂಧದ ಬಗ್ಗೆ ಪೊಲೀಸ್ ಠಾಣೆಗೆ ಮತ್ತು ಪೋಷಕರಿಗೆ ತಿಳಿಸಬಹುದು.

ಏಕರೂಪತೆಯ ಕೊರತೆ: ನಿಗದಿತ ಸಮಯದೊಳಗೆ ಲಿವ್ಇನ್ ಸಂಬಂಧವನ್ನು ನೋಂದಾಯಿಸದೆ ಇದ್ದರೆ ಮೂರು ತಿಂಗಳ ಜೈಲು ಶಿಕ್ಷೆ ಅಥವಾ 10,000 ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದು. ಅಂತಹ ಸಂಬಂಧದ ಮರೆಮಾಚುವಿಕೆ-ಸುಳ್ಳು ಮಾಡುವುದು ಮೂರು ತಿಂಗಳು ಸೆರೆವಾಸ ಮತ್ತು 25,000 ರೂ. ದಂಡ ಅಥವಾ ಎರಡನ್ನೂ ವಿಧೀಸಬಹುದು. ಲಿವ್-ಇನ್ ಸಂಬಂಧದಲ್ಲಿ ಪಾಲುದಾರನಿಗೆ ನಿರ್ವಹಣೆ ವೆಚ್ಚ ನೀಡಲು ನಿಗದಿಪಡಿಸಿದ ಷರತ್ತುಗಳಲ್ಲಿ ಏಕರೂಪತೆಯಿಲ್ಲ. ವಿಚ್ಛೇದನ ಪ್ರಕರಣಗಳಲ್ಲಿ ಜೀವನಾಂಶ ಪಡೆಯಲು ಹೆಂಡತಿ ಮತ್ತು ಪತಿ ಇಬ್ಬರಿಗೂ ಸಮಾನ ಹಕ್ಕು ಇದೆ.

ಪಿತೃಪ್ರಧಾನ ನಿಬಂಧನೆಗಳು: ಸಂಹಿತೆಯು ದಾಂಪತ್ಯದ ಹಕ್ಕುಗಳ ಮರುಸ್ಥಾಪನೆಗೆ ಸಂಬಂಧಿಸಿದಂತೆ, ವೈವಾಹಿಕ ಮತ್ತು ವಿಚ್ಛೇದನ ಕಾನೂನುಗಳಲ್ಲಿರುವ ಪಿತೃಪ್ರಧಾನ ನಿಬಂಧನೆಗಳನ್ನು ತೆಗೆದುಹಾಕುವಲ್ಲಿ ವಿಫಲವಾಗಿದೆ. ಗಂಡ ಅಥವಾ ಹೆಂಡತಿ ವೈವಾಹಿಕ ಹಕ್ಕುಗಳನ್ನು ಮರುಸ್ಥಾಪಿಸಲು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸೆಕ್ಷನ್ 21 ಅನುಮತಿಸುತ್ತದೆ. ಯುಸಿಸಿ ರೂಪಿದವರಿಗೆ ದೈಹಿಕ ಸ್ವಾಯತ್ತೆ ಕಲ್ಪನೆಯ ಅರಿವಿಲ್ಲ. ವೈವಾಹಿಕ ಅತ್ಯಾಚಾರವನ್ನು ಕಾನೂನಿನಿಂದ ಹೊರಗಿಡಲಾಗಿದೆ. ಮಗುವಿನ ಪೋಷಕತ್ವದ ವಿಷಯದಲ್ಲಿ ಪತ್ನಿಗೆ ಸಮಾನತೆ ನೀಡುತ್ತದೆ. ಸೆಕ್ಷನ್ 35 (2), ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ʻತಾಯಿಯೊಂದಿಗೆ ಇರುತ್ತದೆʼ ಎಂದು ಹೇಳುತ್ತದೆ. ಅಪ್ರಾಪ್ತ ಮಗುವಿನ ತಾಯಿಯನ್ನು ʻರಕ್ಷಕʼ ಎಂದು ಗುರುತಿಸುವುದಿಲ್ಲ; ಗಾರ್ಡಿಯನ್ಸ್ ಅಂಡ್ ವಾರ್ಡ್ಸ್ ಆಕ್ಟ್ (ಜಿಡಬ್ಲ್ಯುಎ), 1890 ರ ಪ್ರಕಾರ, ಮಗುವಿನ ಪೋಷಕತ್ವ ತಂದೆಯ ಕಾನೂನುಬದ್ಧ ಹಕ್ಕು. ಹೊಸ ಕೋಡ್ ಅಡಿ ತಂದೆಯ ಈ ಅಧಿಕಾರ ಮುಂದುವರಿಯುತ್ತದೆ.

Read More
Next Story