ಎಂದೂ ನೇರ ಪಂದ್ಯ ಎದುರಿಸದ ಕಿಸಿಂಜರ್
x

ಎಂದೂ ನೇರ ಪಂದ್ಯ ಎದುರಿಸದ ಕಿಸಿಂಜರ್


ಎಂದೂ ನೇರ ಪಂದ್ಯ ಎದುರಿಸದ ಕಿಸಿಂಜರ್

-ಟಿ. ಕೆ. ಅರುಣ್

ಎರಡನೇ ಮಹಾಯುದ್ಧದ ನಂತರ ಅಮೆರಿಕದ ರಾಜತಾಂತ್ರಿಕರು ಭಾರತ ಮತ್ತು ಚೀನಾದಲ್ಲಿ ಹೇಗೆ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಂಡರು ಎಂಬ ಕುರಿತ 1958ರ ಪುಸ್ತಕದ ಹೆಸರು ʻದಿ ಅಗ್ಲಿ ಅಮೆರಿಕನ್ʼ. ಈ ಪದವನ್ನು ಅಮೆರಿಕನ್ನರ ದುಃವರ್ತನೆಯನ್ನು ಸೂಚಿಸಲು ಬಳಸಲಾಗಿದೆ. ಇತ್ತೀಚೆಗೆ ಮೃತಪಟ್ಟ ಹೆನ್ರಿ ಕಿಸಿಂಜರ್ ಸುದೀರ್ಘ 100 ವರ್ಷ ಕಾಲ ಜೀವಿಸಿದ ಅಮೆರಿಕದ ಪ್ರಮುಖ ವ್ಯಕ್ತಿ. ಪ್ರಾಯೋಗಿಕ ಮತ್ತು ಕಾರ್ಯತಂತ್ರದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವ ʻರಿಯಲ್ಪಾಲಿಟಿಕ್ʼನಲ್ಲಿ ಪರಿಣತಿ ಹೊಂದಿದ್ದರು. ಸರ್ಕಾರದಲ್ಲಿ ಪ್ರಮುಖ ಪಾತ್ರ ಹೊಂದಿದ್ದ ಅವರು ರಾಜಕಾರಣಿಗಳು ಮತ್ತು ವ್ಯವಹಾರಗಳಿಗೆ ಸಲಹೆಗಾರರಾಗಿಯೂ ಕೆಲಸ ಮಾಡಿದ್ದರು. ಖ್ಯಾತ ಚಾರಿತ್ರಿಕ ವ್ಯಕ್ತಿ ಮ್ಯಾಕಿಯಾವೆಲ್ಲಿಗೂ ಅವರು ಕೆಲವು ವಿಷಯ ಕಲಿಸಬಹುದಿತ್ತು ಎನ್ನುವುದು ಕೆಲವರ ಅಭಿಪ್ರಾಯವಾಗಿತ್ತು.

ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದ ಸಾವಿರಾರು ಜನರ ಸಾವಿಗೆ ಕಾರಣವಾದ ಅಮೆರಿಕನ್ ತಂತ್ರವನ್ನು ಅವರು ಮುನ್ನಡೆಸಿದರು ಮತ್ತು ನಿಯಂತ್ರಿಸಿದರು; ಮೃತರಲ್ಲಿ ಹೆಚ್ಚಿನವರು ಮುಗ್ಧ ನಾಗರಿಕರು. ʻಪ್ರಬಲ ದೇಶಗಳಾದ ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವಿನ ನೇರ ಯುದ್ಧವನ್ನು ತಪ್ಪಿಸಲು ಇದನ್ನು ಮಾಡಲಾಯಿತು. ಕಿಸಿಂಜರ್ ಒಬ್ಬ ನುರಿತ ತಂತ್ರಜ್ಞ ಮತ್ತು ರಾಜತಾಂತ್ರಿಕʼ ಎಂದು ಪಶ್ಚಿಮ ದೇಶಗಳು ಪರಿಗಣಿಸುತ್ತವೆ. ಭಾರತೀಯ ಮಾಧ್ಯಮಗಳು ಪ್ರಶ್ನಾತೀತವಾಗಿ ಈ ಹೊಗಳಿಕೆಗಳನ್ನು ಹಂಚಿಕೊಳ್ಳುತ್ತವೆ. ಅನೇಕ ಭಾರತೀಯರು ಮರೆತಿಲ್ಲ ಎಂಬ ವಾಸ್ತವದ ಹೊರತಾಗಿಯೂ, ಕಿಸಿಂಜರ್ ಪೂರ್ವ ಪಾಕಿಸ್ತಾನದ ವಿಮೋಚನೆಯನ್ನು ತಡೆಯಲು ಪ್ರಯತ್ನಿಸಿದರು. ಆಗ ವಿಶ್ವದ ಅತಿ ದೊಡ್ಡ ವಿಮಾನವಾಹಕ ನೌಕೆ ಯುಎಸ್ಎಸ್ ಎಂಟರ್ಪ್ರೈಸಸ್‌ ನೇತೃತ್ವದಲ್ಲಿ ನೌಕಾಪಡೆಯನ್ನು ಹಿಂದೂ ಮಹಾಸಾಗರಕ್ಕೆ ಕಳುಹಿಸಿದರು. ಪೂರ್ವ ಪಾಕಿಸ್ತಾನ ದಿಂದ ಭಾರತಕ್ಕೆ ವಲಸೆಯನ್ನು ಒಪ್ಪಿಕೊಳ್ಳಬೇಕೆಂದು ನವದೆಹಲಿಯನ್ನು ಒತ್ತಾಯಿಸಲು ಇದನ್ನು ಮಾಡಲಾಯಿತು.

ಪಾಕಿಸ್ತಾನಕ್ಕೆ ಅಮೆರಿಕ ನೀಡಿದ ಬೆಂಬಲ ಮತ್ತು ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ನಿಕ್ಸನ್ಅವರ ತಾತ್ಸಾರ ಕುರಿತು ಭಾರತೀಯ ಮಾಧ್ಯಮಗಳಲ್ಲಿ ಲೇಖನಗಳು ಇತ್ತೀಚೆಗೆ ಪ್ರಕಟವಾಗಿವೆ. ಆದರೆ, ಈ ಉದಾಹರಣೆಗಳು ಲಾವೋಸ್, ಕಾಂಬೋಡಿಯಾ ಮತ್ತು ವಿಯೆಟ್ನಾಂ, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದಲ್ಲಿ ಆತ ನಡೆಸಿದ ಹಿಂಸಾಚಾರವನ್ನು ವಿವರಿಸುವುದಿಲ್ಲ. ಇಂದು ಗಾಜಾದಲ್ಲಿ ಅಮಾಯಕರ ಹತ್ಯೆಯಿಂದ ಪ್ರಪಂಚದಾದ್ಯಂತದ ಜನರು ಆಘಾತಕ್ಕೊಳಗಾಗಿದ್ದಾರೆ.

ಹಮಾಸ್‌ ನ ಕೃತ್ಯಗಳಿಗಾಗಿ ಇಸ್ರೇಲ್ ಎಲ್ಲಾ ಪ್ಯಾಲೆಸ್ತೀನಿಯರನ್ನು ಶಿಕ್ಷಿಸುತ್ತಿದೆ. ಮಾಹಿತಿ ಕ್ರಾಂತಿ, ಅದರಲ್ಲೂ ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಗಾಜಾ ಆಸ್ಪತ್ರೆಗಳಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಅಮಾಯಕರು ಬಲಿಯಾಗುತ್ತಿರುವುದನ್ನು ಮುಚ್ಚಿಡಲು ಸಾಧ್ಯವಾಗುತ್ತಿಲ್ಲ. ಆದರೆ, 1960 ಮತ್ತು 1970 ರ ದಶಕಗಳಲ್ಲಿ ಪರಿಸ್ಥಿತಿ ಬೇರೆಯೇ ಇದ್ದಿತ್ತು. ವಿಯೆಟ್ನಾಂ ಯುದ್ಧ ಎಂದು ಕರೆಯಲಾದ ಯುದ್ಧದಲ್ಲಿ ಅಮೆರಿಕದ ಸೇನೆಯು ಕಮ್ಯುನಿಸಂ ವಿರುದ್ಧ ಹೋರಾಡಿತು; ಜೊತೆಗೆ, ಕಮ್ಯುನಿಸ್ಟರಿಂದ ಬೆಂಬಲಿಸಲ್ಪಟ್ಟ ವಿಯೆಟ್ ಕಾಂಗ್ ಮತ್ತು ಉತ್ತರ ವಿಯೆಟ್ನಾಂನ ವಿಯೆಟ್ ಮಿನ್ಹ್ ಎಂಬ ಮತ್ತೊಂದು ಗುಂಪಿನ ವಿರುದ್ಧವೂ ಹೋರಾಡಿತು.

ಅಮೆರಿಕದ ಯುದ್ಧವಿಮಾನಗಳು ಮತ್ತು ಶಸ್ತ್ರಸಜ್ಜಿತ ಹೆಲಿಕಾಪ್ಟರ್ಗಳು ಗಡಿ ದಾಟಿ ಕಾಂಬೋಡಿಯಾ ಪ್ರವೇಶಿಸಿದ ಕಮ್ಯುನಿಸ್ಟ್ ಹೋರಾಟಗಾರರನ್ನು ಹುಡುಕಲು ಮತ್ತು ಸೆರೆ ಹಿಡಿಯಲು ಪ್ರಯತ್ನಿಸಿದಾಗ ಅಸಂಖ್ಯ ಸಾವುನೋವು ಸಂಭವಿಸಿತು. ಕಿಸಿಂಜರ್ ಈ ಕಾರ್ಯದ ನೇತೃತ್ವ ವಹಿಸಿದ್ದರು; ಆದರೆ, ಅದನ್ನು ಅಮೆರಿಕನ್ನರಿಂದ ರಹಸ್ಯವಾಗಿಟ್ಟಿದ್ದರು. ಒಂದು ಅಂದಾಜಿನ ಪ್ರಕಾರ, 1,50,000 ಕಾಂಬೋಡಿಯನ್ನರು ಕೊಲ್ಲಲ್ಪಟ್ಟರು. ಇನ್ನೊಂದು ಅಂದಾಜಿನ ಪ್ರಕಾರ, ಈ ಸಂಖ್ಯೆ 2,75,000 ಮತ್ತು 3,10,000 ನಡುವೆ ಇದೆ. ಅಸಂಖ್ಯಾತ ಜನರು ಅಂಗಾಂಗಗಳನ್ನು ಕಳೆದುಕೊಂಡರು. ಇಂದಿಗೂ ಆ ಆಘಾತದಿಂದ ಜನ ಹೊರಬಂದಿಲ್ಲ.

ಅಮೆರಿಕದ ಅನಿಯಂತ್ರಿತ ದಾಳಿಯಿಂದ ಕಾಂಬೋಡಿಯನ್ ರಾಜ್ಯ ಮತ್ತು ಸಮಾಜ ದುರ್ಬಲವಾಯಿತು. ಅಂತರ್ಯುದ್ಧಕ್ಕೆ ಕಾರಣವಾಗಿ, ಆಡಳಿತ ಖೇಮರ್ರೋಜ್ ಕೈಸೇರಿತು. ಈ ಆಡಳಿತವು ಎರಡು ದಶಲಕ್ಷ ಕಾಂಬೋಡಿಯನ್ನರ ಸಾವು-ನೋವಿಗೆ ಕಾರಣವಾಯಿತು.

ಲಾವೋಸ್ ಕೂಡ ಇಂಥದ್ದೇ ಸಂಕಷ್ಟ ಅನುಭವಿಸಿತು; ಆದರೆ ಪ್ರಮಾಣ ಕಡಿಮೆ ಇತ್ತು. ವಿಯೆಟ್ನಾಂ ಯುದ್ಧದ ಸಮಯದಲ್ಲಿ ಲಾವೋಸ್ನಲ್ಲಿ ಸುಮಾರು 62,000 ಜನರು ಪ್ರಾಣ ಕಳೆದುಕೊಂಡರು. ವಿಯೆಟ್ನಾಂನಲ್ಲಿ ಅಮೆರಿಕನ್ನರು ಎರಡನೆಯ ಮಹಾಯುದ್ಧದ ಸಮಯದಲ್ಲಿ ಜಪಾನ್ಮೇಲೆ ಬಳಸಿದಂತೆ ಅನೇಕ ಬಾಂಬ್ಗಳನ್ನು ಎಸೆದರು. ವಿಯೆಟ್ ಕಾಂಗ್ಗಳು ಅಡಗಿಕೊಂಡಿದ್ದ ಕಾಡುಗಳನ್ನು ನಾಶಮಾಡಲು, ಏಜೆಂಟ್ ಆರೆಂಜ್ ಎಂಬ ಘೋರ ರಸಾಯನಿಕವನ್ನು ಬಳಸಿದರು. ಇದೆಲ್ಲದರ ಹೊರತಾಗಿಯೂ, ಅಮೆರಿಕನ್ನರು ಯುದ್ಧದಲ್ಲಿ ಸೋಲುಂಡರು.

1973ರಲ್ಲಿ ಯುಎಸ್ ವಿಯೆಟ್ನಾಂ ಅನ್ನು ತೊರೆದಾಗ, 58,000 ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದರು. 1975ರಲ್ಲಿ ಉತ್ತರ ವಿಯೆಟ್ನಾಮ್ಸೈಗಾನ್ ನ್ನು ವಶಪಡಿಸಿಕೊಂಡಿತು ಮತ್ತು ದೇಶವನ್ನು ಒಂದುಗೂಡಿಸಿತು. ಆದರೆ, ವಿಯಟ್ನಾಮೀಯರು ಹೆಚ್ಚಿನ ಬೆಲೆ ತೆರಬೇಕಾಯಿತು; 2 ದಶಲಕ್ಷ ನಾಗರಿಕರು ಮತ್ತು 1.1 ದಶಲಕ್ಷ ಸೈನಿಕರು ಸತ್ತರು. ನಿಕ್ಸನ್ ಮತ್ತು ಕಿಸ್ಸಿಂಜರ್ ಜೀವಹಾನಿಯ ಹೊಣೆಗಾರಿಕೆಯನ್ನು ಹಂಚಿಕೊಂಡರು. ವಿಪರ್ಯಾಸವೆಂದರೆ, ಹತ್ಯಾಕಾಂಡದ ಅಂತ್ಯದ ಮಾತುಕತೆಯಲ್ಲಿ ಅವರ ಪಾತ್ರಕ್ಕಾಗಿ ಕಿಸಿಂಜರ್ಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು!

ಚಿಲಿ ಅಧ್ಯಕ್ಷ ಅಲೆಂಡೆಯನ್ನು ಕೊಂದು ಜನರಲ್ ಪಿನೋಚೆಟ್ ಅವರ ಮಿಲಿಟರಿ ಆಡಳಿತವನ್ನು ಸ್ಥಾಪಿಸಿದ ದಂಗೆಯನ್ನು ಅಮೆರಿಕ ಬೆಂಬಲಿಸಿತು. ಇದಕ್ಕೂ ಹಿಂದೆ ಅರ್ಜೆಂಟೀನಾದಲ್ಲಿ ಮಿಲಿಟರಿ ಆಡಳಿತವನ್ನು ಅಮೆರಿಕ ಬೆಂಬಲಿಸಿತ್ತು.ಕಿಸಿಂಜರ್ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯನ್ನು ಅನುಸರಿಸುತ್ತಿದ್ದ ಆಡಳಿತವನ್ನು, ಜೈರ್ನ ಸರ್ವಾಧಿಕಾರಿ ಮೊಬುಟು ಸೆಸೆ ಸೆಕೊರಂತಹ ಮಧ್ಯಸ್ಥಿಕೆದಾರರ ಸಹಾಯದಿಂದ ಆಫ್ರಿಕಾದಲ್ಲಿ ರಾಷ್ಟ್ರೀಯ ವಿಮೋಚನಾ ಹೋರಾಟಗಳನ್ನು ಹತ್ತಿಕ್ಕುವ ನೀತಿಯನ್ನು ಬೆಂಬಲಿಸಿದರು. ಅಂಗೋಲಾದಲ್ಲಿ ಅರ್ಧ ದಶಲಕ್ಷ ಜನರು ಸತ್ತರು; ಆದರೆ, ವಿಮೋಚನಾ ಚಳವಳಿ ಮೇಲುಗೈ ಸಾಧಿಸಿತು. ಇಂದಿನ ಜಿಂಬಾಬ್ವೆಯ ರೋಡೇಷಿಯಾ ದಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ.

ಕಿಸಿಂಜರ್‌ ಅವರ ರಾಜಕೀಯದ ಲಕ್ಷಣಗಳೆಂದರೆ, ಅಮೆರಿಕನ್ ಅಲ್ಲದ ಜೀವಗಳ ಮೇಲಿನ ಸಂಪೂರ್ಣ ನಿರ್ಲಕ್ಷ್ಯ. ದಶಕಗಳ ನಂತರ ಇರಾಕ್ ಮತ್ತು ಅಫಘಾನಿಸ್ತಾನದಲ್ಲಿ ಭಯೋತ್ಪಾದನೆ ವಿರುದ್ಧ ಅಮೆರಿಕದ ಯುದ್ಧಕ್ಕೆ ಪೂರಕವಾಗಿದೆ. ಕಿಸಿಂಜರ್ ಇಷ್ಟಪಟ್ಟಿದ್ದು ಒಂದೇ ದೇಶ: ಚೀನಾ. ಸೋವಿಯತ್ ಯೂನಿಯನ್ ಮತ್ತು ಮಾವೋನ ಚೀನಾದ ನಡುವಿನ ಭಿನ್ನಾಭಿಪ್ರಾಯಗಳಿಂದ ಪ್ರಯೋಜನ ಪಡೆಯಲು ನಿಕ್ಸನ್ ಮತ್ತು ಕಿಸಿಂಜರ್ ಜೋಡಿ ಯು ಮಾವೋ ಅವರ ಕಮ್ಯುನಿಸ್ಟ್ ಆಡಳಿತವನ್ನು ದೃಢೀಕರಿಸಿತು.

ಜನರಲ್ ಯಾಹ್ಯಾ ಖಾನ್ ಅವರನ್ನು ಒಳಗೊಳ್ಳುವ ಮೂಲಕ ಕಿಸಿಂಜರ್, ಮಾವೋ ಜೊತೆ ಸಂಪರ್ಕ ಸಾಧಿಸಿದರು. ಚೀನಾದಲ್ಲಿ ಉದ್ಯಮ-ವಹಿವಾಟು ಸ್ಥಾಪಿಸಲು ಅನೇಕ ಅಮೆರಿಕನ್ನರಿಗೆ ಸಹಾಯ ಮಾಡಿದರು. ಸಲಹಾ ಸೇವೆ ಒದಗಿಸುವ ಮೂಲಕ ಸಾಕಷ್ಟು ಹಣ ಗಳಿಸಿದರು. ಚೀನಾವನ್ನು ಅಮೆರಿಕಕ್ಕೆ ಪ್ರಬಲ ಪ್ರತಿಸ್ಪರ್ಧಿಯಾಗಿ ಮಾಡುವಲ್ಲಿ ಅವರ ಪಾತ್ರವಿದೆ. ಕಿಸಿಂಜರ್ ತನ್ನ ಎದುರಾಳಿಯನ್ನು ನೇರವಾಗಿ ಎದುರಿಸದೆ, ಪ್ರಪಂಚದ ಮೇಲೆ ಭಾರಿ ಪ್ರಭಾವ ಬೀರಿದ ವ್ಯಕ್ತಿ.

(ಟಿ.ಕೆ. ಅರುಣ್ ದೆಹಲಿ ಮೂಲದ ಹಿರಿಯ ಪತ್ರಕರ್ತ)

(ಲೇಖನದಲ್ಲಿನ ಮಾಹಿತಿ, ಆಲೋಚನೆ ಅಥವಾ ಅಭಿಪ್ರಾಯಗಳು ಲೇಖಕರದ್ದು; ಅದು ದಿ ಫೆಡರಲ್‌ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ)

Read More
Next Story