ಮ್ಯಾನ್ಮಾರ್‌ನಲ್ಲಿ ಸೇನಾಡಳಿತದ ಕುಸಿತ: ಭಾರತ, ಅಮೆರಿಕದಿಂದ ನಿರ್ಲಕ್ಷ್ಯ
x

ಮ್ಯಾನ್ಮಾರ್‌ನಲ್ಲಿ ಸೇನಾಡಳಿತದ ಕುಸಿತ: ಭಾರತ, ಅಮೆರಿಕದಿಂದ ನಿರ್ಲಕ್ಷ್ಯ

ಸೇನೆಯ ಕಿರಿಯ ಅಧಿಕಾರಿಗಳು ಸೇನಾಧಿಪತಿ ಮಿನ್ ಆಂಗ್ ಹ್ಲೈಂಗ್‌ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಅಧ್ಯಕ್ಷರಾಗುವ ಪ್ರಯತ್ನ ವಿಫಲವಾಗಿದ್ದಕ್ಕೆ ಸೇಡು ತೀರಿಸಿಕೊಳ್ಳಲು ದಂಗೆ ಎದ್ದರು. ಅವರ ಯುದ್ಧ ಮತ್ತು ಆರ್ಥಿಕತೆಯ ನಿರ್ವಹಣೆ ಸಮರ್ಪಕವಾಗಿಲ್ಲ ಎಂದು ಅನೇಕ ಜನರು ಭಾವಿಸುತ್ತಾರೆ.


ಮ್ಯಾನ್ಮಾರ್‌ನಲ್ಲಿ ಸೇನಾಡಳಿತದ ಕುಸಿತ: ಭಾರತ, ಅಮೆರಿಕದಿಂದ ನಿರ್ಲಕ್ಷ್ಯ

-ಸುಬೀರ್ ಭೌಮಿಕ್


ಸದ್ಯ ಮ್ಯಾನ್ಮಾರ್ ಗಡಿ ಬಳಿ ಚೀನಾದ ಸೇನೆ ಸಮರಾಭ್ಯಾಸ ನಡೆಸುತ್ತಿದೆ. ವಿವಿಧ ಸಶಸ್ತ್ರ ಗುಂಪುಗಳು ಸಂಘರ್ಷ ಮತ್ತು ಅಸ್ಥಿರ ಆರ್ಥಿಕತೆಯಿಂದಾಗಿ ಮ್ಯಾನ್ಮಾರ್ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಮ್ಯಾನ್ಮಾರ್‌ನಲ್ಲಿ ಸಂಭವಿಸಬಹುದಾದ ಯಾವುದೇ ಪರಿಸ್ಥಿತಿಯನ್ನು ಬಗೆಹರಿಸಲು ಚೀನಾ ಮಾತ್ರ ಸನ್ನದ್ಧವಾಗಿದೆ.

ಚೀನಾ ಮತ್ತು ಮ್ಯಾನ್ಮಾರ್ ನಡುವಿನ ಗಡಿ ಪ್ರದೇಶದಲ್ಲಿ ನವೆಂಬರ್ 25 ರಿಂದ ಸೇನಾ ಚಟುವಟಿಕೆ ಪ್ರಾರಂಭವಾಗಿದೆ.ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ತಾನು ಸಿದ್ಧ ಎಂದು ಚೀನಾದ ಸೇನಾ ಕಮಾಂಡ್ ಇತ್ತೀಚೆಗೆ ಹೇಳಿತ್ತು. ಮ್ಯಾನ್ಮಾರ್‌ಗೆ ಸರಕು ಸರಬರಾಜು ಮಾಡುತ್ತಿದ್ದ ಟ್ರಕ್‌ಗಳ ಗುಂಪಿನ ಮೇಲೆ ಬೆಂಕಿ ದಾಳಿ ನಡೆದ ನಂತರ ಸಮರಾಭ್ಯಾಸ ಆರಂಭಿಸಲಾಯಿತು. ಮ್ಯಾನ್ಮಾರ್‌ ನಲ್ಲಿ ಹಿಂಸಾಚಾರಕ್ಕೆ ಸಶಸ್ತ್ರ ಬಂಡುಕೋರರು ಕಾರಣ ಎಂದು ಚೀನಾದ ಮಾಧ್ಯಮಗಳು ಹೇಳಿದೆ. ಚೀನಾದ ಅಧಿಕಾರಿಗಳು ಮ್ಯಾನ್ಮಾರ್‌ನ ಉನ್ನತಾಧಿಕಾರಿಗಳನ್ನು ಭೇಟಿ ಮಾಡಿ, ಪ್ರದೇಶದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಕುರಿತು ಚರ್ಚಿಸಿದ್ದಾರೆ.

ಇತ್ತೀಚೆಗೆ ಎರಡೂ ದೇಶಗಳ ನಡುವೆ ಅಶಾಂತಿಯ ಸೂಚನೆಗಳು ಕಾಣುತ್ತಿವೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಐದು ವಿಭಾಗಗಳಲ್ಲಿ ಒಂದಾದ ಸದರ್ ಥಿಯೇಟರ್ ಕಮಾಂಡ್ ಸಮರಾಭ್ಯಾಸದಲ್ಲಿ ಪಾಲ್ಗೊಂಡಿದೆ. ಅಭ್ಯಾಸದಲ್ಲಿ ಎಷ್ಟು ಸೈನಿಕರು ಭಾಗವಹಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಮ್ಯೂಸ್ ನಗರದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮ್ಯಾನ್ಮಾರ್‌ನ ಸೇನೆಯು ಪೂರ್ವ ಮತ್ತು ಇತರ ಪ್ರದೇಶಗಳಲ್ಲಿನ ಅನೇಕ ನಗರಗಳು ಮತ್ತು ಚೆಕ್‌ಪೋಸ್ಟ್‌ಗಳನ್ನು ನಿಯಂತ್ರಿಸುತ್ತಿದೆ. ಬಂಡುಕೋರ ಗುಂಪುಗಳಿಂದ ಪ್ರಬಲ ಪ್ರತಿರೋಧ ಎದುರಾಗುತ್ತಿದೆ. ಮ್ಯಾನ್ಮಾರ್‌ ಸೇನೆ ಸಶಸ್ತ್ರ ಗುಂಪುಗಳ ಒತ್ತಡ ಮತ್ತು ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಅಂತಿಮವಾಗಿ ಕುಸಿಯಬಹುದು ಎಂದು ಕೆಲವರು ನಂಬುತ್ತಾರೆ.

ಭಾರತ ಮತ್ತು ಅಮೆರಿಕ ದೇಶಗಳು ಇಂಥ ಸಾಧ್ಯತೆಯನ್ನು ಎದುರಿಸಲು ಸಿದ್ಧವಾಗಿಲ್ಲ. ಇತ್ತೀಚೆಗೆ ಮ್ಯಾನ್ಮಾರ್‌ ಸೇನೆಯು ಜನಾಂಗೀಯ ಅಲ್ಪಸಂಖ್ಯಾತ ಗುಂಪುಗಳು ಮತ್ತು ಪೀಪಲ್ಸ್ ಡಿಫೆನ್ಸ್ ಫೋರ್ಸ್‌ಗೆ ಸೇರಿದ ಭಾರಿ ಪ್ರಮಾಣದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಬರ್ಮಾದ ಜನಾಂಗೀಯ ಗುಂಪುಗಳು ಬಹುಸಂಖ್ಯಾತವಾಗಿವೆ. ಒಂದುವೇಳೆ, ಪ್ರತಿರೋಧ ಎದುರಾದಲ್ಲಿ ಸರ್ಕಾರಿ ಸೈನಿಕರು ಓಡಿಹೋಗು ತ್ತಾರೆ ಅಥವಾ ಸೆರೆಯಾಗುತ್ತಾರೆ.

ಉತ್ತರ ಮತ್ತು ಪೂರ್ವ ಮ್ಯಾನ್ಮಾರ್‌ನ ಕೆಲವು ಭಾಗಗಳಲ್ಲಿ, ನಿರ್ದಿಷ್ಟವಾಗಿ ಶಾನ್ ರಾಜ್ಯದಲ್ಲಿ, ಸಶಸ್ತ್ರ ಬಂಡುಕೋರರ ಮೂರು ಗುಂಪುಗಳು ಅನೇಕ ಸೇನಾ ನೆಲೆಗಳ ಮೇಲೆ ನಿಯಂತ್ರಣ ಸಾಧಿಸಿವೆ. ಮುಖ್ಯವಾಗಿ, ಚೀನಾದೊಂದಿಗೆ ಸಾರಿಗೆ ಮತ್ತು ವ್ಯಾಪಾರಕ್ಕೆ ಬಳಸುವ ರಸ್ತೆಗಳನ್ನು ಅವರು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಬಿಬಿಸಿ ವರದಿ ಪ್ರಕಾರ, ಎರಡು ವರ್ಷದಿಂದ ಹೋರಾಡುತ್ತಿರುವ ಸೇನೆ ಈಗ ದುರ್ಬಲ ವಾಗಿದೆ. ದೇಶದ ಅಧ್ಯಕ್ಷರು ಕೂಡ ಸೇನೆಯ ಸೋಲಿನಿಂದ ದೇಶವು ಸಣ್ಣ ಪ್ರದೇಶಗಳಾಗಿ ಒಡೆಯಬಹುದು ಅಥವಾ ವಿಫಲ ರಾಜ್ಯವಾಗಬಹುದು ಎಂದು ಎಚ್ಚರಿಸಿದ್ದಾರೆ.

ಸೈ ನಿಕರು ಸೇನೆಯನ್ನು ತೊರೆಯುತ್ತಿದ್ದಾರೆ. ಕೊರತೆಯನ್ನು ಭರ್ತಿ ಮಾಡಲು ಸೇನೆ ಗ್ರಾಮಗಳ ಮೇಲೆ ಬಾಂಬ್ ದಾಳಿ ನಡೆಸಿತು. ಇದರಿಂದ ಜನ ಕೋಪಗೊಳ್ಳುತ್ತಾರೆ. ಇದು ಸೇನೆಯನ್ನು ವಿರೋಧಿಸುವ ಗುಂಪುಗಳ ರಚನೆಗೆ ಕಾರಣವಾಗಬಹುದು. ರಷ್ಯಾ ಮಿಲಿಟರಿ ವಿಮಾನಗಳ ಕೊರತೆ ಎದುರಿಸುತ್ತಿದ್ದು, ಮ್ಯಾನ್ಮಾರ್‌ ಸೇನೆಗೆ ನೆರವಾಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಉತ್ತರ ಕೊರಿಯಾದಂತಹ ದೇಶಗಳಿಂದ ಶಸ್ತ್ರಾಸ್ತ್ರ ಹುಡುಕಲು ಪ್ರಾರಂಭಿಸುತ್ತಿದೆ.

ಅಮೆರಿಕದ ವಿದೇಶಾಂಗ ಸಂಬಂಧಗಳ ಮಂಡಳಿ ವರದಿ ಪ್ರಕಾರ, ಮ್ಯಾನ್ಮಾರ್ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿದೆ. ಜನರಲ್ ಮಿನ್ ಆಂಗ್ ಹ್ಲೈಂಗ್ ಪರಿಸ್ಥಿತಿಯನ್ನು ನಿರ್ವಹಿಸುತ್ತಿರುವ ರೀತಿಗೆ ಕಿರಿಯ ಅಧಿಕಾರಿಗಳು ಅಸಮಾಧಾನಗೊಂಡಿದ್ದಾರೆ. ಏಷ್ಯಾ ಖಂಡದಲ್ಲಿನ ಸಂಘರ್ಷಗಳ ಪರಿಣತ ಅಂಥೋನಿ ಡೇವಿಸ್, ಗೆರಿಲ್ಲಾ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸೇನೆ ಉತ್ತರದ ಪ್ರದೇಶಗಳಿಂದ ಹಿಮ್ಮೆಟ್ಟಿದರೆ ಮತ್ತು ಮಧ್ಯ ಮ್ಯಾನ್ಮಾರ್‌ನ ಪ್ರಮುಖ ನಗರಗಳನ್ನು ರಕ್ಷಿಸಲು ಮುಂದಾದರೆ, ನೈಪಿಡಾದಲ್ಲಿನ ಪ್ರಧಾನ ಕಚೇರಿಯನ್ನು ಕಳೆದುಕೊಳ್ಳಬೇಕಾಗುತ್ತದೆ.

ತತ್ಮದಾ ಸೇನೆ ಆಂತರಿಕವಾಗಿ ದುರ್ಬಲವಾಗಿದೆ ಎಂಬುದನ್ನು ನೆರೆಯ ರಾಷ್ಟ್ರಗಳು ಅರ್ಥ ಮಾಡಿಕೊಳ್ಳಬೇಕಿದೆ. ಬಂಡುಕೋರರು ಗಮನಾರ್ಹ ಪ್ರಗತಿಯನ್ನು ಸಾಧಿಸಿದರೆ, ಮಿಲಿಟರಿ ಸಂಪೂರ್ಣವಾಗಿ ಕುಸಿಯಬಹುದು; ದೇಶ ಸಣ್ಣ ತುಣುಕುಗಳಾಗಿ ಒಡೆಯಬಹುದು. ಈ ಬಣಗಳು ಪರಸ್ಪರ ಹೋರಾಡಿ, ಹಿಂಸಾಚಾರಕ್ಕೆ ಕಾರಣವಾಗಬಹುದು; ಇದು ಮ್ಯಾನ್ಮಾರ್‌ನಲ್ಲಿ ಉಳಿದಿರುವುದನ್ನೆಲ್ಲ ನಾಶಪಡಿಸಬಹುದು.

ಚೀನಾ ವಿವಿಧ ಸಾಧ್ಯತೆಗಳಿಗೆ ತಯಾರಿ ನಡೆಸುತ್ತಿದೆ. ಆದರೆ, ಭಾರತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯನ್ನು ಎದುರಿಸು ತ್ತಿದೆ. ಅಕ್ರಮವಾಗಿ ಮಿಜೋರಾಂ ಪ್ರವೇಶಿಸಿದ 20ಕ್ಕೂ ಹೆಚ್ಚು ಸೈನಿಕರನ್ನು ರಕ್ಷಿಸಿ ಮ್ಯಾನ್ಮಾರ್ ಗೆ ವಾಪಸ್ ಕಳುಹಿಸುವ ಮೂಲಕ ಭಾರತ ಪ್ರತಿಭಟನಕಾರರನ್ನು ಬೆಂಬಲಿಸುತ್ತಿದ್ದೇವೆ ಸಂದೇಶ ರವಾನಿಸಿದೆ.

ಮಿಲಿಟರಿ ಕ್ರಮದ ಅಗತ್ಯವಿಲ್ಲ ಎಂದು ಅಮೆರಿಕದ ಅನೇಕ ಉನ್ನತ ಅಧಿಕಾರಿಗಳು ನಂಬಿದ್ದಾರೆ ಮತ್ತು ಬಿಕ್ಕಟ್ಟನ್ನು ಪರಿಹರಿಸಲು ಎದುರಾಳಿ ಗುಂಪಿನೊಂದಿಗೆ ಚರ್ಚಿಸುತ್ತಿದ್ದಾರೆ. ಅಮೆರಿಕ ಮತ್ತು ಭಾರತ ಸರ್ಕಾರಗಳು ಮ್ಯಾನ್ಮಾರ್‌ನಲ್ಲಿನ ಸಂಭಾವ್ಯ ಅಸ್ಥಿರತೆ ಮತ್ತು ಪ್ರಜಾಪ್ರಭುತ್ವ ಸರ್ಕಾರವನ್ನು ಹೇಗೆ ಬೆಂಬಲಿಸುವುದು ಎಂದು ಚರ್ಚಿಸುತ್ತಿಲ್ಲ. ಆರ್ಥಿಕ ಅಸ್ಥಿರತೆ ಮತ್ತು ಮೂಲಭೂತ ಸೇವೆಗಳ ಕೊರತೆಯಿರುವ ದೇಶದಲ್ಲಿ ಸೇನೆ ವಿಫಲವಾದರೆ, ಹೊಸ ನಾಗರಿಕ ಸರ್ಕಾರವನ್ನು ಸ್ಥಾಪಿಸಲು ಸಾಧ್ಯವಾಗುವುದಿಲ್ಲ.

ಮ್ಯಾನ್ಮಾರ್ ರಾಷ್ಟ್ರೀಯ ಏಕತಾ ಸರ್ಕಾರ (ಎನ್‌ಯುಜಿ)ದ ಮುಖಂಡರು ಪರಿಹಾರ ಕಂಡುಹಿಡಿಯಲು ಕೆಲಸ ಮಾಡುತ್ತಿದ್ದಾರೆ. ಆದರೆ, ಹೆಚ್ಚಿನ ನಾಯಕರು ಕಾಣೆಯಾಗಿದ್ದಾರೆ ಮತ್ತು ಜನತೆ ಸೇನೆಯ ಹಿಡಿತದಲ್ಲಿ ನರಳುತ್ತಿದೆ. ಮ್ಯಾನ್ಮಾರಿನಲ್ಲಿ ಸೇನೆಯ ಕುಸಿತಕ್ಕೆ ಭಾರತ ಮತ್ತು ಪಶ್ಚಿಮ ಸರಿಯಾಗಿ ಪ್ರತಿಕ್ರಿಯಿಸದಿದ್ದರೆ, ಚೀನಾ ತ ಪ್ರಭಾವವನ್ನು ಹೆಚ್ಚಿಸಿಕೊಳ್ಳಲಿದೆ.

(ಲೇಖನದಲ್ಲಿರುವ ಅಭಿಪ್ರಾಯಗಳನ್ನು ಫೆಡರಲ್ ಪ್ರತಿಬಿಂಬಿಸುವುದಿಲ್ಲ)


Read More
Next Story