ಗರ್ಭಾಶಯ ಹೊಂದಿರುವವರು ನಿರ್ಧರಿಸಲು ಆಗದ ಗರ್ಭಪಾತ ಕಾನೂನು
ಮಹಿಳೆಯೊಬ್ಬಳು ಸ್ವಂತ ನಿರ್ಧಾರ ತೆಗೆದುಕೊಳ್ಳಬಹುದೇ ಮತ್ತು ಸ್ವಂತ ದೇಹದ ಮೇಲೆ ನಿಯಂತ್ರಣ ಹೊಂದಬಹುದೇ? ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪಿನ ಪ್ರಕಾರ, ವಿವಾಹಿತ ಮಹಿಳೆ 27 ವಾರಗಳ ಗರ್ಭವನ್ನು ಸ್ಥಗಿತಗೊಳಿಸುವಂತಿಲ್ಲ
ಗರ್ಭಾಶಯ ಹೊಂದಿರುವವರು ನಿರ್ಧರಿಸಲು ಆಗದ ಗರ್ಭಪಾತ ಕಾನೂನು
- ಶ್ವೇತಾ ಕಲ್ಯಾಣ್ ವಾಲಾ
ಮಹಿಳೆಯೊಬ್ಬಳು ಸ್ವಂತ ನಿರ್ಧಾರ ತೆಗೆದುಕೊಳ್ಳಬಹುದೇ ಮತ್ತು ಸ್ವಂತ ದೇಹದ ಮೇಲೆ ನಿಯಂತ್ರಣ ಹೊಂದಬಹುದೇ? ಇಲ್ಲ. ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪಿನ ಪ್ರಕಾರ, ವಿವಾಹಿತ ಮಹಿಳೆ 27 ವಾರಗಳ ಗರ್ಭವನ್ನು ಸ್ಥಗಿತಗೊಳಿಸುವಂತಿಲ್ಲ. ಗರ್ಭಾವಸ್ಥೆಯನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ಮಹಿಳೆ ತಮ್ಮ ಮನವಿಯಲ್ಲಿ ಸ್ಪಷ್ಟವಾಗಿ ಹೇಳಿದ್ದರು. ಸುಪ್ರೀಂಕೋರ್ಟ್ ತೀರ್ಪು ಮಹಿಳೆಯರಿಗೆ ದೈಹಿಕ, ಮಾನಸಿಕ ಮತ್ತು ಸಂತಾನೋತ್ಪತ್ತಿ ಕ್ರಿಯೆಗಳ ಮೇಲೆ ಸಾಕಷ್ಟು ನಿಯಂತ್ರಣ ಮತ್ತು ಸ್ವಾತಂತ್ರ್ಯವನ್ನು ನೀಡಿಲ್ಲ ಎಂಬ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
ಎರಡನೇ ಮಗುವಿಗೆ ಎದೆಹಾಲು ಉಣಿಸುತ್ತಿದ್ದ ಮಹಿಳೆ ಮತ್ತೊಮ್ಮೆ ಗರ್ಭ ಧರಿಸುತ್ತಾರೆ. 24 ವಾರಗಳ ಗರ್ಭಿಣಿ ಎಂದು ತಿಳಿದ ತಕ್ಷಣ, ಗರ್ಭಪಾತಕ್ಕೆ ನಿರ್ಧರಿಸಿದಾಗ, ವೈದ್ಯರು ಸಹಾಯ ನೀಡಲು ನಿರಾಕರಿಸಿದರು. ಕೊನೆಗೆ ಅವರು ನ್ಯಾಯಾಲಯದ ಮೊರೆ ಹೋಗಬೇಕಾಯಿತು.
ನ್ಯಾಯಾಧೀಶರ ಎರಡು ಗುಂಪುಗಳು ಪ್ರಕರಣವನ್ನು ಎಚ್ಚರಿಕೆಯಿಂದ ಪರಿಶೀಲಿಸಿದವು. ಯೋಜಿತವಲ್ಲದ ಗರ್ಭವನ್ನು ಮುಂದುವರಿಸುವಂತೆ ಮಹಿಳೆಗೆ ಮನವರಿಕೆ ಮಾಡಲು ನ್ಯಾಯಾಲಯ ಪ್ರಯತ್ನಿಸಿತು. ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(AIIMS) ನ ತಜ್ಞರ ಗುಂಪನ್ನು ಸುಪ್ರೀಂ ಕೋರ್ಟ್‌ಗೆ ಸಹಾಯ ಮಾಡಲು ರಚಿಸಲಾಯಿತು. ʻ ಮಗುವಿನ ಬೆಳವಣಿಗೆಯಲ್ಲಿ ಯಾವುದೇ ತೊಂದರೆಗಳಿಲ್ಲʼ ಎಂದು ಸಮಿತಿ ಹೇಳಿತು.
ಮಹಿಳೆಯ ಮಾನಸಿಕ ಆರೋಗ್ಯವನ್ನೂ ಪರೀಕ್ಷಿಸಲಾಯಿತು. ವೈದ್ಯರ ಸಮಿತಿಯ ವರದಿಯನ್ನು ಪರಿಗಣಿಸಿದ ನ್ಯಾಯಾಧೀಶರು ಮಹಿಳೆ ತನ್ನ ಗರ್ಭಾವಸ್ಥೆಯನ್ನು ಮುಂದು ವರಿಸ ಬೇಕು ಮತ್ತು ಮಗುವನ್ನು ಹೊಂದಬೇಕು. ಗರ್ಭಾವಧಿ 24 ವಾರ ವನ್ನು ಮೀರಿದೆ ಮತ್ತು ಹುಟ್ಟಲಿರುವ ಮಗು ಬದುಕುಳಿಯುವ ಸಾಮರ್ಥ್ಯವನ್ನು ಹೊಂದಿದೆ. ತಾಯಿ ಮಗುವನ್ನು ಆರೈಕೆಗಾಗಿ ಬೇರೆಯವರಿಗೆ ನೀಡಬಹುದು ಎಂದು ತೀರ್ಪು ನೀಡಿದರು. ಇನ್ನೊಂ ದು ಮಗುವನ್ನು ಹೊಂದದಿರುವ ಆಕೆಯ ಆಯ್ಕೆಯನ್ನು ಮತ್ತು ಆಕೆಯ ನಿರ್ಧಾರದ ಹಿಂದಿನ ಭಾವನಾತ್ಮಕ ಅಂಶವನ್ನು ನ್ಯಾಯಾ ಲಯ ಗ್ರಹಿಸಲಿಲ್ಲ.
ನವಮಾಸ ಕಾಲ ಮಗುವನ್ನು ಹೊರುವ ಮತ್ತು ದತ್ತು ಆಯ್ಕೆಯ ದೈಹಿಕ, ಆರ್ಥಿಕ, ಭಾವನಾತ್ಮಕ ಮತ್ತು ಮಾನಸಿಕ ತೊಂದರೆಗಳನ್ನು ಯಾರೂ ಉಲ್ಲೇಖಿಸಲಿಲ್ಲ. ಜನಿಸಲಿರುವ ಮಗುವಿನ ಮೇಲೆ ಪ್ರಸವಾನಂತರದ ಖಿನ್ನತೆಗೆ ತೆಗೆದುಕೊಳ್ಳುವ ಔಷಧದ ಋಣಾತ್ಮಕ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಮಾನಸಿಕ ಆರೋಗ್ಯ ಗರ್ಭಾವಸ್ಥೆಯನ್ನು ಕೊನೆಗೊಳಿಸಲು ಒಂದು ಕಾರಣ ಎಂಬುದನ್ನು ಪರಿಗಣಿಸಲಿಲ್ಲ. ಮಹಿಳೆ ಈಗಾಗಲೇ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿ ದ್ದಾರೆ ಎಂಬ ಅಂಶವನ್ನು ನಿರ್ಲಕ್ಷಿಸಲಾಯಿತು. 'ಭ್ರೂಣ'ಕ್ಕೆ ಹೋಲಿಸಿ ದರೆ 'ತಾಯಿಯ' ಮಾನಸಿಕ ಆರೋಗ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಿಲ್ಲ.
ವೈದ್ಯರ ನೆರವಿನಿಂದ ಗರ್ಭಪಾತ (ಎಂಟಿಪಿ, ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ) ಕಾಯಿದೆ 1971 ರಲ್ಲಿ ಜಾರಿಗೊಂಡಿದ್ದು, 50 ವರ್ಷ ದಾಟಿದೆ. ಈ ಕಾನೂನು ಮಹಿಳೆಯರಿಗೆ ವಿವಿಧ ಕಾರಣಗಳಿಗಾಗಿ ಗರ್ಭಪಾತಕ್ಕೆ ಅನುಮತಿ ನೀಡುತ್ತದೆ. ಶಾಂತಿಲಾಲ್ ಷಾ ಸಮಿತಿಯು ಗರ್ಭಪಾತದ ಸಾಮಾಜಿಕ, ಸಾಂಸ್ಕೃತಿಕ, ಕಾನೂನು, ವೈದ್ಯಕೀಯ ಮತ್ತು ಧಾರ್ಮಿಕ ಅಂಶಗಳ ನ್ನು ಗಣನೆಗೆ ತೆಗೆದುಕೊಂಡು ಈ ಕಾಯಿದೆಯನ್ನು ರೂಪಿ ಸಿದೆ. ಗರ್ಭಿಣಿಯರಿಗೆ ಹಾನಿ ಅಥವಾ ಸಾವಿನ ಅಪಾಯವನ್ನು ಕಡಿಮೆ ಮಾಡಲು ಗರ್ಭಪಾತವನ್ನು ಕಾನೂನುಬದ್ಧಗೊಳಿಸುವಂತೆ ಸೂಚಿಸಿದೆ. ಕಾನೂನು ಸ್ವಲ್ಪಮಟ್ಟಿಗೆ ಉದಾರವಾಗಿದೆ.
ಆದರೆ, ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸುವ ಮೂಲಕ ಮತ್ತು ಗರ್ಭಪಾತಕ್ಕೆ ವೈದ್ಯಕೀಯ ವೃತ್ತಿಪರರ ಅನುಮೋದನೆಯನ್ನು ಕಡ್ಡಾಯಗೊಳಿಸುವ ಮೂಲಕ ಮಹಿಳೆಯರ ಗರ್ಭಪಾತದ ಹಕ್ಕನ್ನು ಸೀಮಿತಗೊಳಿಸಿತು. ಕಾಯಿದೆಯನ್ನು 2002 ಮತ್ತು ಆನಂತರ 2021 ರಲ್ಲಿ ತಿದ್ದುಪಡಿ ಮಾಡಲಾಯಿತು. ವಿವಾಹಿತ ಮಹಿಳೆಯರಿಗೆ ಸಮಾನವಾದ ಹಕ್ಕುಗಳನ್ನು ಒಂಟಿ ಮಹಿಳೆಯರಿಗೆ ನೀಡಿದ್ದರಿಂದ ಈ ಬದಲಾವಣೆಗಳನ್ನು ಕೆಲವರು ಶ್ಲಾಘಿಸಿದರು.
ಅತ್ಯಾಚಾರಕ್ಕೀಡಾದವರು ಮತ್ತು ವಿಧವೆ ಅಥವಾ ವಿಚ್ಛೇದನ ಹೊಂದಿದವರಿಗೆ ಗರ್ಭಧಾರಣೆ ಅವಧಿಯನ್ನು 20 ರಿಂದ 24 ವಾರಕ್ಕೆ ವಿಸ್ತರಿಸ ಲಾಯಿತು. ತಿದ್ದುಪಡಿಯಲ್ಲಿ 24 ವಾರಗಳ ನಂತರ ಗರ್ಭವನ್ನು ಕೊನೆಗೊಳಿಸುವ ನಿರ್ಧಾರ ತೆಗೆದುಕೊಳ್ಳಲು ವೈದ್ಯಕೀಯ ಮಂಡಳಿಗಳನ್ನು ರಚಿಸುವುದನ್ನು ಪ್ರಸ್ತಾಪಿಸುತ್ತದೆ. ಗರ್ಭಪಾತ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಇದರ ಗುರಿಯಾಗಿ ದೆ. ಆದರೆ, ಕಾಯಿದೆ ಮತ್ತು ತಿದ್ದುಪಡಿಗಳು ಮಹಿಳೆಯರಿಗೆ ಆದ್ಯತೆ ನೀಡುವುದಿಲ್ಲ. ಗರ್ಭಪಾತವನ್ನು ವೈದ್ಯರು ಮಾತ್ರ ನಿರ್ಧರಿಸಬಹುದು ಎಂದು ಹೇಳಲಾಗಿದೆ. ಈ ನಿಯಮಗಳು ಪುರುಷಾಧಿಕಾರಕ್ಕೆ ಆದ್ಯತೆ ನೀಡುವ ಸಮಾಜದಿಂದ ಬಂದಿವೆ ಮತ್ತು ಸ್ವಾತಂತ್ರ್ಯ ಮತ್ತು ದೇಹಕ್ಕೆ ಸಂಬಂಧಿಸಿದಂತೆ ಆಯ್ಕೆಗಳನ್ನು ಮಾಡುವ ಮಹಿಳೆಯರ ಸಾಮರ್ಥ್ಯ ವನ್ನು ನಿರ್ಬಂಧಿಸುತ್ತದೆ.
ಸರಳವಾಗಿ ಹೇಳಬೇಕೆಂದರೆ, ಪ್ರಸ್ತಾವಿತ ಕಾನೂನು ವೈದ್ಯರಿಗೆ ಹೆಚ್ಚು ಅಧಿಕಾರವನ್ನು ಕೊಡುತ್ತದೆ ಮತ್ತು ತಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬಹುದು ಎನ್ನುವ ಭಯವನ್ನು ಪರಿಗಣಿಸಿಲ್ಲ. ಇದು ಎಂಟಿಪಿ ಕಾಯಿದೆಯ ಉದ್ದೇಶಕ್ಕೆ ವಿರುದ್ಧವಾಗಿದೆ.
ಮಹಿಳೆಯರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಹಕ್ಕುಗಳನ್ನು ಸುಧಾರಿಸಲು ದೇಶ ಬದ್ಧವಾಗಿದೆ ಎಂದು ಸರ್ಕಾರ ಹೇಳುತ್ತದೆ. ಇತ್ತೀಚೆಗೆ ನ್ಯಾಯಾಲಯಗಳು ಗೌಪ್ಯತೆ, ವೈಯಕ್ತಿಕ ಸ್ವಾತಂತ್ರ್ಯ, ಖಾಸಗಿತನ ಮತ್ತಿತರ ಹಕ್ಕುಗಳನ್ನು ಮನ್ನಿಸುವ ಪ್ರಮುಖ ನಿರ್ಧಾರಗಳನ್ನು ಮಾಡಿವೆ. ದೇಶದಲ್ಲಿ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತ ಸೇವೆಗಳನ್ನು ಪಡೆಯುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ಮಹಿಳೆಯ ದೇಹದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಯಾರಿಗಿದೆ ಎಂಬುದು ಪ್ರಶ್ನೆ. ಆಕೆ ಅಥವಾ ಕುಟುಂಬ ಮತ್ತು ಸಮಾಜ? ಅಥವಾ ವೈದ್ಯಕೀಯ ವೃತ್ತಿಪರರೇ? ಮಹಿಳೆಯರು ತಮ್ಮ ದೇಹದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಮತ್ತು ಗರ್ಭವನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದನ್ನು ಅವರೇ ನಿರ್ಧರಿಸಬೇಕು. ದೇಶ ಅವರ ಹಕ್ಕುಗಳು ಮತ್ತು ಸ್ವಾಯತ್ತೆಯನ್ನು ಗೌರವಿಸಬೇಕಿದೆ.
ಇದು ಎಂಟಿಪಿ ಕಾಯಿದೆಗೆ ಸೀಮಿತವಾಗಿರಬಾರದು. ಗರ್ಭಪಾತ ಸೇರಿದಂತೆ ಲೈಂಗಿಕ ಮತ್ತು ಸಂತಾನೋತ್ಪತ್ತಿ ಹಕ್ಕು ಗಳನ್ನು ಹೊಂದುವ ಹಕ್ಕು ಪ್ರತಿ ಮಹಿಳೆಗೆ ಇದೆ ಎಂದು ಖಚಿತಪಡಿಸಿ ಕೊಳ್ಳಬೇಕು. ಯೋಜಿಸದ ಗರ್ಭವನ್ನು ಅಂತ್ಯಗೊಳಿಸಲು ವೈದ್ಯರು ಅಥವಾ ಕಾನೂನು ವ್ಯವಸ್ಥೆಯಿಂದ ಅನುಮತಿ ಪಡೆಯುವ ಅಗತ್ಯವಿಲ್ಲ.
(ಲೇಖನದಲ್ಲಿನ ಮಾಹಿತಿ, ಆಲೋಚನೆ ಅಥವಾ ಅಭಿಪ್ರಾಯಗಳು ಲೇಖಕರದ್ದು; ಅದು ದಿ ಫೆಡರಲ್‌ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ)