ಛತ್ತೀಸ್‌ಗಢ, ಮಧ್ಯಪ್ರದೇಶದಲ್ಲಿ ನೂತನ ಸಿಎಂ ಆಯ್ಕೆ: ಜಾತಿ ಸಮತೋಲನದತ್ತ ಗಮನಹರಿಸಿದ ಬಿಜೆಪಿ
x

ಛತ್ತೀಸ್‌ಗಢ, ಮಧ್ಯಪ್ರದೇಶದಲ್ಲಿ ನೂತನ ಸಿಎಂ ಆಯ್ಕೆ: ಜಾತಿ ಸಮತೋಲನದತ್ತ ಗಮನಹರಿಸಿದ ಬಿಜೆಪಿ

ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಬಿಜೆಪಿಯಲ್ಲಿ ಭಾರೀ ಬದಲಾವಣೆ


2024ರ ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಆಡಳಿತಾರೂಢ ಭಾರತೀಯ ಜನತಾ ಪಕ್ಷವು (ಬಿಜೆಪಿ) ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಗಳಾಗಿ ಇಬ್ಬರು ಹೊಸ ಮುಖಗಳನ್ನು ಆಯ್ಕೆ ಮಾಡಿದೆ, ಆದರೆ ಹೆಸರುಗಳನ್ನು ನಿರ್ಧರಿಸಲು ಪಕ್ಷವು ಒಂದು ವಾರಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದೆ.

ಭೋಪಾಲ್‌ನಲ್ಲಿ ಸೋಮವಾರ (ಡಿಸೆಂಬರ್ 11)ರಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ಮೋಹನ್ ಯಾದವ್ ಅವರ ಹೆಸರನ್ನು ಘೋಷಿಸಲಾಯಿತು. ಪ್ರಬಲ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಕ್ಕೆ ಸೇರಿದ ಯಾದವ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಯಿತು.

ಜಗದೀಶ್ ದೇವದಾ ಮತ್ತು ರಾಜೇಂದ್ರ ಶುಕ್ಲಾ ಅವರನ್ನು ರಾಜ್ಯದ ಉಪ ಮುಖ್ಯಮಂತ್ರಿಗಳಾಗಿ ನೇಮಕ ಮಾಡಿದ್ದು, ಮಾಜಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ವಿಧಾನಸಭೆಯ ನೂತನ ಸ್ಪೀಕರ್ ಡಲು ನಿರ್ಧರಿಸಲಾಯಿತು.

ಮಧ್ಯಪ್ರದೇಶದಲ್ಲಿ ನೂತನ ಮುಖ್ಯಮಂತ್ರಿಯಾಗಿ ಯಾದವ್ ಅವರನ್ನು ಆಯ್ಕೆ ಮಾಡುವ ಮೂಲಕ ಹೊಸ ನಾಯಕರಿಗೆ ರಾಜ್ಯ ಮತ್ತು ಶಾಸಕಾಂಗ ಪಕ್ಷವನ್ನು ಮುನ್ನಡೆಸಲು ಅವಕಾಶ ನೀಡಲಾಗಿದೆ.. ನವೆಂಬರ್ 2005ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಶಿವರಾಜ್ ಸಿಂಗ್ ಚೌಹಾಣ್ ಅವರ ಸುಮಾರು ನಾಲ್ಕು ಅವಧಿಯ ಅಧಿಕಾರಾವಧಿಯನ್ನು ಈ ಬದಲಾವಣೆಯು ಕೊನೆಗೊಳಿಸುತ್ತದೆ.

ಅದೇ ರೀತಿ ಛತ್ತೀಸ್‌ಗಢದಲ್ಲೂ ಬಿಜೆಪಿಯು ಹೊಸ ನಾಯಕರಿಗೆ ಅವಕಾಶ ನೀಡಿದೆ. ಭಾನುವಾರ (ಡಿಸೆಂಬರ್ 10) ನಿಯೋಜಿತ ಮುಖ್ಯಮಂತ್ರಿಯಾಗಿ ವಿಷ್ಣು ದೇವ ಸಾಯಿ ಅವರನ್ನು ನೇಮಕ ಮಾಡಲಾಗಿದೆ.

ಶಾಸಕಾಂಗ ಪಕ್ಷದ ಸಭೆಯ ವೀಕ್ಷಕರಾಗಿ ನೇಮಕಗೊಂಡಿರುವ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಾತನಾಡಿ,, ʼʼಮಧ್ಯಪ್ರದೇಶದ ಅಭಿವೃದ್ಧಿಯ ಪಯಣವನ್ನು ಮೋಹನ್ ಯಾದವ್ ಅವರು ಉನ್ನಡೆಸಿಕೊಂಡು ಹೋಗುತ್ತಾರೆʼʼ ಎಂದು ಹೇಳಿದರು.

ಈ ಸಭೆಯಲ್ಲಿ, ಯಾದವ್ ಹೆಸರನ್ನು ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದರು. ಕೇಂದ್ರದ ಮಾಜಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಇತ್ತೀಚೆಗೆ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಕೂಡ ಬೆಂಬಲ ಸೂಚಿಸಿದರು.

ಜಾತಿ ಸಮತೋಲನ ಕಾಯ್ದುಕೊಂಡ ಬಿಜೆಪಿ

2024 ರ ಸಾರ್ವತ್ರಿಕ ಚುನಾವಣೆಗೆ ಐದು ತಿಂಗಳಿಗಿಂತ ಕಡಿಮೆ ಸಮಯವಿರುವಾಗ, ಬಿಜೆಪಿಯ ಈ ನಿರ್ಧಾರವು ಮಧ್ಯಪ್ರದೇಶದಲ್ಲಿ ತನ್ನ ಸ್ಥಾನವನ್ನು ಬಲಪಡಿಸುವ ಪ್ರಯತ್ನವಾಗಿದೆ.. ಒಬಿಸಿ ನಾಯಕರೊಬ್ಬರನ್ನು ನೂತನ ಮುಖ್ಯಮಂತ್ರಿಯಾಗಿ ನೇಮಕ ಮಾಡುವ ಮೂಲಕ ಕೇಂದ್ರ ಬಿಜೆಪಿಯು ರಾಜ್ಯದಲ್ಲಿನ ಪ್ರಬಲ ಸಮುದಾಯದ ಮೇಲಿನ ತನ್ನ ಹಿಡಿತವನ್ನು ಬಲಪಡಿಸಿಕೊಳ್ಳುತ್ತಿದೆ.

ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯಕ್ಕೆ ಸೇರಿದ ದೇವದಾ ಮತ್ತು ಬ್ರಾಹ್ಮಣ ರಾಜೇಂದ್ರ ಶುಕ್ಲಾ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡುತ್ತಾರೆ ಎನ್ನುವುದು ಬಿಜೆಪಿಯ ಹಿರಿಯ ನಾಯಕರ ನಂಬಿಕಜೆಯಾಗಿದೆ. ಏಕೆಂದರೆ ಎಲ್ಲಾ ಪ್ರಬಲ ಜಾತಿ ಗುಂಪುಗಳ ಪ್ರತಿನಿಧಿಗಳಿಗೂ ಅವಕಾಶ ಕಲ್ಪಿಸಲಾಗಿದೆ.

ರಜಪೂತ ಸಮುದಾಯದ ತೋಮರ್ ಅವರನ್ನು ಸ್ಪೀಕರ್ ಆಗಿ ನೇಮಕ ಮಾಡಿರುವುದು ಬಿಜೆಪಿಗೆ ಆ ಸಮುದಾಯದ ಮೇಲೆ ತನ್ನ ಹಿಡಿತವನ್ನು ಮುಂದುವರಿಸಲು ಸಹಾಯ ಮಾಡುತ್ತದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದ 29 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿಯು ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ.

ಈ ಬಗ್ಗೆ ಸಭೆಯ ನಂತರ ಮಾತನಾಡಿದ ಯಾದವ್, ʼʼಒಬ್ಬ ಸಣ್ಣ ಕಾರ್ಯಕರ್ತನಿಗೆ ಇಷ್ಟು ದೊಡ್ಡ ಜವಾಬ್ದಾರಿ ನೀಡಲು ಬಿಜೆಪಿಯಿಂದ ಮಾತ್ರ ಸಾಧ್ಯ. ರಾಜ್ಯ ನಾಯಕತ್ವ ಮತ್ತು ಕೇಂದ್ರ ನಾಯಕತ್ವಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಧಾನಿ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ನಾನು ಮುಂದಕ್ಕೆ ಕೊಂಡೊಯ್ಯುತ್ತೇನೆʼʼ ಎಂದು ಹೇಳಿದರು.

ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಬಿಜೆಪಿಯು, ರಾಜ್ಯ ನಾಯಕತ್ವವನ್ನು ಬದಲಿಸಿ ಮತದಾರರನ್ನು ಒಗ್ಗೂಡಿಸುವ ತಂತ್ರವನ್ನು ಮಧ್ಯಪ್ರದೇಶದಲ್ಲಿ ಮಾತ್ರವಲ್ಲದೆ ಛತ್ತೀಸ್‌ಗಢದಲ್ಲಿಯೂ ಮಾಡಿದೆ. ಅಲ್ಲಿ ಬಿಜೆಪಿ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಬುಡಕಟ್ಟು ಜನಾಂಗದವರನ್ನು ಆಯ್ಕೆ ಮಾಡಿದೆ.

ಬಿಜೆಪಿಯು ವಿನೋದ್ ದೇವ್ ಸಾಯಿ ಅವರನ್ನು ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿಯಾಗಿ ನೇಮಿಸಿದೆ. ಬುಡಕಟ್ಟು ನಾಯಕನನ್ನು ಆಡಳಿತದ ಚುಕ್ಕಾಣಿಯಲ್ಲಿ ನೇಮಿಸುವ ಬಿಜೆಪಿಯ ನಿರ್ಧಾರವು ಜಾರ್ಖಂಡ್‌ನಲ್ಲಿಯೂ ಉಂದುವರೆದಿದೆ. ಅಲ್ಲಿ ಬಿಜೆಪಿಯು ಬಾಬುಲಾಲ್ ಮರಾಂಡಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿದೆ.

ಛತ್ತೀಸ್‌ಗಢದಲ್ಲಿ ತನ್ನ ರಾಜಕೀಯ ಮತ್ತು ಸಾಮಾಜಿಕ ನೆಲೆಯನ್ನು ಮತ್ತಷ್ಟು ಬಲಪಡಿಸಲು ಬಿಜೆಪಿ ಇಲ್ಲಿಯೂ ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಿಸಲು ನಿರ್ಧರಿಸಿದೆ. ಆದರೆ, ಅವರ ಹೆಸರು ಇನ್ನೂ ಅಂತಿಮಗೊಂಡಿಲ್ಲ. ಈ ಪೈಕಿ ಒಬ್ಬರು ಒಬಿಸಿ ಸಮುದಾಯಕ್ಕೆ ಸೇರಿದವರು ಮತ್ತು ಎರಡನೆಯವರು ಮೇಲ್ಜಾತಿಗೆ ಸೇರಿದವರು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಪ್ರತಿಪಕ್ಷಗಳನ್ನು ಎದುರಿಸುವ ತಂತ್ರ

ಜಾತಿ ಗಣತಿಯ ಬಗ್ಗೆ ಮಾತನಾಡುವ ವಿರೋಧ ಪಕ್ಷಗಳ ತಂತ್ರವನ್ನು ಎದುರಿಸಲು ಬಿಜೆಪಿಯು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಒಬಿಸಿ ನಾಯಕನನ್ನು ನೇಮಿಸಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಉಜ್ಜಯಿನಿಯ ಸಮಾಜ ವಿಜ್ಞಾನ ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕ ಮತ್ತು ನಿರ್ದೇಶಕ ಯತೀಂದ್ರ ಸಿಂಗ್ ಸಿಸೋಡಿಯಾ ಮಾತನಾಡಿ, ʼʼನಾವು ಮಧ್ಯಪ್ರದೇಶವನ್ನು ನೋಡಿದರೆ, ಸಿಎಂ ಒಬಿಸಿ ಸಮುದಾಯದಿಂದ ಬಂದವರು ಮತ್ತು ಉಪ ಮುಖ್ಯಮಂತ್ರಿಗಳು ಎಸ್‌ಸಿ ಮತ್ತು ಬ್ರಾಹ್ಮಣರು ಅಷ್ಟೇ ಅಲ್ಲದೇ ನರೇಂದ್ರ ಸಿಂಗ್ ತೋಮರ್ ಅವರು ಸ್ಪೀಕರ್ ಆಗಿರುವುದು ಕೂಡ ಬಿಜೆಪಿಗೆ ನೆರವಾಗಲಿದೆ. ಬಿಜೆಪಿಯು ಈ ನಿರ್ಧಾರದ ಮೂಲಕ ನಾಲ್ಕು ಪ್ರಬಲ ಜಾತಿ ಗುಂಪುಗಳನ್ನು ಕೇಂದ್ರೀಕರಿಸಲು ಪ್ರಯತ್ನಿಸಿದೆ. ಈ ಬದಲಾವಣೆಗಳು ಪ್ರತಿಪಕ್ಷಗಳ ಜಾತಿ ಗಣತಿಯ ತಂತ್ರವನ್ನು ಎದುರಿಸಲು ಬಿಜೆಪಿಗೆ ಸಹಾಯ ಮಾಡುತ್ತವೆ. ಇದು 2024 ರ ಸಾರ್ವತ್ರಿಕ ಚುನಾವಣೆಗೆ ಎಲ್ಲಾ ಸಿದ್ಧತೆಯಾಗಿದೆ ಎಂದು ಅವರು ಹೇಳಿದ್ದಾರೆ.

ʼʼಲೋಕಸಭೆ ಚುನಾವಣೆಯ ಸಮಯದಲ್ಲಿ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಪುಟಿದೇಳಲು ಕಷ್ಟವಾಗುವಂತೆ ಮಾಡಲು ಛತ್ತೀಸ್‌ಗಢದಲ್ಲಿಯೂ ಬಿಜೆಪಿ ಇದೇ ರೀತಿಯ ಜಾತಿ ಸಮತೋಲನದ ಮೊರೆಹೋಗುತ್ತಿದೆʼʼ ಎಂದು ಸಿಸೋಡಿಯಾ ಹೇಳಿದರು.

Read More
Next Story