ಗಾಜಾದಲ್ಲಿ  6 ವಾರ  ಕದನ ವಿರಾಮಕ್ಕೆ ಸಲಹೆ
x

ಗಾಜಾದಲ್ಲಿ 6 ವಾರ ಕದನ ವಿರಾಮಕ್ಕೆ ಸಲಹೆ


ವಾಷಿಂಗ್ಟನ್, ಮಾ. 4- ಇಸ್ರೇಲ್ ಸರ್ಕಾರ ಕನಿಷ್ಠ ಆರು ವಾರ ಕಾಲ ಗಾಜಾದಲ್ಲಿ ಕದನ ವಿರಾಮ ಘೋಷಿಸಬೇಕೆಂದು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಲಹೆ ನೀಡಿದ್ದಾರೆ.

ನಾಗರಿಕ ಹಕ್ಕುಗಳ ಆಂದೋಲನದ 59 ನೇ ವಾರ್ಷಿಕೋತ್ಸವದ ಅಂಗವಾಗಿ ಅಲಬಾಮಾದ ಸೆಲ್ಮಾದಲ್ಲಿ ಮಾತನಾಡಿ ಕದನ ವಿರಾಮದ ಸಲಹೆ ನೀಡಿದರು.

ʻಹಮಾಸ್ ಇಸ್ರೇಲ್ ಜನರಿಗೆ ಬೆದರಿಕೆ ಒಡ್ಡುವುದನ್ನು ನಿಲ್ಲಿಸಬೇಕು ಮತ್ತು ಕನಿಷ್ಠ ಆರು ವಾರ ಕದನ ವಿರಾಮ ಘೋಷಿಸಬೇಕು. ಇಸ್ರೇಲ್ ಹೆಚ್ಚು ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಮತ್ತು ಪ್ಯಾಲೇಸ್ಟಿನಿಯನ್ ಜನರ ಘನತೆ, ಸ್ವಾತಂತ್ರ್ಯ ಮತ್ತು ಸ್ವ-ನಿರ್ಣಯದ ಹಕ್ಕನ್ನು ಗೌರವಿಸಲು ಇದು ಅನುವು ಮಾಡಿಕೊಡುತ್ತದೆ ʼಎಂದು ಭಾರತೀಯ ಸಂಜಾತೆ ಹೇಳಿದರು.

ʻಕದನ ವಿರಾಮ ಬೇಕು ಎಂದು ಹಮಾಸ್ ಹೇಳಿದೆ. ಕದನ ವಿರಾಮ ಘೋಷಿಸೋಣ. ಒತ್ತೆಯಾಳುಗಳನ್ನು ಅವರ ಕುಟುಂಬಗಳೊಂದಿಗೆ ಸೇರಿಸೋಣ. ಮತ್ತು ಗಾಜಾದ ಜನರಿಗೆ ತಕ್ಷಣದ ಪರಿಹಾರ ನೀಡೋಣ, ʼಎಂದು ಹ್ಯಾರಿಸ್ ಹೇಳಿದರು.

ಭಾರತೀಯ-ಅಮೆರಿಕನ್ ಕಾಂಗ್ರೆಸ್‌ ಸದಸ್ಯೆ ಪ್ರಮೀಳಾ ಜಯಪಾಲ್, ಕರೆಯನ್ನು ಸ್ವಾಗತಿಸಿದರು. ʻಇಸ್ರೇಲಿ ಸರ್ಕಾರ ಸಹಾಯದ ಹರಿವನ್ನು ಗಣನೀಯವಾಗಿ ಹೆಚ್ಚಿಸಬೇಕು. ಗಡಿಯನ್ನು ತೆರೆಯಬೇಕು. ಸಹಾಯ ವಿತರಣೆಗೆ ಯಾವುದೇ ಅನಗತ್ಯ ನಿರ್ಬಂಧಗಳನ್ನು ಹೇರಬಾರದು. ಮೂಲಭೂತ ಸೇವೆಗಳನ್ನು ಪುನಃಸ್ಥಾಪಿಸಿದಲ್ಲಿ ಆಹಾರ, ನೀರು ಮತ್ತು ಇಂಧನ ಅಗತ್ಯವಿರುವವರಿಗೆ ತಲುಪಬಹುದು, ʼ ಎಂದು ಹ್ಯಾರಿಸ್ ಹೇಳಿದರು.

ಇಸ್ರೇಲ್ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ ಎಂದ ಹ್ಯಾರಿಸ್, ʻಅಧ್ಯಕ್ಷ ಜೋ ಬಿಡೆನ್ ಮತ್ತು ತಾವು ಇಸ್ರೇಲಿನ ಭದ್ರತೆಗೆ ಬದ್ಧವಾಗಿದ್ದೇವೆʼ ಎಂದು ಹೇಳಿದರು.

Read More
Next Story