ಟಿವಿ ನಟಿ  ಗರ್ಭಕಂಠದ ಕ್ಯಾನ್ಸರ್‌ಗೆ ಬಲಿ
x

ಟಿವಿ ನಟಿ ಗರ್ಭಕಂಠದ ಕ್ಯಾನ್ಸರ್‌ಗೆ ಬಲಿ


ಮುಂಬೈ, ಮಾ. 8- ʻಜನಕ್ʼ ಮತ್ತು ʻಭಾಭಿʼ ಟಿವಿ ಶೋಗಳಿಂದ ಜನಪ್ರಿಯರಾಗಿದ್ದ ನಟಿ ಡಾಲಿ ಸೋಹಿ(47) ಅವರು ಗರ್ಭಕಂಠದ ಕ್ಯಾನ್ಸರ್‌ನಿಂದಮೃತಪಟ್ಟಿದ್ದಾರೆ.

ನವಿ ಮುಂಬೈನ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ ನಿಧನರಾದರು ಎಂದು ಅವರ ಸಹೋದರ ಮನ್‌ಪ್ರೀತ್ ಹೇಳಿದ್ದಾರೆ.

ಆರು ತಿಂಗಳ ಹಿಂದೆ ಗರ್ಭಕಂಠದ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ʻ ಗರ್ಭಕಂಠದ ಕ್ಯಾನ್ಸರ್ ಕ್ರಮೇಣ ಅವರ ಶ್ವಾಸಕೋಶಕ್ಕೆ ಹರಡಿತು. ಆರೋಗ್ಯ ಹದಗೆಟ್ಟಿದ್ದರಿಂದ ನಿನ್ನೆ ರಾತ್ರಿ ಆಸ್ಪತ್ರೆಗೆ ದಾಖಲಿಸಿದೆವು. ಹಿಂದಿನ ದಿನ(ಗುರುವಾರ) ರಾತ್ರಿ ಸಹೋದರಿ, ನಟಿ ಅಮನ್‌ ದೀಪ್ ಸೋಹಿ ಜಾಂಡೀಸ್‌ನಿಂದ ಡಿವೈ ಪಾಟೀಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರುʼ ಎಂದು ಮನ್‌ಪ್ರೀತ್ ಹೇಳಿದ್ದಾರೆ.

ಡಾಲಿ ಅವರ ಕೆಲವು ಗಮನಾರ್ಹ ಟಿವಿ ಶೋಗಳಲ್ಲಿ ʻಕುಸುಮ್ʼ, ʻಮೇರಿ ಆಶಿಕಿ ತುಮ್ ಸೆ ಹೈʼ, ʻಕುಂಕುಮ್ ಭಾಗ್ಯʼ ಮತ್ತು ʻಪರಿಣೀತಿʼ ಸೇರಿವೆ.

Read More
Next Story