ತೀರ್ಪಿನ ವಿರುದ್ಧ ಟ್ರಂಪ್ ವಾಗ್ದಾಳಿ
x

ತೀರ್ಪಿನ ವಿರುದ್ಧ ಟ್ರಂಪ್ ವಾಗ್ದಾಳಿ


ವಾಟರ್‌ಫೋರ್ಡ್ ಟೌನ್‌ಶಿಪ್ (ಮಿಚಿಗನ್), ಫೆ.18 : ಸಿವಿಲ್ ವಂಚನೆ ವಿಚಾರಣೆಯಲ್ಲಿ 355 ದಶಲಕ್ಷ ಡಾಲರ್ ದಂಡ ವಿಧಿಸಿರುವ ನ್ಯಾಯಾಧೀಶರ ವಿರುದ್ಧ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.

ಟ್ರಂಪ್‌ ಪ್ರಚಾರದಲ್ಲಿ ತೊಡಗಿರುವಾಗಲೇ ಅವರ ವಿರುದ್ಧ ಪ್ರಕರಣಗಳ ದೀರ್ಘ ಪಟ್ಟಿ ಇದೆ. ಮಿಚಿಗನ್‌ ನ್ಯಾಯಾಲಯ ವಿಧಿಸಿರುವ ದಂಡ ಬಡ್ಡಿಯೊಂದಿಗೆ ಅರ್ಧ ಶತಕೋಟಿ ಡಾಲರ್‌ ಮೀರಬಹುದು.

ಟ್ರಂಪ್ ಅವರು ಅಧ್ಯಕ್ಷ ಜೋ ಬಿಡೆನ್ ವಿರುದ್ಧದ ಸಾರ್ವತ್ರಿಕ ಚುನಾವಣೆ ಸ್ಪರ್ಧೆ ನವೆಂಬರ್‌ನಲ್ಲಿ ನಿರ್ಣಾಯಕವಾಗುವ ನಿರೀಕ್ಷೆಯಿದೆ. 2020 ರಲ್ಲಿ ಬಿಡೆನ್ ಮಿಚಿಗನ್‌ ನಲ್ಲಿ ಟ್ರಂಪ್ ಅವರನ್ನುಕಡಿಮೆ ಅಂತರದಲ್ಲಿ ಸೋಲಿಸಿದ್ದರು. ಬಿಡೆನ್‌ ಬಗ್ಗೆ ದೇಶದಲ್ಲಿ ಅಸಮಾಧಾನ ಇದೆ. ವಿಶೇಷವಾಗಿ, ಇಸ್ರೇಲ್-ಹಮಾಸ್ ಯುದ್ಧದಲ್ಲಿ ಇಸ್ರೇಲ್‌ಗೆ ನೀಡಿದ ಬೆಂಬಲದ ಬಗ್ಗೆ ಅರಬ್-ಅಮೆರಿಕನ್ ಮತದಾರರು ಕೋಪಗೊಂಡಿದ್ದಾರೆ.

ಟ್ರಂಪ್ ಏತನ್ಮಧ್ಯೆ, 2016 ರಲ್ಲಿ ತಮ್ಮ ಗೆಲುವಿಗೆ ನಿರ್ಣಾಯಕರಾಗಿದ್ದ ಕಾರ್ಮಿಕರು ಮತ್ತು ಯೂನಿಯನ್‌ ಗಳ ಮತದಾರರನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಶನಿವಾರ ಅವರು ಆಟೋ ಕಾರ್ಮಿಕರೊಟ್ಟಿಗೆ ಸಂವಾದ ನಡೆಸಿ, ಎಲೆಕ್ಟ್ರಿಕ್ ವಾಹನ ಬಳಕೆ ಆದೇಶದ ವಿರುದ್ಧ ವಾಗ್ದಾಳಿ ನಡೆಸಿದರು. ಟ್ರಂಪ್ ತಮ್ಮ ಕುಂದುಕೊರತೆಗಳ ಮೇಲೆ ಹೆಚ್ಚು ಗಮನಹರಿಸಿದ್ದಾರೆ. ತಮ್ಮ ವಿರುದ್ಧದ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳ ಬಗ್ಗೆ 15 ನಿಮಿಷ ಕಿಡಿಕಾರಿದರು. ಶುಕ್ರವಾರ ನ್ಯೂಯಾರ್ಕ್‌ನ ನ್ಯಾಯಾಧೀಶರು,ʻ ಟ್ರಂಪ್ ಅವರು ತಮ್ಮ ಸಂಪತ್ತಿನ ಬಗ್ಗೆ ವರ್ಷಗಳಿಂದ ಸುಳ್ಳು ಹೇಳಿದ್ದಾರೆ. ಬ್ಯಾಂಕ್‌ಗಳು, ವಿಮಾದಾರರು ಮತ್ತು ಇತರರನ್ನು ವಂಚಿಸಿ, ತಮ್ಮ ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆʼ ಎಂದು ಆದೇಶಿಸಿದರು.

ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಲೇಖಕರಾದ ಇ. ಜೀನ್ ಕ್ಯಾರೊಲ್ ಅವರ ಮಾನಹಾನಿ ಮಾಡಿದ್ದಕ್ಕೆ ಟ್ರಂಪ್ ಅವರಿಗೆ 83.3 ದಶಲಕ್ಷ ಡಾಲರ್‌ ದಂಡ ವಿಧಿಸಿದ ಕೆಲವು ನಂತರ ಮಿಚಿಗನ್‌ ನ್ಲಾಯಾಲಯದ ತೀರ್ಪು ಬಂದಿದೆ. ಅರ್ಧ ಶತಕೋಟಿ ಡಾಲರ್‌ ಮೊತ್ತವನ್ನು ಟ್ರಂಪ್ ಪಾವತಿಸಲು ಶಕ್ತರಿರುವರೇ ಅಥವಾ ಇಲ್ಲವೇ ಎಂಬುದು ಅಸ್ಪಷ್ಟವಾಗಿದೆ.

ʻಈ ದೇಶದಲ್ಲಿ ಹಿಂದೆಂದೂ ನೋಡಿರದ ಕಾನೂನುಬಾಹಿರ ಮತ್ತು ಅಸಂವಿಧಾನಿಕ ತೀರ್ಪು. ನಮ್ಮ ಕಾನೂನುಗಳಿಗೆ ಬೆಂಕಿ ಹಚ್ಚುತ್ತದೆʼ ಎಂದು ಟೀಕಿಸಿದ್ದ ಟ್ರಂಪ್‌, ನ್ಯಾಯಾಧೀಶ ಆರ್ಥರ್ ಎಂಗೊರಾನ್ ʻವಕ್ರʼ ಮತ್ತು ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ʻಹುಚ್ಚʼ, ಪ್ರಕರಣ ದಾಖಲಿಸಿದ ಜೇಮ್ಸ್, ʻಮೂರ್ಖʼ ಹಾಗೂ ವಿಶೇಷ ಸಲಹೆಗಾರ ಜ್ಯಾಕ್ ಸ್ಮಿತ್ ಅವರನ್ನು ʻಪ್ರಾಣಿʼ ಎಂದು ದೂಷಿಸಿದರು. ತಮ್ಮ ಚುನಾವಣಾ ಭವಿಷ್ಯವನ್ನು ಹಾಳುಮಾಡಲು ಬಿಡೆನ್ ಮತ್ತು ಇತರ ಡೆಮೋಕ್ರಾಟ್‌ಗಳ ಸಂಘಟಿತ ಪ್ರಯತ್ನದ ಭಾಗವಾಗಿ ನಾಲ್ಕು ಪ್ರತ್ಯೇಕ ನ್ಯಾಯ ವ್ಯಾಪ್ತಿಯಲ್ಲಿ ಆರೋಪಗಳನ್ನು ಹೊರಿಸಲಾಗುತ್ತಿದೆ ಎಂದು ನಂಬಿಸಲು ಟ್ರಂಪ್‌ ಪ್ರಯತ್ನಿಸುತ್ತಿದ್ದಾರೆ.

Read More
Next Story