ಷಹಜಹಾನ್ ಶೇಖ್ ಸಿಬಿಐ ಕಸ್ಟಡಿ ವಿಸ್ತರಣೆ
ಕೋಲ್ಕತ್ತಾ- ಶೇಖ್ ಷಹಜಹಾನ್ ಅವರ ಸಿಬಿಐ ಕಸ್ಟಡಿಯನ್ನು ನಾಲ್ಕು ದಿನ ವಿಸ್ತರಿಸಲಾಗಿದೆ. ಪಶ್ಚಿಮ ಬಂಗಾಳದ ಸಂದೇಶಖಲಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳ ಮೇಲೆ ಗುಂಪು ದಾಳಿ ನಡೆಸಿದ ಪ್ರಕರಣದಲ್ಲಿ ಷಹಜಹಾನ್ ಪ್ರಮುಖ ಆರೋಪಿಯಾಗಿದ್ದಾರೆ. ಭೂಹಗರಣ ಮತ್ತು ಲೈಂಗಿಕ ದೌರ್ಜನ್ಯದ ಆರೋಪವನ್ನೂ ಎದುರಿಸುತ್ತಿದ್ದಾರೆ.
ಸಿಬಿಐ ಮಾರ್ಚ್ 6 ರಂದು ಕಲ್ಕತ್ತಾ ಹೈಕೋರ್ಟ್ ಆದೇಶದ ಆಧಾರದ ಮೇಲೆ ಷಹಜಹಾನ್ ಕಸ್ಟಡಿಯನ್ನು ಪಡೆದುಕೊಂಡಿತು. ಭಾನುವಾರ (ಮಾರ್ಚ್ 10), ಪಶ್ಚಿಮ ಬಂಗಾಳದ ಬಸಿರ್ಹತ್ ನ್ಯಾಯಾಲಯವು ಷಹಜಹಾನ್ ಅವರ ಸಿಬಿಐ ಕಸ್ಟಡಿಯನ್ನು ವಿಸ್ತರಿಸಿದೆ.
ಬಿಗಿ ಭದ್ರತೆಯಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮಾ. 14ರಂದು ಮತ್ತೆ ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿದೆ.
Next Story